JDSನಲ್ಲಿ ವೈಎಸ್‌ವಿ ದತ್ತಾಗೆ ಹೊಸ ಹೊಣೆ – 5 ಶಾಸಕರು, 5 ಎಂಎಲ್‌ಸಿಗಳ ತಂಡಕ್ಕೆ ನೇತೃತ್ವ

ಮಾಜಿ ಶಾಸಕ ವೈ.ಎಸ್‌.ವಿ.ದತ್ತಾ (YSV Datta) ಅವರಿಗೆ ಜೆಡಿಎಸ್‌ನಲ್ಲಿ (Janatadal Secular JDS) ಹೊಸ ಜವಾಬ್ದಾರಿಯನ್ನು ನೀಡಲಾಗಿದೆ.

ವೈಎಸ್‌ವಿ ದತ್ತಾ (YSV Datta) ಅವರನ್ನು ಜೆಡಿಎಸ್‌ನ (JDS) ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿ ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿಯವರು (H.D.Kumarswamy) ಆದೇಶ ಹೊರಡಿಸಿದ್ದಾರೆ.

ಟಿ.ನರಸೀಪುರ ಮಾಜಿ ಶಾಸಕ ಅಶ್ವಿನ್‌ ಕುಮಾರ್‌, ನಾಗಮಂಗಲ ಮಾಜಿ ಶಾಸಕ ಸುರೇಶ್‌ ಗೌಡ, ಶ್ರವಣಬೆಳಗೊಳ ಶಾಸಕ ಸಿ.ಎನ್‌.ಬಾಲಕೃಷ್ಣ, ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ವಿಧಾನಪರಿಷತ್‌ ಸದಸ್ಯ ಟಿ.ಎನ್‌.ಜವರಾಯಿಗೌಡ, ಶ್ರೀರಂಗಪಟ್ಟಣ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಶಾಸಕರಾದ ಭೀಮನಗೌಡ ಪಾಟೀಲ್‌, ಜಿ.ಡಿ.ಹರೀಶ್‌ಗೌಡ, ಸ್ವರೂಪ್‌ ಪ್ರಕಾಶ್ ಮತ್ತು ಎಂ.ಆರ್‌.ಮಂಜುನಾಥ್‌ ಅವರನ್ನು ಸಮಿತಿ ಸದಸ್ಯರನ್ನಾಗು ನೇಮ ಮಾಡಲಾಗಿದೆ.

ಎಂಎಲ್‌ಸಿಗಳಾದ ಕೆ.ವಿವೇಕಾನಂದ, ಸಿ.ಎನ್‌.ಮಂಜೇಗೌಡ, ಡಾ.ಸೂರಜ್‌ ರೇವಣ್ಣ ಮತ್ತು ಜೆಡಿಎಸ್‌ ಮುಖಂಡ ಸುಧಾಕರ್‌.ಎಸ್‌.ಶೆಟ್ಟಿ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ.

ಪಕ್ಷದ ಕಾರ್ಯಚಟುವಟಿಕೆ, ಕಾರ್ಯಕಲಾಪ, ಸಂಘಟನೆ ಒಳಗೊಂಡಂತೆ ಹಲವಾರು ಪ್ರಮುಖ ವಿಷಯಗಳನ್ನು ಸಾರ್ವಜನಿಕವಾಗಿ ಪ್ರಚಾರಪಡಿಸಲು ಮತ್ತು ಮಾಧ್ಯಮದವರೊಂದಿಗೆ ಸಂಪರ್ಕ ಸಾಧಿಸುವ ಜವಾಬ್ದಾರಿಯನ್ನು ವೈಎಸ್‌ವಿ ದತ್ತಾ ನೇತೃತ್ವದ ಪ್ರಚಾರ ಸಮಿತಿಗೆ ನೀಡಲಾಗಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಚಪ್ಪಲಿ ವೀರ ರಾಜೀವ್‌ ಗೌಡನಿಗೆ ಜಾಮೀನು..!

ಶಿಡ್ಲಘಟ್ಟ ನಗರಸಭೆ ಆಯುಕ್ತೆಗೆ ಬೆದರಿಕೆಯೊಡ್ಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಕೇಸ್ ನಲ್ಲಿ...

ಬಿಗ್ ಬಾಸ್ ಸ್ಪಾನ್ಸರ್ – ಉದ್ಯಮಿ C.J.ರಾಯ್ ಆತ್ಮಹತ್ಯೆ

ಬೆಂಗಳೂರಿನ ಖ್ಯಾತ ಉದ್ಯಮಿ ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿಜೆ ರಾಯ್ ಶುಕ್ರವಾರ...

BJPಯ ಅಶ್ವಥ್ ನಾರಾಯಣಗೆ 1 ವರ್ಷ ಜೈಲು- ಭೂಕಬಳಿಕೆ ಕೇಸ್ ನಲ್ಲಿ ಜೈಲು ಪಾಲಾದ BJP ಮಾಜಿ MLC..!

ಬಿಜೆಪಿ ಮಾಜಿ ಎಂಎಲ್ ಸಿ ಅಶ್ವಥ್ ನಾರಾಯಣಗೆ ಒಂದು ವರ್ಷ ಜೈಲು...

ಬೆಂಗಳೂರಲ್ಲಿ ಪವರ್ ಕಟ್- ಈ ಏರಿಯಾಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೂ ಕರೆಂಟ್ ಇರಲ್ಲ..!

ಬೆಂಗಳೂರಿನ 100ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಜನವರಿ 21ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ....