ಬೆಂಗಳೂರಿನ ಖ್ಯಾತ ಉದ್ಯಮಿ ಕಾನ್ಫಿಡೆಂಟ್ ಗ್ರೂಪ್ ಚೇರ್‌ಮೆನ್ ಸಿಜೆ ರಾಯ್ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆದಾಯ ತೆರಿಗೆ ಇಲಾಖೆಯ ಪದೇ ಪದೇ ಆದ ದಾಳಿಗಳಿಂದ ಹೆದರಿ ಈ ನಿರ್ಧಾರ ತೆಗೆದುಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರಿನ ಲಾಂಗ್ ಫರ್ಡ್ ರಸ್ತೆಯ ತಮ್ಮ ನಿವಾಸದಲ್ಲಿ ಉದ್ಯಮಿ ರಾಯ್ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ.
ರಾಯ್ ಅವರ ಮೇಲೆ ಇತ್ತೀಚೆಗೆ ಸಾಕಷ್ಟು ಬಾರಿ ಐಟಿ ದಾಳಿ ನಡೆದಿದ್ದವು. ಸಾಕಷ್ಟು ಬಾರಿ ಐಟಿಅಧಿಕಾರಿಗಳು ವಿಚಾರಣೆಯ ಸಲುವಾಗಿ ಇವರ ಕುಟುಂಬಸ್ಥರನ್ನೂ ವಿಚಾರಣೆಗೆ ಒಳಪಡಿಸಿದ್ದರು.
ಇನ್ನು ಇಂದು ಮಧ್ಯಾಹ್ನವೂ ಕೂಡ ಐಟಿ ಅಧಿಕಾರಿಗಳು ಸಿ.ಜೆ ರಾಯ್ ಅವರ ಕಚೇರಿಗೆ ಭೇಟಿ ನೀಡಿ ವಿಚಾರಣೆಯನ್ನೂ ನಡೆಸಿದ್ದರು ಅಂತ ತಿಳಿದು ಬಂದಿದೆ.
ಇದಾದ ಕೆಲವೇ ಹೊತ್ತಿನಲ್ಲಿ ರಾಯ್ ಅವರು ರಿವಾಲ್ವರ್ ನಿಂದ ತಮ್ಮ ತಲೆಗೆ ಶೂಟ್ ಮಾಡಿಕೊಂಡು ಆತ್ಮತ್ಯೆಗೆ ಶರಣಾಗಿದ್ದಾರೆ. ಇದೀಗ ಸಿ.ಜೆ ರಾಯ್ ಅವರ ಆತ್ಮಹತ್ಯೆ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕೇರಳ ಮೂಲದ ರಾಯ್ ಕಾನ್ಫಿಡೆಂಟ್ ಗ್ರೂಪ್ ಎಂಬ ಪ್ರಮುಖ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಂಪನಿಯ ಸಂಸ್ಥಾಪಕರಾಗಿದ್ದರು.
2005ರಲ್ಲಿ ಆರಂಭವಾದ ಈ ಸಂಸ್ಥೆ, 65ಕ್ಕೂ ಹೆಚ್ಚು ಐಷಾರಾಮಿ ಯೋಜನೆಗಳನ್ನು ಪೂರ್ಣಗೊಳಿಸಿದೆ. ವಸತಿ ಅಪಾರ್ಟ್ಮೆಂಟ್, ವಿಲ್ಲಾಗಳು, ವಾಣಿಜ್ಯ ಸಂಕೀರ್ಣಗಳು, ಶಿಕ್ಷಣ, ಆತಿಥ್ಯ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ಕಾನ್ಫಿಡೆಂಟ್ ಗ್ರೂಪ್ ಕಾರ್ಯನಿರ್ವಹಿಸುತ್ತಿದೆ.
ಕನ್ನಡ, ಮಲಯಾಳಂನ ಸಾಕಷ್ಟು ರಿಯಾಲಿಟಿ ಶೋಗಳು ಮತ್ತು ಸೈಮಾ ಅವಾರ್ಡ್ಸ್ ನಂತಹ ಕಾರ್ಯಕ್ರಮಗಳಿಗೂ ಕೂಡ ಸಿ.ಜೆ ರಾಯ್ ಒಡೆತನದ ಕಾನ್ಫಿಡೆಂಡ್ ಗ್ರೂಪ್ ಸಂಸ್ಥೆ ಸ್ಪಾನ್ಸರ್ ಶಿಪ್ ಮಾಡಿತ್ತು.