ಬಿಜೆಪಿ ಮಾಜಿ ಎಂಎಲ್ ಸಿ ಅಶ್ವಥ್ ನಾರಾಯಣಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಬೆಂಗಳೂರಿನ ಬೂ ಕಬಳಿಕೆ ನ್ಯಾಯಾಲಯ ಈ ಆದೇಶ ಹೊರಡಿಸಿದ್ದು, ಬೆಂಗಳೂರಿನಲ್ಲಿ ಅಕ್ರಮ ಲೇಔಟ್ ಮಾಡಿದ್ದಂತಹ ಕೇಸ್ ನ ಅಡಿಯಲ್ಲಿ ಈ ಶಿಕ್ಷೆ ಪ್ರಕಟಿಸಲಾಗಿದೆ.
ಕೃಷಿ ಭೂಮೀ ಪರಿವರ್ತನೆ ಮಾಡದೆ ಖಾಲಿ ಸೈಟ್ ಮಾಡಿ ಮಾರಾಟಮಾಡಲಾಗಿತ್ತು. ಮೈಸೂರಿನ ಕಾವ್ಯಶ್ರೀ ಎಂಬುವರು ಈ ಕುರಿತು ದೂರು ದಾಖಲಿಸಿದ್ದರು. ರೈತರ 4 ಎಕರೆ 30ಗುಂಟೆ ಕೃಷಿ ಜಮೀನನ್ನು ಕ್ರಯ ಪಡೆದುಕೊಂಡು, ಸೈಟ್ ಮಾಡಿ ಮಾರಾಟ ಮಾಡಿದ್ದರು.
ಕೆಂಗೇರಿ ಹೋಬಳಿ ವ್ಯಾಪ್ತಿಯ ರಾಮಸಂದ್ರ ಗ್ರಾಮದ ಕೃಷಿ ಭೂಮಿ ಸರ್ವೆ ನಂಬರ್ 100/2ರ ಜಮೀನು ಕ್ರಯಕ್ಕೆ ಪಡೆದಿದ್ದ ಅಶ್ವಥ್ ನಾರಾಯಣ, ಭೂ ಪರಿವರ್ತನೆಯನ್ನೇ ಮಾಡದೇ ಸೈಟ್ ಗಳನ್ನ ಮಾಡಿ ಮಾರಾಟ ಮಾಡಿದ್ದರು.
ಇನ್ನು 10 ಸಾವಿರ ದಂಡ ವಿಧಿಸಿರುವ ಕೋರ್ಟ್, ದೂರುದಾರೆ ಕಾವ್ಯಶ್ರಿಯವರಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಸೂಚಿಸಿದೆ.
ಅಶ್ವತ್ಥ ನಾರಾಯಣ ಅವರು ಆ ಜಮೀನಿನಲ್ಲಿ ನಿರ್ಮಾಣ ಮಾಡಿದ್ದ ಲೇಔಟ್‌ಗೆ ಸಂಬಂಧಪಟ್ಟ ಪ್ರಾಧಿಕಾರವು ಅನುಮೋದನೆ ನೀಡಿರಲಿಲ್ಲ. ಅಶ್ವತ್ಥ ನಾರಾಯಣ ಅವರು ಕಾವ್ಯಶ್ರೀ ಅವರಿಗೆ ಮಾರಿದ್ದ ನಿವೇಶನದ ವಿಸ್ತೀರ್ಣದಲ್ಲೂ ವಂಚಿಸಿದ್ದರು.
2010 ರಿಂದ 2016 ವರೆಗೂ ಕರ್ನಾಟಕ ವಿಧಾನ ಪರಿಷತ್ತು ಸದ್ಯರಾಗಿದ್ದ ಅಶ್ವತ್ಥ ನಾರಾಯಣ ಬೆಂಗಳೂರು ಬಿಜೆಪಿ ಪ್ರಮುಖ ಮುಖಂಡರಾಗಿದ್ದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಗೂ ಕೆಲ ವರ್ಷ ನೇಮಕಾವಿದ್ದರು.


