ವರದಿ: ಅಕ್ಷಯ್ ಕುಮಾರ್.ಯು. ಮುಖ್ಯ ಸಂಪಾದಕರು, ಪ್ರತಿಕ್ಷಣ
ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister) ಅವರು ತಮ್ಮ ತವರೂರು ಮೈಸೂರು ನಗರದಲ್ಲಿ (Mysuru City) ಕಟ್ಟಿಸಿಕೊಳ್ಳುತ್ತಿರುವ ಹೊಸ ಮನೆಯ ಪಕ್ಕದಲ್ಲೇ ನಡೆದಿರುವ ಬಹುಕೋಟಿ ರೂಪಾಯಿ ಮೊತ್ತದ ನಾಗರಿಕ ನಿವೇಶನ (CA Site) ಹಗರಣದ ಮತ್ತೊಂದು ಸ್ಫೋಟಕ ದಾಖಲೆ ಆಧರಿತ ಮತ್ತೊಂದು ತನಿಖಾ ವರದಿಯನ್ನು ಪ್ರತಿಕ್ಷಣ (Pratikshana) ಪ್ರಕಟಿಸುತ್ತಿದೆ.
ನಿರ್ದಿಷ್ಟ ಉದ್ದೇಶಕ್ಕಾಗಿ ಪಡೆಯಲಾದ ನಾಗರಿಕ ನಿವೇಶನವನ್ನು (Civic Amenity Site) ಆ ಉದ್ದೇಶಕ್ಕಷ್ಟೇ ಬಳಸಿಕೊಳ್ಳಬೇಕು ಮತ್ತು ಇತರರಿಗೆ ಪರಭಾರೆ ಅಥವಾ ಉಪ ಗುತ್ತಿಗೆ (Sub Lease) ಅಥವಾ ಉಪ ಬಾಡಿಗೆ (Sub Let) ನೀಡಬಾರದು ಎಂಬ ಕಠಿಣ ಷರತ್ತುಗಳನ್ನು ನಿವೇಶನ (CA Site) ಹಂಚಿಕೆ ವೇಳೆ ವಿಧಿಸಲಾಗಿತ್ತು.
ಆದರೆ ಶೈಕ್ಷಣಿಕ ಉದ್ದೇಶಕ್ಕಾಗಿ 1984ರಲ್ಲಿ ಹುಣಸೂರು (Hunsur) ವಿಳಾಸ ಹೊಂದಿರುವ ವಿಶ್ವಶಾಂತಿ ಸಂಸ್ಥೆಯು (Vishwashanti Samsthe) ತಾನು ಸ್ವಾಧೀನಾನುಭವ ಪಡೆದಿದ್ದ ನಾಗರಿಕ ನಿವೇಶನವನ್ನು (Civic Amenity Site) ಮೈಸೂರಿನ (Mysuru) ಸಿಗ್ಮಾ ಲೈಫ್ ಕೇರ್ ಪ್ರೈವೇಟ್ ಲಿಮಿಟೆಡ್ (Sigma Healthcare Pvt. Ltd) ಎಂಬ ಖಾಸಗಿ ಕಂಪನಿಗೆ ಬಾಡಿಗೆ ನೀಡುವ ಸಂಬಂಧ 2012ರಲ್ಲಿ ಒಪ್ಪಂದ ಮಾಡಿಕೊಂಡಿದೆ.
(ಪ್ರತಿಕ್ಷಣ ಸುದ್ದಿಗಾಗಿ ವಾಟ್ಸಾಪ್ ನಂಬರ್ 97411 83147 ಅಥವಾ pratikshananews@gmail.com ನ್ನು ಸಂಪರ್ಕಿಸಿ)
ನಾಗರಿಕ ನಿವೇಶನಗಳ (CA Sites) ಹಂಚಿಕೆ, ಬಳಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವೇ (Karnataka State Government) ಜಾರಿಗೊಳಿಸಿರುವ ಕಠಿಣ ನಿಯಮಗಳನ್ನೇ ಉಲ್ಲಂಘಿಸಿ ವಿಶ್ವಶಾಂತಿ ಸಂಸ್ಥೆ (Vishwashanti Samsthe) ಮತ್ತು ಸಿಗ್ಮಾ ಲೈಫ್ ಕೇರ್ ಪ್ರೈವೇಟ್ ಲಿಮಿಟೆಡ್ ಕಂಪನಿ (Sigma Health Care Pvt Ltd) ಅಕ್ರಮ ವ್ಯವಹಾರ ನಡೆಸಿವೆ.

2012ರ ಜೂನ್ 21ರಂದು ಮಾಡಿಕೊಳ್ಳಲಾದ ಈ ಬಾಡಿಗೆ ಕರಾರು ಒಪ್ಪಂದ ಪ್ರಕಾರ ಬರೋಬ್ಬರೀ 30 ವರ್ಷಗಳವರೆಗೆ ವಿಶ್ವಶಾಂತಿ ಸಂಸ್ಥೆಯು (Vishwa Shanti Samsthe) ತಾನೂ ಕಾನೂನಾತ್ಮಕವಾಗಿ ಹಕ್ಕನ್ನೇ ಹೊಂದಿರದ, ಆದರೆ ತನಗೆ ಮೈಸೂರು ನಗರಾಭಿವೃದ್ಧಿ ಮಂಡಳಿ (Mysuru City Improvement Trust) (ಈಗಿನ MUDA) ಹಂಚಿಕೆ ಮಾಡಿದ್ದ ನಾಗರಿಕ ನಿವೇಶನವನ್ನು (CA Site) 2012ರ ಜನವರಿ 24 ರಿಂದ 2040ರ ಜನವರಿ 23ರವರೆಗೆ ಸಿಗ್ಮಾ ಲೈಫ್ ಕೇರ್ ಪ್ರೈವೇಟ್ ಲಿಮಿಟೆಡ್‌ಗೆ (Sigma Healthcare Pvt Ltd.) ಉಪ ಗುತ್ತಿಗೆ (Sub-Lease) ನೀಡಿದೆ.
ವಿಶ್ವಶಾಂತಿ ಸಂಸ್ಥೆಯ (Vishwa Shanti Samsthe) ಪರವಾಗಿ ಅದರ ಕಾರ್ಯದರ್ಶಿ ಬಿ.ಹನುಮಂತಯ್ಯ (B.Hanumanthaiah) ಹಾಗೂ ಸಿಗ್ಮಾ ಲೈಫ್ ಕೇರ್ ಪ್ರೈವೇಟ್ ಲಿಮಿಟೆಡ್‌ನ (Sigma Healthcare Pvt Ltd.) ಪರವಾಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶ ಜ್ಞಾನಶಂಕರ್ (MD Gnanashankar) ಉಪ ಗುತ್ತಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಈ ಉಪ ಗುತ್ತಿಗೆ ಕರಾರಿನ ಪ್ರಕಾರ ಮೊದಲ ಕಂತಿನ ರೂಪದಲ್ಲಿ ಸಿಗ್ಮಾ ಲೈಫ್ ಕೇರ್ ಪ್ರೈವೇಟ್ ಲಿಮಿಟೆಡ್ ಕಂಪನಿಯು (Sigma Healthcare Pvt Ltd.) ವಿಶ್ವಶಾಂತಿ ಸಂಸ್ಥೆಗೆ (Vishwa Shanti Samsthe) 20 ಲಕ್ಷ ರೂಪಾಯಿ ಮೊತ್ತವನ್ನು ಪಾವತಿಸಿತ್ತು. 2ನೇ ಕಂತಿನ ಭಾಗವಾಗಿ 30 ಲಕ್ಷ ರೂಪಾಯಿಯನ್ನು ಪಾವತಿಸಬೇಕಿತ್ತು. ಆದರೆ ಈ ಒಟ್ಟು 50 ಲಕ್ಷ ರೂಪಾಯಿ ಮರು ಪಾವತಿಯಾಗದ ಮೊತ್ತ (non refundable) ಎಂದು ಉಪ ಗುತ್ತಿಗೆ ಕರಾರಿನಲ್ಲಿ ಉಲ್ಲೇಖಿಸಿರುವುದು ವಿಶೇಷ.

ಅಲ್ಲದೇ, ಈ 50 ಲಕ್ಷ ರೂಪಾಯಿ ಮೊತ್ತವನ್ನು ಪರವಾನಿಗೆ ಶುಲ್ಕದ ರೂಪದಲ್ಲಿ ಸ್ವೀಕರಿಸಲಾಗುತ್ತಿದೆ ಎಂದೂ ಕರಾರಿನಲ್ಲಿ ಹೇಳಲಾಗಿದೆ.
ಅಷ್ಟೇ ಅಲ್ಲ, ವಿಶ್ವಶಾಂತಿ ಸಂಸ್ಥೆಗೆ (Vishwa Shanti Samsthe) ಈ ನಾಗರಿಕ ನಿವೇಶನವನ್ನು ಮಂಜೂರು ಮಾಡಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ( ಈ ಹಿಂದಿನ ಮೈಸೂರು ನಗರಾಭಿವೃದ್ಧಿ ಮಂಡಳಿ) ನಿವೇಶನದ ಗುತ್ತಿಗೆ ಅವಧಿಯನ್ನು ನವೀಕರಣ ಮಾಡಿದ ಬಳಿಕವಷ್ಟೇ 2ನೇ ಕಂತಿನ ರೂಪದಲ್ಲಿ ಬಾಕಿ ಇರುವ 30 ಲಕ್ಷ ರೂಪಾಯಿಯನ್ನು ಪಾವತಿ ಮಾಡುವಂತೆ ವಿಶ್ವಶಾಂತಿ ಸಂಸ್ಥೆ (Vishwa Shanti Samasthe) ಹಾಗೂ ಸಿಗ್ಮಾ ಲೈಫ್ ಕೇರ್ ಪ್ರೈವೇಟ್ ಲಿಮಿಟೆಡ್ (Sigma Healthcare Pvt Ltd) ಉಪ ಗುತ್ತಿಗೆ ಕರಾರಿನಲ್ಲಿ ಒಪ್ಪಿಕೊಂಡಿದ್ದವು.
ಖಾಸಗಿ ಕಂಪನಿ ಸಿಗ್ಮಾ ಲೈಫ್ ಕೇರ್ ಪ್ರೈವೇಟ್ ಲಿಮಿಟೆಡ್‌ಗೆ (Sigma Healthcare Pvt Ltd) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) (ಈ ಹಿಂದಿನ ಮೈಸೂರು ನಗರಾಭಿವೃದ್ಧಿ ಮಂಡಳಿ) ತನಗೆ ಮಂಜೂರು ನಾಗರಿಕ ನಿವೇಶನವನ್ನು (CA Sites) ಬಾಡಿಗೆ ಕೊಡುವ ಸಂಬಂಧ 2011ರ ಸೆಪ್ಟೆಂಬರ್ 25ರಂದು ವಿಶ್ವಶಾಂತಿ ಸಂಸ್ಥೆಯ (Vishwa Shanti Samasthe) ಕಾರ್ಯದರ್ಶಿ ಬಿ.ಹನುಮಂತಯ್ಯ (B.Hanumanthaiah) ಅವರಿಗೆ ಸಂಸ್ಥೆಯು ಅಧಿಕಾರ ನೀಡಿತ್ತು.

ನಂತರ 2012 ಜೂನ್ 3ರಂದು (ಉಪ ಗುತ್ತಿಗೆ ಕರಾರು ಒಪ್ಪಂದಕ್ಕೂ 15 ದಿನ ಮೊದಲು) ಸಿಗ್ಮಾ ಲೈಫ್ ಕೇರ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳ (Sigma Healthcare Pvt Ltd) ನಿರ್ದೇಶಕರು ಮತ್ತು ವಿಶ್ವಶಾಂತಿ ಸಂಸ್ಥೆ (Vishwa Shanti Samsthe) ನಡುವೆ ಸಭೆಯೂ ನಡೆದಿತ್ತು. ಈ ಸಭೆಯಲ್ಲಿ 288*53 ಚದರ ಅಡಿ ವೀಸ್ತೀರ್ಣ (ಹಂಚಿಕೆ ಮಾಡಲಾಗಿದ್ದ ನಾಗರಿಕ ನಿವೇಶನದ ಭಾಗ)ದಲ್ಲಿ ವಾಣಿಜ್ಯ ಸಂಕೀರ್ಣ (Commercial Complex) ಮತ್ತು ಆಸ್ಪತ್ರೆಯನ್ನು (Hospital) ನಿರ್ಮಿಸುವುದಕ್ಕೆ ಒಪ್ಪಿಕೊಳ್ಳಲಾಗಿತ್ತು.
ಉಪ ಗುತ್ತಿಗೆ ಕರಾರಿನಲ್ಲಿ ಇರುವ ಇತರೆ ಷರತ್ತುಗಳು:
ಉಪ ಗುತ್ತಿಗೆ ನೀಡಲಾಗಿರುವ ಈ ಜಾಗದಲ್ಲಿ ಸಿಗ್ಮಾ ಲೈಫ್ ಕೇರ್ ಪ್ರೈವೇಟ್ ಮಿಲಿಟೆಡ್ ಕಂಪನಿಯು (Sigma Healthcare Pvt Ltd) ಕಟ್ಟಡವನ್ನು ಕಟ್ಟುವುದಕ್ಕೆ ವಿಶ್ವಶಾಂತಿ ಸಂಸ್ಥೆ (Vishwa Shanti Samsthe) ಅನುಮತಿಯನ್ನು ನೀಡಿತ್ತು. ಕಟ್ಟಡವನ್ನು ನಿರ್ಮಿಸಿದ ಬಳಿಕ ಆ ಕಟ್ಟಡವು 2040ರವರೆಗೆ ಸಿಗ್ಮಾದ (Sigma Healthcare Pvt Ltd) ಸ್ವಾಧೀನದಲ್ಲೇ ಇರುತ್ತದೆ ಹೇಳಲಾಗಿದೆ.

ಸಿಗ್ಮಾ ಲೈಫ್ ಕೇರ್ ಪ್ರೈವೇಟ್ ಲಿಮಿಟೆಡ್ ಕಂಪನಿಯು (Sigma Healthcare Pvt Ltd) ತಾನು ನಿರ್ಮಿಸಲಿರುವ ಕಟ್ಟಡದ ವಿಶ್ವಶಾಂತಿ ಸಂಸ್ಥೆಗಾಗಿ (Vishwa Shanti Samsthe) 2ನೇ ಮಹಡಿಯಲ್ಲಿ 8 ಚದರ ಅಡಿ ವೀಸ್ತೀರ್ಣದ ಗೆಸ್ಟ್ ಹೌಸ್‌ನ್ನೂ (Guest House) ನಿರ್ಮಿಸಬೇಕೆಂಬ ಪರಸ್ಪರ ಒಪ್ಪಿತ ಷರತ್ತೂ ಒಳಗೊಂಡಿತ್ತು.
ಆರಂಭದಲ್ಲಿ ಸಿಗ್ಮಾ ಲೈಫ್ ಪ್ರೈವೇಟ್ ಲಿಮಿಟೆಡ್ ಕಂಪನಿಯು (Sigma Healthcare Pvt Ltd) ವಿಶ್ವಶಾಂತಿ ಸಂಸ್ಥೆಗೆ (Vishwa Shanti Samsthe) ಪ್ರತಿ ತಿಂಗಳಿಗೆ 30 ಸಾವಿರ ರೂಪಾಯಿ ಬಾಡಿಗೆಯನ್ನೂ, ಪ್ರತಿ 2 ವರ್ಷಕ್ಕೆ ಶೇಕಡಾ 15ರಷ್ಟು (4,500 ರೂ.) ಬಾಡಿಗೆ ಹೆಚ್ಚಳ ಆಗಲಿದೆ.


