ಬೆಂಗಳೂರಿನ 100ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಜನವರಿ 21ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿಯಿಂದಾಗಿ ಪವರ್ ಕಟ್ ಆಗಲಿದೆ ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜ. 21ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ. ಬೆಂಗಳೂರಿನ ಎಚ್ಆರ್ ಬಿಆರ್ ಲೇಔಟ್, ಕಮ್ಮನಹಳ್ಳಿ, ಹೊರಮಾವು, ಹೆಣ್ಣೂರು, ರಾಮಮೂರ್ತಿನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
ಬೆಸ್ಕಾಂ ಪ್ರಕಟಣೆ ಪ್ರಕಾರ ಎಚ್ಆರ್ ಬಿಆರ್ ಬಡಾವಣೆ 1ನೇ, 2ನೇ ಮತ್ತು 3ನೇ ಬ್ಲಾಕ್, ಕಮ್ಮನಹಳ್ಳಿ ಮುಖ್ಯರಸ್ತೆ, ಸಿಎಂಆರ್ ರಸ್ತೆ, ಬಾಬುಸಾಪಾಳ್ಯ, ಬಾಲಚಂದ್ರ ಬಡಾವಣೆ, ಫ್ಲವರ್ ಗಾರ್ಡನ್, ಎಂಎಂ ಗಾರ್ಡನ್, ಅರ್ಕಾವತಿ ಬಡಾವಣೆ, ಅಂಜನಾದ್ರಿ ಬಡಾವಣೆ, ದಿವ್ಯ ಉನ್ನತಿ ಬಡಾವಣೆ, ಜಿಎನ್ಆರ್ ಗಾರ್ಡನ್, ಚೆಲೆಕರೆ ಗ್ರಾಮ, ಸುಬ್ಬಯ್ಯನ ಪಾಳ್ಯ, ಹೊರಮಾವು, ಮುನಿರೆಡ್ಡಿ ಬಡಾವಣೆ, ವಿಜಯಬ್ಯಾಂಕ್ ಕಾಲೋನಿ, ಶಕ್ತಿನಗರ ಸುತ್ತಮುತ್ತಲೂ ಜ.21ರಂದು ಪವರ್ ಕಟ್ ಮಾಡಲಾಗುತ್ತದೆ.


