ದೆಹಲಿಯ ಕೆಂಪುಕೋಟೆಯಲ್ಲಿ ಸಂಭವಿಸಿರುವ ಕಾರ್ ಬಾಂಬ್ ಸ್ಫೋಟದಲ್ಲಿ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಕೆಂಪುಕೋಟೆ ಮೆಟ್ರೋ ಸ್ಟೇಷನ್ ಬಳಿಕ ಗೇಟ್ ನಂಬರ್ 1ರ ಬಳಿ ನಿಲ್ಲಿಸಿದ್ದ ಕಾರ್ ಸ್ಫೋಟಗೊಂಡಿತ್ತು.
ಸ್ಫೋಟದ ತೀವ್ರತೆಗೆ ಮೃತದೇಹಗಳು ಛಿದ್ರಛಿದ್ರವಾಗಿ ಬಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಪ್ರವಾಸಿಗರೇ ತುಂಬಿರುವ ಈ ಪ್ರದೇಶದಲ್ಲಿ ಕಾರಿನಲ್ಲಿ ಸ್ಫೋಟಗೊಂಡು ಹೊತ್ತಿ ಉರಿದಿರುವುದನ್ನೂ ಹಲವು ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ.
ಸ್ಪೋಟ ಸಂಭವಿಸಿದ ಸ್ಥಳದಿಂದ ಗುರುದ್ವಾರ ಸಿಸ್ ಗಂಜ್ ಸಾಹೀಬ್ ಕೆಲವೇ ಮೀಟರ್ ದೂರ ಇದೆ ಮತ್ತು ಜಾಮೀಯಾ ಮಸೀದಿ 1.1 ಕಿಲೋ ಮೀಟರ್ ದೂರದಲ್ಲಿದೆ.


