ಐಪಿಎಸ್ ಅಧಿಕಾರಿ ಅನ್ಶು ಕುಮಾರ್ (IPS Anshu Kumar) ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ (Parappan Agrahara) ಜೈಲಿನ ಮುಖ್ಯ ಜೈಲು ಅಧೀಕ್ಷಕರಾಗಿ (Chief Superintendent) ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸದ್ಯ ಐಪಿಎಸ್ ಅಧಿಕಾರಿ ಅನ್ಶು ಕುಮಾರ್ ಅವರು ಜೈಲು ಅಧೀಕ್ಷಕರಾಗಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಜೈಲು ಅಧೀಕ್ಷಕ ಹುದ್ದೆಯನ್ನು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (Mandya SP) ಹುದ್ದೆಗೆ ಸಮಾನದ ಹುದ್ದೆ ಎಂದೂ ರಾಜ್ಯ ಸರ್ಕಾರ ತನ್ನ ವರ್ಗಾವಣೆ ಆದೇಶದಲ್ಲಿ ಘೋಷಿಸಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಕೃತ ಕಾಮಿ ಉಮೇಶ್ ರೆಡ್ಡಿ, ಐಸಿಎಸ್ ಉಗ್ರ ಮತ್ತು ಇತರೆ ಕೈದಿಗಳಿಗೆ ಐಷಾರಾಮಿ ಸೌಲಭ್ಯವನ್ನು ಕಲ್ಪಿಸಿರುವ ವೀಡಿಯೋಗಳು ಬಹಿರಂಗವಾದ ಬೆನ್ನಲ್ಲೇ ರಾಜ್ಯ ಸರ್ಕಾರ ಈ ವರ್ಗಾವಣೆಯನ್ನು ಮಾಡಿದೆ.


