ಕಾಂಗ್ರೆಸ್‌ ಶಾಸಕನಿಗೆ ಮತ್ತೊಂದು ಆಘಾತ

ಕರ್ನಾಟಕ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ಗೆ (Congress MLA Satish Sail) ಜಾರಿ ನಿರ್ದೇಶನಾಲಯ (ED) ಮತ್ತೊಂದು ಆಘಾತ ನೀಡಿದೆ. ಶಾಸಕ ಸತೀಶ್‌ ಸೈಲ್‌ಗೆ (Congress MLA Satish Sail) ಸೇರಿದ 21 ಕೋಟಿ ರೂಪಾಯಿ ಮೊತ್ತದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಜಪ್ತಿ ಮಾಡಿಕೊಂಡಿದೆ.

ಉತ್ತರ ಕನ್ನಡ ಜಿಲ್ಲೆಯ (Uttara Kannada) ಕಾರವಾರದಲ್ಲಿರುವ (Karwara) ಬೇಲೆಕೇರಿ (Belekeri Port) ಬಂದರಿನಿಂದ ಕಬ್ಬಿಣದ ಅದಿರಿನ ಕಳ್ಳ ಸಾಗಾಣಿಕೆ (Iron Ore) ಸಂಬಂಧ ಜಾರಿ ನಿರ್ದೇಶನಾಲಯ (ED) ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ (Karwara Congress MLA Satish Sail) ವಿರುದ್ಧ ತನಿಖೆ ನಡೆಸುತ್ತಿದೆ.

ಗೋವಾ ವಿಳಾಸ ಹೊಂದಿರುವ ಶಾಸಕ ಸತೀಶ್‌ ಸೈಲ್‌ ಒಡೆತನದ ಶ್ರೀ ಮಲ್ಲಿಕಾರ್ಜುನ್‌ ಶಿಪ್ಪಿಂಗ್‌ ಪ್ರೈವೇಟ್‌ ಲಿಮಿಟೆಡ್‌ಗೆ ಸೇರಿದ ಆಸ್ತಿಗಳನ್ನೂ ಇಡಿ (ED) ಜಪ್ತಿ ಮಾಡಿಕೊಂಡಿದೆ.

ಕಬ್ಬಿಣದ ಅದಿರು ಕಳ್ಳ ಸಾಗಾಣಿಕೆ ಹಗರಣದಲ್ಲಿ ಸತೀಶ್‌ ಸೈಲ್‌ಗೆ (Congress MLA Satish Sail) ಬೆಂಗಳೂರಿನ (Bengaluru) ಜನಪ್ರತಿನಿಧಿಗಳ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಆ ಶಿಕ್ಷೆಗೆ ಕರ್ನಾಟಕ ಹೈಕೋರ್ಟ್‌ (Karnataka High Court) ತಡೆ ನೀಡಿದೆ. ಇದೇ ಹಗರಣದಲ್ಲಿ ಇಡಿ (ED) ಶಾಸಕ ಸತೀಶ್‌ ಸೈಲ್‌ (Congress MLA Satish Sail) ಅವರನ್ನು ಬಂಧಿಸಿತ್ತು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳ ನೇಮಕ

ಮೂರು ನಗರಸಭೆ, ಮೂವತ್ತೆಂಟು ಪುರಸಭೆ ಹಾಗೂ ಹದಿನೇಳು ಪಟ್ಟಣ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು...

ಪ್ರತಿಕ್ಷಣ Exclusive: ಸ್ಪೀಕರ್‌ ಖಾದರ್‌ ವಿರುದ್ಧ ಅವಿಶ್ವಾಸ ನಿರ್ಣಯ..?

ಅಕ್ಷಯ್‌ ಕುಮಾರ್‌.ಯು. - ಮುಖ್ಯ ಸಂಪಾದಕರು, ಪ್ರತಿಕ್ಷಣ ವಿಧಾನಸಭೆಯ ಸಭಾಧ್ಯಕ್ಷರಾಗಿರುವ (Karnataka Legislative...

ಬಿಹಾರದಲ್ಲಿ ಕಾಂಗ್ರೆಸ್‌ಗೆ ಬಾಸುಂಡೆ – ಸಿದ್ದರಾಮಯ್ಯ-ಯತೀಂದ್ರಗೆ ಹಾಲು ಕುಡಿದಷ್ಟೇ ಖುಷಿ..!

ಅಕ್ಷಯ್‌ ಕುಮಾರ್‌.ಯು. - ಮುಖ್ಯ ಸಂಪಾದಕರು, ಪ್ರತಿಕ್ಷಣ ಬಿಹಾರದಲ್ಲಿ ಕಾಂಗ್ರೆಸ್‌ನ್ನು ಬಿಲ್‌ಕುಲ್‌ ನಂಬದ...

ಹಿರಿ ಖರ್ಗೆ ಅಧ್ಯಕ್ಷ – ಕಾಂಗ್ರೆಸ್‌ ಮತ್ತಷ್ಟು ನಾಶ – ಮಗ ಕಿರಿ ಖರ್ಗೆಗಷ್ಟೇ ಲಾಭ..!

ಅಕ್ಷಯ್‌ ಕುಮಾರ್‌.ಯು. - ಮುಖ್ಯ ಸಂಪಾದಕರು, ಪ್ರತಿಕ್ಷಣ ಕಾಂಗ್ರೆಸ್‌ನವರ ಆದರಣೀಯ ನಾಯಕ ಜವಾಹರ್‌ಲಾಲ್‌...