ಗ್ರೇಟರ್ ಬೆಂಗಳೂರು ಪ್ರಾಧಿಕಾರದ (Greater Bengaluru Authority) ವ್ಯಾಪ್ತಿಯಲ್ಲಿರುವ ಐದು ಮಹಾನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಡಿಸೆಂಬರ್ 15ರೊಳಗೆ ವಾರ್ಡ್‌ವಾರು ಮೀಸಲಾತಿಯ (Ward Wise Reservation) ಅಧಿಸೂಚನೆ ಪ್ರಕಟಿಸುವಂತೆ ಸುಪ್ರೀಂಕೋರ್ಟ್ (Supreme Court) ಕರ್ನಾಟಕ ಸರ್ಕಾರಕ್ಕೆ (State Of Karnataka) ಸೂಚಿಸಿದೆ.
ನವೆಂಬರ್ 15ರೊಳಗೆ ವಾರ್ಡ್‌ವಾರು ಪುನರ್‌ವಿಂಗಡನೆ (Ward Delimitation) ಪೂರ್ಣಗೊಳ್ಳಬೇಕು ಮತ್ತು ಡಿಸೆಂಬರ್ 15ರೊಳಗೆ ವಾರ್ಡ್‌ವಾರು ಮೀಸಲಾತಿ ಅಧಿಸೂಚನೆ ಪ್ರಕಟವಾಗಬೇಕು ಎಂದು ನ್ಯಾಯಮೂರ್ತಿ ಸೂರ್ಯಕಾಂತ್ (JUSTICE SURYA KANT), ನ್ಯಾಯಮೂರ್ತಿ ಉಜ್ವಲ್ ಭುಯಾನ್ (JUSTICE UJJAL BHUYAN), ನ್ಯಾಯಮೂರ್ತಿ ಜಾಯ್‌ಮಲ್ಯ ಬಾಗ್ಚಿ (JUSTICE JOYMALYA BAGCHI )ಅವರಿದ್ದ ಮೂವರು ನ್ಯಾಯಮೂರ್ತಿಗಳ ಸುಪ್ರೀಂಕೋರ್ಟ್ (Supreme Court) ಪೀಠ ಆದೇಶಿಸಿದೆ.
ಮುಂದಿನ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜನವರಿ 12, 2026ಕ್ಕೆ ಮುಂದೂಡಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಗಣತಿ ಹಿನ್ನೆಲೆಯಲ್ಲಿ ಕ್ಷೇತ್ರ ಪುನರ್‌ವಿಂಗಡನೆಗೆ 15 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡುವಂತೆ ಸುಪ್ರೀಂಕೋರ್ಟ್‌ಗೆ (Supreme Court) ಕರ್ನಾಟಕ ಸರ್ಕಾರ (State Of Karnataka) ಮನವಿ ಮಾಡಿಕೊಂಡಿತ್ತು.


