ಮಾಜಿ ಶಾಸಕ ವೈ.ಎಸ್.ವಿ.ದತ್ತಾ (YSV Datta) ಅವರಿಗೆ ಜೆಡಿಎಸ್‌ನಲ್ಲಿ (Janatadal Secular JDS) ಹೊಸ ಜವಾಬ್ದಾರಿಯನ್ನು ನೀಡಲಾಗಿದೆ.
ವೈಎಸ್‌ವಿ ದತ್ತಾ (YSV Datta) ಅವರನ್ನು ಜೆಡಿಎಸ್‌ನ (JDS) ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು (H.D.Kumarswamy) ಆದೇಶ ಹೊರಡಿಸಿದ್ದಾರೆ.
ಟಿ.ನರಸೀಪುರ ಮಾಜಿ ಶಾಸಕ ಅಶ್ವಿನ್ ಕುಮಾರ್, ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡ, ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ವಿಧಾನಪರಿಷತ್ ಸದಸ್ಯ ಟಿ.ಎನ್.ಜವರಾಯಿಗೌಡ, ಶ್ರೀರಂಗಪಟ್ಟಣ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಶಾಸಕರಾದ ಭೀಮನಗೌಡ ಪಾಟೀಲ್, ಜಿ.ಡಿ.ಹರೀಶ್‌ಗೌಡ, ಸ್ವರೂಪ್ ಪ್ರಕಾಶ್ ಮತ್ತು ಎಂ.ಆರ್.ಮಂಜುನಾಥ್ ಅವರನ್ನು ಸಮಿತಿ ಸದಸ್ಯರನ್ನಾಗು ನೇಮ ಮಾಡಲಾಗಿದೆ.
ಎಂಎಲ್‌ಸಿಗಳಾದ ಕೆ.ವಿವೇಕಾನಂದ, ಸಿ.ಎನ್.ಮಂಜೇಗೌಡ, ಡಾ.ಸೂರಜ್ ರೇವಣ್ಣ ಮತ್ತು ಜೆಡಿಎಸ್ ಮುಖಂಡ ಸುಧಾಕರ್.ಎಸ್.ಶೆಟ್ಟಿ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ.
ಪಕ್ಷದ ಕಾರ್ಯಚಟುವಟಿಕೆ, ಕಾರ್ಯಕಲಾಪ, ಸಂಘಟನೆ ಒಳಗೊಂಡಂತೆ ಹಲವಾರು ಪ್ರಮುಖ ವಿಷಯಗಳನ್ನು ಸಾರ್ವಜನಿಕವಾಗಿ ಪ್ರಚಾರಪಡಿಸಲು ಮತ್ತು ಮಾಧ್ಯಮದವರೊಂದಿಗೆ ಸಂಪರ್ಕ ಸಾಧಿಸುವ ಜವಾಬ್ದಾರಿಯನ್ನು ವೈಎಸ್‌ವಿ ದತ್ತಾ ನೇತೃತ್ವದ ಪ್ರಚಾರ ಸಮಿತಿಗೆ ನೀಡಲಾಗಿದೆ.


