KSRTC: ಬಸ್‌ ಟಿಕೆಟ್‌ ದರ ಹೆಚ್ಚಳ ಇನ್ಮುಂದೆ ಸರ್ಕಾರದಲ್ಲ, ಸಮಿತಿಯದ್ದು..! ಸಾರ್ವಜನಿಕ ಆಕ್ರೋಶ ತಡೆಗೆ ಹೊಸ ಸೂತ್ರ

ಕೆಎಸ್‌ಆರ್‌ಟಿಸಿ ಒಳಗೊಂಡಂತೆ ನಾಲ್ಕು ಸಾರಿಗೆ ನಿಗಮಗಳ ಟಿಕೆಟ್‌ ದರ ಪರಿಷ್ಕರಣೆಗೆ ಶಿಫಾರಸ್ಸು ಮಾಡುವ ಸಂಬಂಧ ಸಮಿತಿ ರಚನೆಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ ರಚನೆ ಸಂಬಂಧ ಕರ್ನಾಟಕ ಮೋಟಾರು ವಾಹನ ನಿಯಮ ತಿದ್ದುಪಡಿಗೊಳಿಸಿ ರಾಜ್ಯ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ.

ಈ ಮೂಲಕ ಕೆಎಸ್‌ಆರ್‌ಟಿಸಿ (KSRTC), ಕೆಕೆಆರ್‌ಟಿಸಿ (KKRTC), ಎನ್‌ಡಬ್ಲ್ಯೂಕೆಆರ್‌ಟಿಸಿ (NWKRTC) ಮತ್ತು ಬಿಎಂಟಿಸಿ (BMTC) ಟಿಕೆಟ್‌ ದರ ಹೆಚ್ಚಳ ಮಾಡುವಾಗ ಸಾರ್ವಜನಿಕ ಆಕ್ರೋಶದಿಂದ ಬಚಾವ್‌ ಆಗುವುದಕ್ಕೆ ರಾಜ್ಯ ಸರ್ಕಾರ ದಾರಿ ಹುಡುಕಿದೆ.

ಇನ್ನುಂದೆ ರಾಜ್ಯದಲ್ಲಿ ಸರ್ಕಾರಿ ಬಸ್‌ಗಳ ಟಿಕೆಟ್‌ ದರ (Bus Fare) ಹೆಚ್ಚಳ ವಿದ್ಯುತ್‌ ದರ ಏರಿಕೆಯ (KERC) ರೀತಿಯಲ್ಲೇ ರಾಜ್ಯ ಸರ್ಕಾರ ಬದಲು ರಾಜ್ಯ ಸರ್ಕಾರ ರಚಿಸಿರುವ ಹೊಸ ಸಮಿತಿಯ ಸೂಚನೆಯಂತೆ ನಿರ್ಧಾರವಾಗಲಿದೆ.

ಟಿಕೆಟ್‌ ದರ ಹೆಚ್ಚಳಕ್ಕೆ ಮೆಟ್ರೋ ರೈಲು (Metro Rail) ದರ ಪರಿಷ್ಕರಣೆಗೆ ಸಮಿತಿ ಇರುವಂತೆ ಅದೇ ಮಾದರಿಯನ್ನು ಸಾರಿಗೆ ನಿಗಮಗಳ ಟಿಕೆಟ್‌ ದರ ಪರಿಷ್ಕರಣೆಗೂ ಅನ್ವಯಿಸಿದೆ.

ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿಗೆ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮುಖ್ಯಸ್ಥರಾಗಿರುತ್ತಾರೆ.

ಸಮಿತಿಯ ಇಬ್ಬರು ಸದಸ್ಯರ ಪೈಕಿ ಒಬ್ಬರು ಕಾನೂನು ಪದವಿ ಹೊಂದಿರುವ ನಿವೃತ್ತ ಪ್ರಧಾನ ಕಾರ್ಯದರ್ಶಿ ಅಥವಾ ರಾಜ್ಯ ಸರ್ಕಾರದ ಕಾರ್ಯದರ್ಶಿಯಾಗಿರಲಿದ್ದಾರೆ. ಇನ್ನೋರ್ವ ಸದಸ್ಯರು ಸಾರಿಗೆ ಕ್ಷೇತ್ರದ ತಜ್ಞರಾಗಿರಲಿದ್ದಾರೆ.

ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸಮಿತಿಯು ಸದಸ್ಯ ಕಾರ್ಯದರ್ಶಿಯಾಗಿರಲಿದ್ದಾರೆ.

ಸಮಿತಿಯ ಮುಖ್ಯಸ್ಥರು ಮತ್ತು ಸದಸ್ಯರ ಗರಿಷ್ಠ ಅವಧಿ ಮೂರು ವರ್ಷ ಅಥವಾ ಇವರ ಮೇಲೆ ರಾಜ್ಯ ಸರ್ಕಾರದ ವಿಶ್ವಾಸ ಇರುವವರೆಗೆ. ಸಮಿತಿಯ ಸದಸ್ಯರನ್ನು ಮರು ನೇಮಕ ಮಾಡುವುದಕ್ಕೆ ಅವಕಾಶಗಳಿಲ್ಲ.

ಸಮಿತಿಯ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕಾಗುತ್ತದೆ.

ಸಾರಿಗೆ ನಿಗಮಗಳು ಟಿಕೆಟ್‌ ದರ ಹೆಚ್ಚಳ ಅಥವಾ ಪ್ರಯಾಣಿಕರ ಮೇಲೆ ಉಪ ತೆರಿಗೆ ವಿಧಿಸುವ ಸಂಬಂಧ ಈ ಸಮಿತಿಗೆ ಪ್ರಸ್ತಾಪಗಳನ್ನು ಸಲ್ಲಿಸಬೇಕಾಗುತ್ತದೆ. ಆ ಪ್ರಸ್ತಾಪಗಳ ಬಗ್ಗೆ ಅಧ್ಯಯನ ಕೈಗೊಂಡ ಬಳಿಕ ಸಮಿತಿಯು ನಿಗಮಗಳಿಗೆ ಟಿಕೆಟ್‌ ದರ ಹೆಚ್ಚಳ ಮತ್ತು ಉಪ ತೆರಿಗೆ ಅಥವಾ ಶುಲ್ಕ ವಿಧಿಸುವ ಶಿಫಾರಸ್ಸನ್ನು ಮಾಡುತ್ತದೆ.

ಸಾರಿಗೆ ನಿಗಮಗಳು ಸಮಿತಿ ಮಾಡುವ ಆ ಶಿಫಾರಸ್ಸಿನ ಪ್ರಕಾರ ಟಿಕೆಟ್‌ ದರ ಹೆಚ್ಚಳ ಅಥವಾ ಉಪ ತೆರಿಗೆ ಅಥವಾ ಪ್ರಯಾಣಿಕರಿಗೆ ಶುಲ್ಕ ವಿಧಿಸಬೇಕಾಗುತ್ತದೆ.

ಸಾರಿಗೆ ನಿಗಮಗಳಿಗೆ ಮಾಡಲಾಗುವ ಶಿಫಾರಸ್ಸಿನ ಪ್ರತಿಯನ್ನು ಸಮಿತಿಯು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು ಮತ್ತು ಸರ್ಕಾರವು ಶಿಫಾರಸ್ಸಿನ ವರದಿಯನ್ನು ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಮಂಡಿಸಲಿದೆ.

ಸಾರಿಗೆ ನಿಗಮಗಳ ಹಣಕಾಸು ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಟಿಕೆಟ್‌ ದರ ಪರಿಷ್ಕರಣೆಗೆ ಕಾಲಕ್ಕುನುಗುಣವಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ. ಅಲ್ಲದೇ ಸಮಿತಿಯು ಸಾರಿಗೆ ನಿಗಮಗಳ ಹಣಕಾಸು ಸ್ಥಿತಿ ಮತ್ತು ದಕ್ಷತೆ ಹೆಚ್ಚಿಸಲು ಉಪ ತೆರಿಗೆ, ಟಿಕೆಟ್‌ ದರಗಳ ಮೇಲೆ ಶುಲ್ಕ ವಿಧಿಸುವುದಕ್ಕೂ ಶಿಫಾರಸ್ಸು ಮಾಡಬಹುದು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪ್ರತಿಕ್ಷಣ Exclusive: ಹಾಸನದ MMM ಆಸ್ಪತ್ರೆ ವಿರುದ್ಧ FIR

ಹಾಸನ ನಗರದ (Hassan City) ಸಂಪಿಗೆ ರಸ್ತೆಯಲ್ಲಿರುವ (Sampige Road) ಮಹಾಲಕ್ಷ್ಮೀ...

ಪ್ರತಿಕ್ಷಣ Exclusive : ಜನಪ್ರಿಯ ಆಸ್ಪತ್ರೆಯ ಮತ್ತೊಂದು ಕರ್ಮಕಾಂಡ – FIR ದಾಖಲು

50 ಲಕ್ಷ ರೂಪಾಯಿ ವಿಮೆ ಹಣವನ್ನು ಲಪಟಾಯಿಸುವ ಸಲುವಾಗಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ...

ಜನಪ್ರಿಯ ಆಸ್ಪತ್ರೆ Dr.ಬಶೀರ ಸಿಕ್ಕಿಬಿದ್ದಿದ್ದು ಹೇಗೆ..? ಕೋರ್ಟ್‌ನಲ್ಲೇ ಲಾಕ್‌..!

ನ್ಯಾಯಾಲಯವನ್ನೇ ಯಾಮಾರಿಸಲು ಹೋಗಿ ನ್ಯಾಯಾಲಯದ ಕೈಯಲ್ಲೇ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಹಾಸನ...

ಬೆಂಗಳೂರಿನ PGಗಳಿಗೆ 1 ವಾರದ ಡೆಡ್‌ಲೈನ್‌

ಒಂದು ವಾರದೊಳಗೆ ಎಲ್ಲಾ PGಗಳು (Paying Guest) ಉದ್ದಿಮೆ ಪರವಾನಿಗೆ ಪತ್ರವನ್ನು...