ಕಟ್ಟಡ ಪರವಾನಿಗೆ ಪಡೆದು ಪರವಾನಿಗೆಯನ್ನು ಉಲ್ಲಂಘನೆ ಮಾಡಿ ನಿರ್ಮಾಣ ಮಾಡಲಾದ ಕಟ್ಟಡಗಳಿಗೆ ದಂಡ ವಿಧಿಸಿ ಪರಿಷ್ಕೃತ ನಕ್ಷೆ ವಿಧಿಸುವ ಸಂಬಂಧ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಪಟ್ಟಣ ಪಂಚಾಯತಿ ಮಟ್ಟದಲ್ಲಿ ವಸತಿ/ಕೈಗಾರಿಕೆ/ಇತರೆ ಉದ್ದೇಶಗಳ ಕಟ್ಟಡಗಳಿಗೆ ಚದರ ಮೀಟರ್‌ಗೆ 1 ಸಾವಿರ ರೂ. ದಂಡ, ವಾಣಿಜ್ಯ ಕಟ್ಟಡಗಳಿಗೆ 1,500 ರೂಪಾಯಿ ದಂಡ ಕಟ್ಟುವುದಕ್ಕೆ ಅವಕಾಶ ನೀಡಲಾಗಿದೆ.
ಪುರಸಭೆ ವ್ಯಾಪ್ತಿಯಲ್ಲಿ ಚದರ ಮೀಟರ್‌ಗೆ 1,200 ರೂಪಾಯಿ ದಂಡ ಮತ್ತು ವಾಣಿಜ್ಯ ಕಟ್ಟಡಗಳಿಗೆ 1,800 ರೂಪಾಯಿ ದಂಡ ವಿಧಿಸುವುದಕ್ಕೆ ಅವಕಾಶ ನೀಡಲಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ವಸತಿ/ಕೈಗಾರಿಕೆ ಮತ್ತು ಇತರೆ ಉದ್ದೇಶದ ಕಟ್ಟಡಗಳಿಗೆ 1,500 ರೂಪಾಯಿ ಮತ್ತು ವಾಣಿಜ್ಯ ಕಟ್ಟಡಗಳಿಗೆ 2,250 ರೂಪಾಯಿ ದಂಡ ಕಟ್ಟುವುದಕ್ಕೆ ಅವಕಾಶ ನೀಡಲಾಗಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ಚದರ ಮೀಟರ್‌ಗೆ 2 ಸಾವಿರ ರೂಪಾಯಿ ದಂಡ ಮತ್ತು ವಾಣಿಜ್ಯ ಕಟ್ಟಡಗಳಿಗೆ ಚದರ ಮೀಟರ್‌ಗೆ 3 ಸಾವಿರ ರೂಪಾಯಿ ದಂಡ ಕಟ್ಟುವುದಕ್ಕೆ ಅವಕಾಶ ನೀಡಲಾಗಿದೆ.

ಕಟ್ಟಡ ಪರವಾನಿಗೆ ಪಡೆದು ಫಾರ್ ಮತ್ತು ಕಾರ್ ಪಾರ್ಕಿಂಗ್ ಪ್ರದೇಶಗಳ ಉಲ್ಲಂಘನೆ ಮಾಡಿದ ಪ್ರಕರಣಗಳಲ್ಲಿ ಶೇಕಡಾ 5ರ ಮಿತಿಯೊಳಗೆ ಉಲ್ಲಂಘನೆ ಮಾಡಿದ್ದಲ್ಲಿ ಅಂತಹ ಕಟ್ಟಡಗಳಿಗೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದಂಡ ಕಟ್ಟಿ ಪರಿಷ್ಕೃತ ನಕ್ಷೆ ಪಡೆದುಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ.
ಪಟ್ಟಣ ಪಂಚಾಯತಿ, ನಗರಸಭೆ, ಮಹಾನಗರ ಪಾಲಿಕೆ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಉಲ್ಲಂಘನೆ ಮಾಡಿ ನಿರ್ಮಾಣ ಮಾಡಲಾದ ಕಾರ್ ಪಾರ್ಕಿಂಗ್ ಒಂದಕ್ಕರ 5 ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತದೆ.



