ಪ್ರತಿಕ್ಷಣ Exclusive: ಹಾಸನದ MMM ಆಸ್ಪತ್ರೆ ವಿರುದ್ಧ FIR

ಹಾಸನ ನಗರದ (Hassan City) ಸಂಪಿಗೆ ರಸ್ತೆಯಲ್ಲಿರುವ (Sampige Road) ಮಹಾಲಕ್ಷ್ಮೀ ಮಂಜಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ( Mahalakshmi Manjappa Multi-speciality Hospital) ವಿರುದ್ಧ ಎಫ್‌ಐಆರ್‌ (FIR) ದಾಖಲಾಗಿದೆ.

ಮಹಾಲಕ್ಷ್ಮೀ ಮಂಜಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ( Mahalakshmi Manjappa Multi-speciality Hospital)  ಮಾಲೀಕ ಡಾ.ಉಮೇಶ್‌.ಎಂ. (Dr. Umesh M) ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ವಿರುದ್ಧ ಎಫ್‌ಐಆರ್‌ (FIR) ದಾಖಲಾಗಿದೆ.

ಹೊಳೆನರಸೀಪುರ ವೃತ್ತದ (Holenarasipura) ಹಳ್ಳಿ ಮೈಸೂರು ಠಾಣೆಯಲ್ಲಿ (Hallimysuru Station) ದಾಖಲಾಗಿರುವ ಎಫ್‌ಐಆರ್‌ (FIR) ಪ್ರತಿ ಪ್ರತಿಕ್ಷಣಕ್ಕೆ (Pratikshana) ಲಭ್ಯವಾಗಿದೆ.

ಭಾರತೀಯ ನ್ಯಾಯ ಸಂಹಿತೆಯ ಕಲಂಗಳಾದ 229, 233, 237, 338, 336(2) 336(3), 340(2), 190ರ ಅಡಿಯಲ್ಲಿ ಎಫ್‌ಐಆರ್‌ (FIR) ದಾಖಲಾಗಿದೆ.

ಹಾಸನದ 3ನೇ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ಆನಂದ್‌ ಅವರು 2014ರ ಪ್ರಕರಣದಲ್ಲಿ ಜನಪ್ರಿಯ ಆಸ್ಪತ್ರೆಯ (Janapriya Hospital) ಮಾಲೀಕ ಡಾ.ಅಬ್ದುಲ್‌ ಬಶೀರ ವಿರುದ್ಧ ನ್ಯಾಯಾಲಯಕ್ಕೆ ಸುಳ್ಳು, ಖೊಟ್ಟಿ ದಾಖಲೆಗಳನ್ನು ಸಲ್ಲಿಸಿ ವಂಚಿಸಿದ ಹಿನ್ನೆಲೆಯಲ್ಲಿ ಇದೇ ಅಕ್ಟೋಬರ್‌ 24ರಂದು ಎಫ್‌ಐಆರ್‌ಗೆ (FIR) ಆದೇಶಿಸಿದ ಬೆನ್ನಲ್ಲೇ ಅಪಘಾತ ವಿಮೆ ಪರಿಹಾರ ವಂಚನೆ ಯತ್ನಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ 2ನೇ ಪ್ರಮುಖ ಎಫ್‌ಐಆರ್‌ (FIR) ಇದಾಗಿದೆ.

Click the Link ಜನಪ್ರಿಯ ಆಸ್ಪತ್ರೆ Dr.ಬಶೀರ ಸಿಕ್ಕಿಬಿದ್ದಿದ್ದು ಹೇಗೆ..? ಕೋರ್ಟ್‌ನಲ್ಲೇ ಲಾಕ್‌..!

ಈ ಪ್ರಕರಣದಲ್ಲಿ ಅರಕಲಗೂಡಿನ ಮುತುಗದಹೊಸೂರು ಗ್ರಾಮದ ಗಿರೀಶ.ಎಂ. A1 ಆರೋಪಿ, ಸುರೇಶ
A2 ಆರೋಪಿ, ರವಿ.ಕೆ. A3 ಆರೋಪಿ, ಸಿಂಚನ.ಅರ್‌.ಕೆ. A4 ಆರೋಪಿ, ಸುಹಾಶ್‌.ಎಂ.ಇ. A5 ಆರೋಪಿ, ಮಹಾಲಕ್ಷ್ಮೀ ಮಂಜಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ಉಮೇಶ್‌.ಎಂ. A6 ಆರೋಪಿ, MMM ಆಸ್ಪತ್ರೆಯ ಆಡಳಿತಾಧಿಕಾರಿ A7 ಆರೋಪಿಯಾಗಿದ್ದಾರೆ.

ರಿಲಯನ್ಸ್‌ ಜನರಲ್‌ ಇನ್ಸೂರೆನ್ಸ್‌ನ (Reliance General Insurance) ಮ್ಯಾನೇಜರ್‌ ನಿಖಿಲ್‌.ಜಿ.ಆರ್‌. (Nikhil.G.R.) ಕೊಟ್ಟ ದೂರಿನ ಮೇರೆಗೆ ಎಫ್‌ಐಆರ್‌ (FIR) ದಾಖಲಾಗಿದೆ.

(ಪ್ರತಿಕ್ಷಣ ಸುದ್ದಿಗಾಗಿ ವಾಟ್ಸಾಪ್‌ ನಂಬರ್‌ 97411 83147 ಅಥವಾ pratikshananews@gmail.com ನ್ನು ಸಂಪರ್ಕಿಸಿ)

ಮಹಾಲಕ್ಷ್ಮೀ ಮಂಜಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ಉಮೇಶ್‌.ಎಂ

ಈ ಪ್ರಕರಣದ ಪ್ರಕಾರ ಇದೇ ವರ್ಷ A2 ಆರೋಪಿಯಾಗಿರುವ ಸುರೇಶ ಅರಕಲಗೂಡು ನ್ಯಾಯಾಲಯದಲ್ಲಿ 20 ಲಕ್ಷ ರೂಪಾಯಿ ಅಪಘಾತ ವಿಮೆ ಪರಿಹಾರ ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಜೊತೆಗೆ ಮೂರನೇ ಆರೋಪಿಯಾಗಿರುವ ರವಿ.ಕೆ. ಅರಕಲಗೂಡು ನ್ಯಾಯಾಲಯದಲ್ಲೇ 25 ಲಕ್ಷ ಅಪಘಾತ ವಿಮೆ ಪರಿಹಾರವನ್ನು ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರತಿವಾದಿಯಾಗಿರುವ ರಿಲಯನ್ಸ್‌ ಜನರಲ್‌ ಇನ್ಸೂರೆನ್ಸ್‌ (Reliance General Insurance) ಕಂಪನಿಗೆ ನೋಟಿಸ್‌ ನೀಡಿತ್ತು.

ಅರ್ಜಿದಾರರ ವಾದದ ಪ್ರಕಾರ ರವಿ ಮತ್ತು ಸುರೇಶ ಇಬ್ಬರೂ ಕಳೆದ ವರ್ಷದ ಅಕ್ಟೋಬರ್‌ 2ರಂದು ಹಳ್ಳಿ ಮೈಸೂರು-ಅರಕಲಗೂಡು ರಸ್ತೆಯಲ್ಲಿ ಸ್ಪ್ಲೆಂಡರ್‌ ಬೈಕಿನಲ್ಲಿ ಹೋಗುವಾಗ ಅತೀ ವೇಗದಲ್ಲಿ ಬರುತ್ತಿದ್ದ ಡಿಯೋ ಡ್ರಮ್‌ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತಕ್ಕೆ ಸಂಬಂಧಿಸಿದಂತೆ ಹಳ್ಳಿ ಮೈಸೂರು ಠಾಣೆ ಪೊಲೀಸರು ಎಫ್‌ಐಆರ್‌ (FIR) ದಾಖಲಿಸಿ 2024ರ ನವೆಂಬರ್‌ 30ರಂದು ಅಂತಿಮ ವರದಿಯನ್ನೂ ಸಲ್ಲಿಸಿದ್ದರು.

ರಿಲಯನ್ಸ್‌ ಜನರಲ್‌ ಇನ್ಸೂರೆನ್ಸ್‌ (Reliance General Insurance) ಪರವಾಗಿ ತನಿಖೆ ಕೈಗೊಂಡಿದ್ದ ಹಾಸನ ಮೂಲದ ಲೆಜಿಟ್‌ ಇನ್ವಿಸ್ಟಿಗೇಷನ್‌ ಸರ್ವಿಸಸ್‌ (Legit Investigation Services) ತಂಡವು ಹಾಸನ ನಗರದ (Hassan City) ಸಂಪಿಗೆ ರಸ್ತೆಯಲ್ಲಿರುವ (Sampinge Road) ಮಹಾಲಕ್ಷ್ಮೀ ಮಂಜಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿತ್ತು.

ಹಾಸನ ನಗರದ ಈ ಖಾಸಗಿ ಆಸ್ಪತ್ರೆಯಲ್ಲಿ 2024ರ ಸೆಪ್ಟೆಂಬರ್‌ 17ರಂದು ನೀಡಲಾಗಿದ್ದ MLC ವರದಿ ಪ್ರಕಾರ ಆರೋಪಿ ಸುರೇಶ ಮತ್ತೊಬ್ಬ ವ್ಯಕ್ತಿ ರಾಕೇಶ ಜೊತೆಗೆ ಸೆಪ್ಟೆಂಬರ್‌ 16ರಂದು ರಾತ್ರಿ 9 ಗಂಟೆಗೆ ಅರಸೀಕೆರೆ ತಾಲೂಕಿನ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರ ಅಲ್‌ ಆಮೀನ್‌ ಕಾಲೇಜಿನ ಎದುರು ಅಪಘಾತಕ್ಕೀಡಾಗಿ ಚಿಕಿತ್ಸೆ ಪಡೆದಿದ್ದ. ಆ ಅಪಘಾತದಿಂದ ಆದ ಗಾಯಕ್ಕೆ ಅಕ್ಟೋಬರ್‌ 2ರಂದು ಅದೇ MMM ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 2ನೇ ಬಾರಿ ಚಿಕಿತ್ಸೆ ಪಡೆದಿದ್ದ.

ಈ ಹಿನ್ನೆಲೆಯಲ್ಲಿ ಮಹಾಲಕ್ಷ್ಮೀ ಮಂಜಪ್ಪ ಮಲ್ಟಿ ಸ್ಪೆಷಾಲಿಟಿಸಿ ಆಸ್ಪತ್ರೆಯ (Mahalakshmi Manjappa Multi-speciality Hospital) ಡಾ.ಉಮೇಶ್‌.ಎಂ (Dr. Umesh M) ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ವಿಮಾ ಪರಿಹಾರ ಪಡೆಯಲು ಸಂಚು ಮಾಡಿದ್ದರು ಎಂದು ಎಫ್‌ಐಆರ್‌ನಲ್ಲಿ (FIR) ಆರೋಪಿಸಲಾಗಿದೆ.

ರಿಲಯನ್ಸ್‌ ಜನರಲ್‌ ಇನ್ಸೂರೆನ್ಸ್‌ (Reliance General Insurance) ಕಂಪನಿಯಲ್ಲಿ ವಿಮಾ ಪರಿಹಾರವನ್ನು ಪಡೆಯಲು ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಕಂಪನಿ ದೂರಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಗಿರೀಶ್‌ ಮಟ್ಟಣ್ಣನವರ್‌ ವಿರುದ್ಧ ತನಿಖೆಗೆ ಆದೇಶ

ಗಿರೀಶ್‌ ಮಟ್ಟಣ್ಣನವರ್‌ (Girish Mattannanavar) ವಿರುದ್ಧ ಮೂರು ವಾರಗಳಲ್ಲಿ ತನಿಖೆ ನಡೆಸುವಂತೆ...

ಭೂತಾನ್‌ ಪ್ರವಾಸಕ್ಕೆ ಹೊರಟ ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (Prime Minister Narendra Modi) ಇವತ್ತಿನಿಂದ...

ಹಾಸನದ ಜನಪ್ರಿಯ ಆಸ್ಪತ್ರೆ ಮಾಲೀಕ ಡಾ.ಅಬ್ದುಲ್‌ ಬಶೀರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು

ನ್ಯಾಯಾಲಯಕ್ಕೆ ಸುಳ್ಳು ಸಾಕ್ಷ್ಯ ಮತ್ತು ಸುಳ್ಳು ದಾಖಲೆಗಳನ್ನು ಸಲ್ಲಿಸಿದ ಆರೋಪದಡಿಯಲ್ಲಿ ಹಾಸನ...

ದೆಹಲಿ ಕೆಂಪುಕೋಟೆ ಬಳಿ ಸ್ಫೋಟ – 8 ಸಾವು

ದೆಹಲಿಯ ಕೆಂಪುಕೋಟೆಯಲ್ಲಿ ಸಂಭವಿಸಿರುವ ಕಾರ್‌ ಬಾಂಬ್‌ ಸ್ಫೋಟದಲ್ಲಿ 8 ಮಂದಿ ಪ್ರಾಣ...