ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಬರೋಬ್ಬರೀ 2 ಲಕ್ಷದ 76 ಸಾವಿರ ಸರ್ಕಾರಿ ಹುದ್ದೆಗಳು ಖಾಲಿ ಇವೆ.
ಎ ವೃಂದ 16,017 ಹುದ್ದೆಗಳು ಖಾಲಿ ಇದ್ದರೆ, ಬಿ ವೃಂದದ 16,374 ಹುದ್ದೆಗಳು ಖಾಲಿ ಇವೆ. ಸಿ ವೃಂದದ 1 ಲಕ್ಷದ 66 ಸಾವಿರದ 021 ಹುದ್ದೆಗಳು ಖಾಲಿ ಇವೆ. ಡಿ ವೃಂದ 77 ಸಾವಿರದ 614 ಹುದ್ದೆಗಳು ಖಾಲಿ ಇವೆ.
ಈ ಮೂಲಕ ಕರ್ನಾಟಕದಲ್ಲಿ ಬರೋಬ್ಬರೀ 2 ಲಕ್ಷದ 76 ಸಾವಿರ ಸರ್ಕಾರಿ ಹುದ್ದೆಗಳು ಖಾಲಿ ಇವೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗುತ್ತಿರುವ ಹೊತ್ತಲ್ಲೇ ನೇಮಕಾತಿ ಪ್ರಕ್ರಿಯೆ ಚುರುಕುಗೊಳಿಸುವಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಉದ್ಯೋಗಾಂಕ್ಷಿಗಳು ಪ್ರತಿ ದಿನ ಹೋರಾಟ ಮಾಡುತ್ತಲೇ ಇದ್ದಾರೆ.
ಮಧು ಬಂಗಾರಪ್ಪ ಸಚಿವರಾಗಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಲ್ಲಿ ಬರೋಬ್ಬರೀ 70 ಸಾವಿರದ 700 ಹುದ್ದೆಗಳು ಖಾಲಿ ಇವೆ.
ಗೃಹ ಸಚಿವ ಪರಮೇಶ್ವರ್ ಅವರ ಒಳಾಡಳಿತ ಇಲಾಖೆಯಲ್ಲಿ 26 ಸಾವಿರ ಹುದ್ದೆಗಳು ಖಾಲಿ ಇವೆ. ಪಶು ಸಂಗೋಪನೆ ಇಲಾಖೆಯಲ್ಲಿ 10 ಸಾವಿರ ಹುದ್ದೆಗಳು, ಅರಣ್ಯ ಇಲಾಖೆಯಲ್ಲಿ 6,300 ಹುದ್ದೆಗಳು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಬರೋಬ್ಬರೀ 37 ಸಾವಿರ ಹುದ್ದೆಗಳು, ಪರಿಶಿಷ್ಟ ಜಾತಿ ಇಲಾಖೆಯಲ್ಲಿ 9 ಸಾವಿರದ 900 ಹುದ್ದೆಗಳು ಮತ್ತು ಪ್ರಿಯಾಂಕ್ ಖರ್ಗೆ ಸಚಿವರಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಬರೋಬ್ಬರೀ 10 ಸಾವಿರದ 800 ಹುದ್ದೆಗಳು ಖಾಲಿ ಇವೆ.


