ಕಾಂಗ್ರೆಸ್ (Congress) ಶಾಸಕ ಕೆ ವೈ ನಂಜೇಗೌಡ (MLA K.Y.Nanjegowda) ಗೆದ್ದಿರುವ ಮಾಲೂರು (Maluru Assembly) ವಿಧಾನಸಭಾ ಕ್ಷೇತ್ರದಲ್ಲಿ ಮರು ಮತ ಎಣಿಕೆಗೆ (Re-Counting) ಕರ್ನಾಟಕ ಹೈಕೋರ್ಟ್ (Karnataka High Court) ಆದೇಶಿಸಿರುವ ಹಿನ್ನೆಲೆಯಲ್ಲಿ ನಾಲ್ವರು ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳನ್ನು (Additional Assistant Returning Officer) ನೇಮಕ ಮಾಡಲಾಗಿದೆ.
ಮುಳಬಾಗಿಲು (Mulbagal), ಕೋಲಾರ (Kolar), ಶ್ರೀನಿವಾಸಪುರ (Srinivasapura) ತಾಲೂಕಿನ ತಹಶೀಲ್ದಾರ್ಗಳು ಹಾಗೂ ಬಂಗಾರಪೇಟೆ (Bangarapete) ತಾಲೂಕಿನ ಗ್ರೇಡ್-2 ತಹಶೀಲ್ದಾರ್ಗಳನ್ನು ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳಿಗಾಗಿ ನೇಮಿಸಲಾಗಿದೆ.
ಮರು ಮತ ಎಣಿಕೆಗೆ ಕರ್ನಾಟಕ ಹೈಕೋರ್ಟ್ (Karnataka High Court) ನೀಡಿರುವ ಆದೇಶ ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್ (Supreme Court) ಫಲಿತಾಂಶವನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆಯೂ, ಪ್ರಕಟಿಸದಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.


