ಲೈಟ್ ಆಫ್ ಮಾಡುವ ವಿಷಯದಲ್ಲಿ ನಡೆದ ಗಲಾಟೆಯಲ್ಲಿ ಸಹೋದ್ಯೋಗಿಯೊನ್ನ ತನ್ನ ಮ್ಯಾನೇಜರ್‌ನನ್ನೇ ಡಂಬಲ್ಸ್‌ನಿಂದ ಗುದ್ದಿ ಕೊಲೆ ಮಾಡಿರುವ ಭೀಕರ ಘಟನೆ ಬೆಂಗಳೂರು (Bengaluru) ನಗರದಲ್ಲಿ ನಡೆದಿದೆ.
ಆಂಧ್ರ ಪ್ರದೇಶದ (Andra Pradesh) ಮೂಲದ 24 ವರ್ಷದ ಸೋಮಲಾ ವಂಶಿ ತನ್ನ ಮ್ಯಾನೇಜರ್ ಆಗಿದ್ದ ಚಿತ್ರದುರ್ಗ (Chitradurga) ಮೂಲದ 41 ವರ್ಷದ ಭೀಮೇಶ್ ಬಾಬುನನ್ನೇ ಕೊಲೆ ಮಾಡಿದ್ದಾನೆ. ಗೋವಿಂದರಾಜನಗರದ (Govindarajnagar) ಎಂಸಿ ಲೇಔಟ್‌ನಲ್ಲಿ (MC Layout) ಶನಿವಾರ ರಾತ್ರಿ ಈ ಕೃತ್ಯ ನಡೆದಿದೆ.
ಎಂಸಿ ಲೇಔಟ್‌ನಲ್ಲಿ (MC Layout) ಡಿಜಿಟಲ್ ವಾಲ್ಟ್ ಮತ್ತು ಫೋಟೋ ಎಡಿಟಿಂಗ್ ಸಂಸ್ಥೆಯನ್ನು ನಡೆಸ್ತಿದ್ದರು. ಬ್ರೈಟ್ ಲೈಟ್‌ನಿಂದ ಕಿರಿಕಿರಿ ಆಗ್ತಿದ್ದ ಹಿನ್ನೆಲೆಯಲ್ಲಿ ಮ್ಯಾನೇಜರ್ ಭೀಮೇಶ್ ಬಾಬು ಅಗತ್ಯವಿಲ್ಲದೇ ಇದ್ದಾಗ ಬ್ರೈಟ್ ಲೈಟ್ ಆಫ್ ಮಾಡುವಂತೆ ತನ್ನ ಸಹೋದ್ಯೋಗಿ ಸೋಮಾಲ ವಂಶಿಗೆ ಹೇಳಿದ್ದ. ವೀಡಿಯೋ ಎಡಿಟಿಂಗ್ ಮಾಡುತ್ತಿದ್ದ ಸೋಮಾಲ ವಂಶಿಗೆ ಈ ಮಾತಿನಿಂದ ಸಿಟ್ಟು ಬಂದು ಇಬ್ಬರ ನಡುವೆಯೂ ಮಾತಿಗೆ ಮಾತು ಬೆಳೆದು ಸೋಮಾಲ ವಂಶಿ ಖಾರದ ಪುಡಿಯನ್ನು ಭೀಮೇಶ್ ಬಾಬು ಮೇಲೆ ಎಸೆದಿದ್ದಾನೆ. ನಂತರ ಡಂಬಲ್ಸ್ ಎತ್ಕೊಂಡು ಭೀಮೇಶ್ ಬಾಬುವಿನ ತಲೆ, ಎದೆ, ಮುಖಕ್ಕೆ ಹಲವು ಬಾರಿ ಚಚ್ಚಿದ್ದಾನೆ.
ಬಾಬು ಕುಸಿದು ಬಿದ್ದ ಕೂಡಲೇ ವಂಶಿ ನಾಯಂಡಹಳ್ಳಿಯಲ್ಲಿರುವ (Nayandahalli) ತನ್ನ ಸಹೋದ್ಯೋಗಿ ಗೌರಿ ಪ್ರಸಾದ್ ಮನೆಗೆ ಹೋಗಿದ್ದಾನೆ. ನಂತರ ವಂಶಿ, ಗೌರಿ ಪ್ರಸಾದ್ ಮತ್ತು ಪ್ರಸಾದ್‌ನ ಮತ್ತೊಬ್ಬ ಸ್ನೇಹಿತ ಮತ್ತೆ ಗೋವಿಂದರಾಜನಗರಕ್ಕೆ ವಾಪಸ್ ಅಗಿದ್ದಾರೆ. ಈ ಮೂವರು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡ ಹೋದರೂ ಅಷ್ಟೊತ್ತಿಗೆ ಬಾಬು ಮೃತಪಟ್ಟಿದ್ದ.
24 ವರ್ಷದ ಸೋಮಾಲ ವಂಶಿ ಬಳಿಕ ಗೋವಿಂದರಾಜನಗರ (Govindarajanagara) ಠಾಣೆಯಲ್ಲಿ ಶರಣಾದ ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ.


