ಗ್ರೇಟರ್ ಬೆಂಗಳೂರು ಪ್ರಾಧಿಕಾರದ (Greater Bengaluru Authority) ಅಡಿಯಲ್ಲಿ ಬರುವ ಐದು ಪಾಲಿಕೆಗಳ ಚುನಾವಣೆಗೆ ಬಿಜೆಪಿ ರಾಜ್ಯಾಧ್ಯಕ್ಷ (Karnataka BJP State President) ಬಿ.ವೈ.ವಿಜಯೇಂದ್ರ (B.Y.Vijayendra) ರಚಿಸಿರುವ ಸಮಿತಿ ಬಗ್ಗೆ ಯಲಹಂಕ (Yelahanka BJP MLA) ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ (S.R.Vishwanath) ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಜಯೇಂದ್ರ (B.Y.Vijayendra) ಅವರಿಗೆ ಬೆಂಗಳೂರಿನ ಮೇಲೆ ಹಿಡಿತ ಇಲ್ಲ. ನಂದೀಶ್ ರೆಡ್ಡಿ (Nandish Reddy) ಕೊಟ್ಟ ಪಟ್ಟಿಗೆ ಸಹಿ ಮಾಡಿದ್ದಾರಂತೆ. 47 ವರ್ಷಗಳಿಂದ ಪಕ್ಷದಲ್ಲಿ ದುಡಿದಿದ್ದೇನೆ. GBA ಉಸ್ತುವಾರಿ ಸಮಿತಿ ರಚನೆ ಮಾಡುವಾಗ ನನ್ನನ್ನು ಪರಿಗಣಿಸದೇ ನನ್ನನ್ನು ಯಲಹಂಕಕ್ಕೆ (Yelahanka Assembly) ಸೀಮಿತ ಮಾಡಿದ್ದಾರೆ.
ಪಕ್ಷದಲ್ಲಿ ಸೋತವರಿಗೆ ಹುದ್ದೆಯನ್ನು ಕೊಟ್ಟು ಹಿರಿಯರಿಗೆ ಮುಜುಗರ ಉಂಟು ಮಾಡಿದ್ದಾರೆ. ಚುನಾವಣೆಯಲ್ಲಿ ಸೋತರೆ ಉಸ್ತುವಾರಿಗಳನ್ನೇ ಹೊಣೆ ಮಾಡಿ ನಮ್ಮ ತಲೆಗೆ ಕಟ್ಟಬೇಡಿ. ನಾನು ನನ್ನ ಕ್ಷೇತ್ರವನ್ನು ನೋಡ್ಕೊಂಡು ಇರುತ್ತೇನೆ
ಎಂದು ಯಲಹಂಕ ಶಾಸಕ (Yelahanka MLA) ಎಸ್.ಆರ್.ವಿಶ್ವನಾಥ್ (S.R.Vishwanath) ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ.


