BJP ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ MLA S.R. ವಿಶ್ವನಾಥ್‌ ಅಸಮಾಧಾನ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (Greater Bengaluru Authority) ಅಡಿಯಲ್ಲಿ ಬರುವ ಐದು ಪಾಲಿಕೆಗಳ ಚುನಾವಣೆಗೆ ಬಿಜೆಪಿ ರಾಜ್ಯಾಧ್ಯಕ್ಷ (Karnataka BJP State President) ಬಿ.ವೈ.ವಿಜಯೇಂದ್ರ (B.Y.Vijayendra) ರಚಿಸಿರುವ ಸಮಿತಿ ಬಗ್ಗೆ ಯಲಹಂಕ (Yelahanka BJP MLA) ಬಿಜೆಪಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ (S.R.Vishwanath) ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯೇಂದ್ರ (B.Y.Vijayendra) ಅವರಿಗೆ ಬೆಂಗಳೂರಿನ ಮೇಲೆ ಹಿಡಿತ ಇಲ್ಲ. ನಂದೀಶ್‌ ರೆಡ್ಡಿ (Nandish Reddy) ಕೊಟ್ಟ ಪಟ್ಟಿಗೆ ಸಹಿ ಮಾಡಿದ್ದಾರಂತೆ. 47 ವರ್ಷಗಳಿಂದ ಪಕ್ಷದಲ್ಲಿ ದುಡಿದಿದ್ದೇನೆ. GBA ಉಸ್ತುವಾರಿ ಸಮಿತಿ ರಚನೆ ಮಾಡುವಾಗ ನನ್ನನ್ನು ಪರಿಗಣಿಸದೇ ನನ್ನನ್ನು ಯಲಹಂಕಕ್ಕೆ (Yelahanka Assembly) ಸೀಮಿತ ಮಾಡಿದ್ದಾರೆ.

ಪಕ್ಷದಲ್ಲಿ ಸೋತವರಿಗೆ ಹುದ್ದೆಯನ್ನು ಕೊಟ್ಟು ಹಿರಿಯರಿಗೆ ಮುಜುಗರ ಉಂಟು ಮಾಡಿದ್ದಾರೆ. ಚುನಾವಣೆಯಲ್ಲಿ ಸೋತರೆ ಉಸ್ತುವಾರಿಗಳನ್ನೇ ಹೊಣೆ ಮಾಡಿ ನಮ್ಮ ತಲೆಗೆ ಕಟ್ಟಬೇಡಿ. ನಾನು ನನ್ನ ಕ್ಷೇತ್ರವನ್ನು ನೋಡ್ಕೊಂಡು ಇರುತ್ತೇನೆ

ಎಂದು ಯಲಹಂಕ ಶಾಸಕ (Yelahanka MLA) ಎಸ್‌.ಆರ್‌.ವಿಶ್ವನಾಥ್‌ (S.R.Vishwanath) ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಚಪ್ಪಲಿ ವೀರ ರಾಜೀವ್‌ ಗೌಡನಿಗೆ ಜಾಮೀನು..!

ಶಿಡ್ಲಘಟ್ಟ ನಗರಸಭೆ ಆಯುಕ್ತೆಗೆ ಬೆದರಿಕೆಯೊಡ್ಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಕೇಸ್ ನಲ್ಲಿ...

ಬಿಗ್ ಬಾಸ್ ಸ್ಪಾನ್ಸರ್ – ಉದ್ಯಮಿ C.J.ರಾಯ್ ಆತ್ಮಹತ್ಯೆ

ಬೆಂಗಳೂರಿನ ಖ್ಯಾತ ಉದ್ಯಮಿ ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿಜೆ ರಾಯ್ ಶುಕ್ರವಾರ...

BJPಯ ಅಶ್ವಥ್ ನಾರಾಯಣಗೆ 1 ವರ್ಷ ಜೈಲು- ಭೂಕಬಳಿಕೆ ಕೇಸ್ ನಲ್ಲಿ ಜೈಲು ಪಾಲಾದ BJP ಮಾಜಿ MLC..!

ಬಿಜೆಪಿ ಮಾಜಿ ಎಂಎಲ್ ಸಿ ಅಶ್ವಥ್ ನಾರಾಯಣಗೆ ಒಂದು ವರ್ಷ ಜೈಲು...

ಬೆಂಗಳೂರಲ್ಲಿ ಪವರ್ ಕಟ್- ಈ ಏರಿಯಾಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೂ ಕರೆಂಟ್ ಇರಲ್ಲ..!

ಬೆಂಗಳೂರಿನ 100ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಜನವರಿ 21ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ....