ಬೆಂಗಳೂರಿನ ಶಂಕರಪುರದ ರಂಗರಾವ್ ರಸ್ತೆ ಮತ್ತು ಭಾರತೀತೀರ್ಥ ರಸ್ತೆ ಸಂಧಿಸುವ ವೃತ್ತಕ್ಕೆ ಶಂಕರಾಚಾರ್ಯ ವೃತ್ತವೆಂದು ನಾಮಕರಣ ಮಾಡಲು ಶೃಂಗೇರಿ ಶಂಕರ ಮಠ ಮನವಿ ಮಾಡಿದೆ. ಅಲ್ಲದೇ ವೃತ್ತದಲ್ಲಿ ಶಂಕರಾಚಾರ್ಯರ ಪುತ್ತಳಿಯನ್ನು ಶೃಂಗೇರಿ ಮಠ ವತಿಯಿಂದ ಸ್ಥಾಪಿಸಲು ಅವಕಾಶ ಕಲ್ಪಿಸುವಂತೆ ಬೇಡಿಕೆಯಿಟ್ಟಿದ್ದಾರೆ.
ಹಿಂದೂ ಧರ್ಮದ ಉನ್ನತಿಗೆ ಸಾಕಷ್ಟು ಕೊಡುಗೆ ನೀಡಿರುವ ಶ್ರೀ ಜಗದ್ಗುರು ಶಂಕರಾಚಾರ್ಯ ಭಗವತ್ಪಾದರು, ಭಗವದ್ಗೀತೆ, ಉಪನಿಷತ್, ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರು. ತಮ್ಮ 32 ವರ್ಷದ ಜೀವಿತಾವಧಿಯಲ್ಲೇ ದೇಶಾದ್ಯಂತ ಸಂಚರಿಸಿ ಹಲವು ಸಂಪ್ರದಾಯಗಳನ್ನು ಒಂದುಗೂಡಿಸುವುದರ ಜೊತೆಗೆ, ಭಾರತ ಸಂಸ್ಕೃತಿಯನ್ನ ಜಗತ್ತಿಗೆ ಸಾರಿ ಹೇಳಿದವರು. ಅತ್ಯಂತ ಪ್ರೇರಣೆದಾಕರಾಗಿರುವ ಶಂಕರಾಚಾರ್ಯರ ಪುತ್ಥಳಿಯನ್ನ ಬೆಂಗಳೂರಿನಲ್ಲಿ ಸ್ಥಾಪಿಸಲು ನಾನು ಕೂಡ ಸರ್ಕಾರಕ್ಕೆ ಹಾಗೂ ಸ್ಥಳೀಯ ಆಡಳಿತಕ್ಕೆ ಶಂಕರ ಮಠ ಒತ್ತಾಯಿಸಿದೆ.
ಆರೋಗ್ಯ ಸಚಿವರಿಂದಲೂ ಪತ್ರ:
ಬೆಂಗಳೂರಿನ ಶಂಕರಪುರ ಪ್ರದೇಶದಲ್ಲಿ ವಾಸಿಸುತ್ತಿರುವ ಆಸ್ತಿಕ ಜನರ ಕೋರಿಕೆಯಂತೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಶಂಕರಪುರದ ರಂಗರಾವ್ ರಸ್ತೆ ಮತ್ತು ಭಾರತೀ ತೀರ್ಥ ರಸ್ತೆ ಸಂಧಿಸುವ ವೃತ್ತಕ್ಕೆ ಶ್ರೀ ಶಂಕರಾಚಾರ್ಯ ವೃತ್ತವೆಂದು ನಾಮಕರಣ ಮಾಡುವಂತೆ ಮತ್ತು ಈ ವೃತ್ತದಲ್ಲಿ ಶಂಕರಾಚಾರ್ಯರ ಪುತ್ಥಳಿಯನ್ನು ಶೃಂಗೇರಿ ಮಠದ ವತಿಯಿಂದ ಸ್ಥಾಪಿಸಲು ಅನುಮತಿ ನೀಡುವಂತೆ ಕೋರಿದೆ
ಎಂದು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಪತ್ರವನ್ನು ಬರೆದಿದ್ದಾರೆ.



