ಇಬ್ಬರು ಕ್ರಿಕೆಟಿಗರಿಗೆ ಸೇರಿದ 11 ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (Enforcement Directorate) ಜಪ್ತಿ ಮಾಡಿಕೊಂಡಿದೆ.
ಬೆಟ್ಟಿಂಗ್ ಆಪ್ ಪ್ರಚಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕ್ರಿಕೆಟಿಗ ಸುರೇಶ್ ರೈನಾ (Suresh Raina) ಮತ್ತು ಶಿಖರ್ ಧವನ್‌ಗೆ (Shikhar Dhawan) ಆಘಾತ ನೀಡಿದೆ.
1ಎಕ್ಸ್‌ಬೆಟ್ (1xbet) ಹೆಸರಿನ ಬೆಟ್ಟಿಂಗ್ ಆಪ್ (Betting App) ಪ್ರಚಾರಕ್ಕೆ ಸಂಬಂಧಿಸಿದಂತೆ ಸುರೇಶ್ ರೈನಾ (Suresh Rain) ಷೇರು ಮಾರುಕಟ್ಟೆಯಲ್ಲಿ (Share Market) ಹೂಡಿಕೆ ಮಾಡಿರುವ 6 ಕೋಟಿ 64 ಲಕ್ಷ ರೂಪಾಯಿ ಮೊತ್ತದಷ್ಟು ಮ್ಯೂಚುವಲ್ ಫಂಡ್ (Mutual Fund) ಷೇರುಗಳನ್ನು ಇಡಿ (ED) ಜಪ್ತಿ ಮಾಡಿಕೊಂಡಿದೆ.
ಕ್ರಿಕೆಟಿಗ ಶಿಖರ್ ಧವನ್ (Shikar Dhawan) ಹೆಸರಲ್ಲಿರುವ 4.5 ಕೋಟಿ ರೂಪಾಯಿ ಮೊತ್ತದ ಸ್ಥಿರಾಸ್ತಿಯನ್ನು ಇಡಿ (ED) ಜಪ್ತಿ ಮಾಡಿಕೊಂಡಿದೆ.
ಈ ಮೂಲಕ ಬೆಟ್ಟಿಂಗ್ ಆಪ್‌ಗಳ (Betting App) ಪ್ರಚಾರ ಕೈಗೊಂಡಿದ್ದ ಸೆಲೆಬ್ರೆಟಿಗಳಿಗೆ ಆತಂಕ ತೀವ್ರಗೊಂಡಿದೆ.


