ಕರ್ನಾಟಕ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ (Congress MLA Satish Sail) ಜಾರಿ ನಿರ್ದೇಶನಾಲಯ (ED) ಮತ್ತೊಂದು ಆಘಾತ ನೀಡಿದೆ. ಶಾಸಕ ಸತೀಶ್ ಸೈಲ್‌ಗೆ (Congress MLA Satish Sail) ಸೇರಿದ 21 ಕೋಟಿ ರೂಪಾಯಿ ಮೊತ್ತದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಜಪ್ತಿ ಮಾಡಿಕೊಂಡಿದೆ.
ಉತ್ತರ ಕನ್ನಡ ಜಿಲ್ಲೆಯ (Uttara Kannada) ಕಾರವಾರದಲ್ಲಿರುವ (Karwara) ಬೇಲೆಕೇರಿ (Belekeri Port) ಬಂದರಿನಿಂದ ಕಬ್ಬಿಣದ ಅದಿರಿನ ಕಳ್ಳ ಸಾಗಾಣಿಕೆ (Iron Ore) ಸಂಬಂಧ ಜಾರಿ ನಿರ್ದೇಶನಾಲಯ (ED) ಕಾಂಗ್ರೆಸ್ ಶಾಸಕ ಸತೀಶ್ ಸೈಲ್ (Karwara Congress MLA Satish Sail) ವಿರುದ್ಧ ತನಿಖೆ ನಡೆಸುತ್ತಿದೆ.
ಗೋವಾ ವಿಳಾಸ ಹೊಂದಿರುವ ಶಾಸಕ ಸತೀಶ್ ಸೈಲ್ ಒಡೆತನದ ಶ್ರೀ ಮಲ್ಲಿಕಾರ್ಜುನ್ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ ಆಸ್ತಿಗಳನ್ನೂ ಇಡಿ (ED) ಜಪ್ತಿ ಮಾಡಿಕೊಂಡಿದೆ.
ಕಬ್ಬಿಣದ ಅದಿರು ಕಳ್ಳ ಸಾಗಾಣಿಕೆ ಹಗರಣದಲ್ಲಿ ಸತೀಶ್ ಸೈಲ್‌ಗೆ (Congress MLA Satish Sail) ಬೆಂಗಳೂರಿನ (Bengaluru) ಜನಪ್ರತಿನಿಧಿಗಳ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಆ ಶಿಕ್ಷೆಗೆ ಕರ್ನಾಟಕ ಹೈಕೋರ್ಟ್ (Karnataka High Court) ತಡೆ ನೀಡಿದೆ. ಇದೇ ಹಗರಣದಲ್ಲಿ ಇಡಿ (ED) ಶಾಸಕ ಸತೀಶ್ ಸೈಲ್ (Congress MLA Satish Sail) ಅವರನ್ನು ಬಂಧಿಸಿತ್ತು.


