ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಕಾನೂನಿನಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ತೀರ್ಮಾನಿಸಿದೆ.
ಈ ಸಂಬಂಧ ಕರಡು ತಿದ್ದುಪಡಿಯನ್ನು ಪ್ರಕಟಿಸಿದ್ದು, ಅಕ್ಷೇಪಣೆಗಳನ್ನು ಸಲ್ಲಿಸುವುದಕ್ಕೆ 15 ದಿನಗಳ ಕಾಲಾವಕಾಶವನ್ನು ನೀಡಿದೆ.
ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳು (ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ಷರತ್ತು ಮತ್ತು ನಿಯಮಗಳು) (ಕಾಲೇಜು ಶಿಕ್ಷಣ) ನಿಯಮಗಳು -2014ರ ಕಲಂ 4ರ ಉಪ ಕಲಂ 6ಕ್ಕೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ.
ಅಲ್ಪಸಂಖ್ಯಾತ ಕಾಲೇಜು ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುವ ಸೊಸೈಟಿಗಳ ಆಡಳಿತ ಸಮಿತಿಯಲ್ಲಿರುವ ಟ್ರಸ್ಟಿಗಳು ಅಥವಾ ಸದಸ್ಯರ ಪೈಕಿ ಕನಿಷ್ಠ 2ನೇ 3ರಷ್ಟು ಮಂದಿ ಅಲ್ಪಸಂಖ್ಯಾತ ಸಮುದಾಯದಕ್ಕೆ ಸೇರಿದವರಾಗಿರಬೇಕು ಎಂದು ನಿಯಮ ಬದಲಾವಣೆಗೆ ತೀರ್ಮಾನಿಸಲಾಗಿದೆ.
ನಿಯಮ4ರ ಉಪ ನಿಯಮ 6ಕ್ಕೂ ಬದಲಾವಣೆಯನ್ನೂ ತರುವುದಕ್ಕೆ ತೀರ್ಮಾನಿಸಲಾಗಿದೆ.
ಒಂದು ವೇಳೆ ಮುಸ್ಲಿಂ ಅಲ್ಪಸಂಖ್ಯಾತ ಧಾರ್ಮಿಕ ಸಂಸ್ಥೆ ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾಗುವ ವಿದ್ಯಾರ್ಥಿಗಳಲ್ಲಿ ಕನಿಷ್ಠ ಶೇಕಡಾ ೫೦ರಷ್ಟು ಮಕ್ಕಳು ಅದೇ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು. ಆದರೆ ಈ ನಿಯಮ ಇತರೆ ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ ಎಂಬ ತಿದ್ದುಪಡಿ ತರುವುದಕ್ಕೆ ತೀರ್ಮಾನಿಸಲಾಗಿದೆ.


