ಪ್ರತಿಕ್ಷಣ Exclusive Part -3: 762 ಕೋಟಿ ರೂ. ಮೊತ್ತದ KRDCL ಟೆಂಡರ್‌ ಅಕ್ರಮ – 2 ಕಂಪನಿಗಳ ವಿರುದ್ಧ FIRಗೆ ಖಡಕ್‌ ಸೂಚನೆ

ಬರೋಬ್ಬರೀ 762 ಕೋಟಿ ರೂಪಾಯಿ ಮೊತ್ತದ ರಾಜ್ಯ ಹೆದ್ದಾರಿ ಕಾಮಗಾರಿಯ ಟೆಂಡರ್‌ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿದ ಹಿನ್ನೆಲೆಯಲ್ಲಿ MP24 ಕನ್‌ಸ್ಟ್ರಕ್ಷನ್‌ ಕಂಪನಿ ವಿರುದ್ಧ FIR ದಾಖಲಿಸುವಂತೆ ಆದೇಶಿಸಲಾಗಿತ್ತು. ಅದೇಶದ ಪ್ರತಿ ಪ್ರತಿಕ್ಷಣಕ್ಕೆ ಲಭ್ಯವಾಗಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ಮತ್ತು ಬೆಂಗಳೂರಿನ ಮಾಳಗಾಳ 2ನೇ ಹಂತ, ನಾಗರಭಾವಿಯಲ್ಲಿ ಕಚೇರಿ ಹೊಂದಿರುವ MP24ಕನ್‌ಸ್ಟ್ರಕ್ಷನ್‌ ಕಂಪನಿ ವಿರುದ್ಧ 24 ಗಂಟೆಗಳಲ್ಲಿ ಎಫ್‌ಐಆರ್‌ ದಾಖಲಿಸುವಂತೆ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರು ಮುಖ್ಯಸ್ಥರಾಗಿರುವ ರಾಜ್ಯ ಮಟ್ಟ ಡಿಬಾರ್‌ಮೆಂಟ್‌ ಸಮಿತಿ ಪ್ರಕ್ರಿಯೆಯ ಬಳಿಕ ಸೂಚಿಸಲಾಗಿತ್ತು.

ರಾಜ್ಯ ಮಟ್ಟದ ಡಿಬಾರ್‌ಮೆಂಟ್‌ ಸಮಿತಿ ಮುಖ್ಯಸ್ಥ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರ ನೇತೃತ್ವದಲ್ಲಿ ಆಗಸ್ಟ್‌ 12ರಂದು ನಡೆದ ಸಭೆಯಲ್ಲಿ ಖಡಕ್‌ ಸೂಚನೆ ನೀಡಲಾಗಿತ್ತು.

ಮೊದಲನೇ ಪ್ರತಿವಾದಿ MP24 ಕನ್‌ಸ್ಟ್ರಕ್ಷನ್‌ ಕಂಪನಿ ವಿರುದ್ಧ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ (KRDCL) ಕಾರ್ಯನಿವಾರ್ಹಕ ಅಭಿಯಂತರರು (EE) 24 ಗಂಟೆಗಳಲ್ಲಿ ಸಂಬಂಧಪಟ್ಟ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿ ಎಫ್‌ಐಆರ್‌ ದಾಖಲಿಸಬೇಕು. ಫೋರ್ಜರಿ, ವಂಚನೆ ಮತ್ತು ಲಾಭಕ್ಕಾಗಿ ಭ್ರಷ್ಟಾಚಾರ ಮತ್ತು ಸಾರ್ವಜನಿಕ ಅಧಿಕಾರಿಗೆ ಸುಳ್ಳು ದಾಖಲೆಗಳು ಮತ್ತು ಸುಳ್ಳು ಸಾಕ್ಷ್ಯಗಳನ್ನು ಸಲ್ಲಿಸಿದ್ದು ಮತ್ತು ಕೆಟಿಪಿಪಿ ಕಾಯ್ದೆಯಲ್ಲಿನ ನಿಯಮಗಳ ಉಲ್ಲಂಘನೆ ಸಂಬಂಧ ದೂರು ಮತ್ತು ಎಫ್‌ಐಆರ್‌ ದಾಖಲಿಸಬೇಕು.

2ನೇ ಪ್ರತಿವಾದಿಯಾಗಿರುವ ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿ (RCCL) ವಿರುದ್ಧ ತನ್ನ ಸಹಭಾಗಿಧಾರ ಕಂಪನಿ ಬಗ್ಗೆ ದೂರು ಸಲ್ಲಿಕೆ ಆಗುವವರೆಗೂ ವರದಿ ಸಲ್ಲಿಸುವುದಕ್ಕೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಆತನನ್ನೂ ಪ್ರಚೋದಕ ಎಂದು FIRನಲ್ಲಿ ಪರಿಗಣಿಸಬೇಕು

ಎಂದು ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ಖಡಕ್‌ ಆದೇಶ ನೀಡಿದ್ದರು.

(Complaint and FIR against Respondent 1, MP 24 Company to be filed in jurisdictional police station in 24 hours by EE, KRDCL on charges of forgery, cheating and fraud for gain and submitting false document and false evidence to a public servant and violation of KTPP Act and Rules. As Respondent 2 failed to make any report against his partner till complaint, he should be treated as abettor in the FIR.)

ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಜ್ಯ ಮಟ್ಟದ ಡಿಬಾರ್‌ಮೆಂಟ್‌ ಸಮಿತಿ ಮುಖ್ಯಸ್ಥ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರ ನೇತೃತ್ವದಲ್ಲಿ ಆಗಸ್ಟ್‌ 12ರಂದು ಸೂಚನೆ ಕೊಟ್ಟ ಮರು ದಿನವೇ  ಅಂದರೆ ಆಗಸ್ಟ್‌ 13ರಂದು ಸಮಿತಿಯ ಈ ಪ್ರಕ್ರಿಯೆಗಳನ್ನು ಉಲ್ಲೇಖಿಸಿ ಲೋಕೋಪಯೋಗಿ ಇಲಾಖೆ ಆಧೀನ ಕಾರ್ಯದರ್ಶಿಯವರೂ 2 ಕಂಪನಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಆದೇಶ ಪ್ರಕಟಿಸಿದ್ದರು.

 

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಗಿರೀಶ್‌ ಮಟ್ಟಣ್ಣನವರ್‌ ವಿರುದ್ಧ ತನಿಖೆಗೆ ಆದೇಶ

ಗಿರೀಶ್‌ ಮಟ್ಟಣ್ಣನವರ್‌ (Girish Mattannanavar) ವಿರುದ್ಧ ಮೂರು ವಾರಗಳಲ್ಲಿ ತನಿಖೆ ನಡೆಸುವಂತೆ...

ಭೂತಾನ್‌ ಪ್ರವಾಸಕ್ಕೆ ಹೊರಟ ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (Prime Minister Narendra Modi) ಇವತ್ತಿನಿಂದ...

ಹಾಸನದ ಜನಪ್ರಿಯ ಆಸ್ಪತ್ರೆ ಮಾಲೀಕ ಡಾ.ಅಬ್ದುಲ್‌ ಬಶೀರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು

ನ್ಯಾಯಾಲಯಕ್ಕೆ ಸುಳ್ಳು ಸಾಕ್ಷ್ಯ ಮತ್ತು ಸುಳ್ಳು ದಾಖಲೆಗಳನ್ನು ಸಲ್ಲಿಸಿದ ಆರೋಪದಡಿಯಲ್ಲಿ ಹಾಸನ...

ದೆಹಲಿ ಕೆಂಪುಕೋಟೆ ಬಳಿ ಸ್ಫೋಟ – 8 ಸಾವು

ದೆಹಲಿಯ ಕೆಂಪುಕೋಟೆಯಲ್ಲಿ ಸಂಭವಿಸಿರುವ ಕಾರ್‌ ಬಾಂಬ್‌ ಸ್ಫೋಟದಲ್ಲಿ 8 ಮಂದಿ ಪ್ರಾಣ...