ಬಿಜೆಪಿ (BJP) ಅಧಿಕಾರದಲ್ಲಿ ಇರುತ್ತೋ ಬಿಡುತ್ತೋ ನಾವು ವಿಸ್ತರಿಸಿಕೊಳ್ಳುತ್ತೇವೆ ಮತ್ತು ಬೆಳೆಯುತ್ತೇವೆ ಎಂದು ಆರ್‌ಎಸ್‌ಎಸ್ (RSS) ಹೇಳಿದೆ.
ಆರ್‌ಎಸ್‌ಎಸ್ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂಗ್ಲೀಷ್ ಸುದ್ದಿವಾಹಿನಿ NDTVಗೆ ನೀಡಿದ ಸಂದರ್ಶನದಲ್ಲಿ ಆರ್‌ಎಸ್‌ಎಸ್‌ನ ಪ್ರಚಾರ ಪ್ರಮುಖ ಸುನಿಲ್ ಅಂಬೆಕರ್ (Prachar Pramukh Sunil Ambekar) ಈ ಸ್ಪಷ್ಟನೆ ಕೊಟ್ಟಿದ್ದಾರೆ.
ಬಿಜೆಪಿ ಚುನಾವಣೆಯಲ್ಲಿ ಗೆಲ್ಲುತ್ತೋ ಅಥವಾ ಸೋಲುತ್ತೋ, ಮರು ದಿನ ಬೆಳಗ್ಗೆ ಎದ್ದು ಸಂಘ ಎಂದಿನಂತೆ ತನ್ನ ಕೆಲಸವನ್ನು ಮುಂದುವರೆಸುತ್ತದೆ
ಎಂದು ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಆರ್‌ಎಸ್‌ಎಸ್ ಬೆಳವಣಿಗೆಗೆ ಅದು ಬಿಜೆಪಿಯನ್ನು ಅಧಿಕಾರದಲ್ಲಿ ಉಳಿಯುವಂತೆ ನೋಡಿಕೊಳ್ಳುವುದು ಅಗತ್ಯ ಎಂಬ ವಾದಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಅಂತಹ ಅಲೋಚನೆಗಳನ್ನು ಹೊಂದಿರುವವರು ಅರ್ಥ ಮಾಡಿಕೊಳ್ಳಬೇಕು, ಎಲ್ಲದರ ಹೊರತಾಗಿಯೂ ಕೆಲಸ ಮಾಡುತ್ತದೆ. ಸಂಘ ಶಿಕ್ಷಣ, ಕಾರ್ಮಿಕ ಮತ್ತು ರಾಜಕೀಯದಲ್ಲೂ ತನ್ನ ಪ್ರಭಾವವನ್ನು ಹೊಂದಿದೆ. ತನ್ನ ಕೆಲಸದಲ್ಲಿ ಸಂಘವನ್ನು ಒಬ್ಬ ವ್ಯಕ್ತಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾನೆ ಎಂದರೆ ಅದರ ಅರ್ಥ ಯಾವುದೇ ರೀತಿಯ ಕೆಲಸವನ್ನು ಮಾಡುವುದಕ್ಕಾದರೂ ಪೂರಕವಾದ ವಾತಾವರಣವನ್ನು ಸೃಷ್ಟಿದ್ದಾನೆ ಎಂದು
ಎಂದು ಆರ್‌ಎಸ್‌ಎಸ್‌ನ ಪ್ರಚಾರ ಪ್ರಮುಖ ಸುನಿಲ್ ಅಂಬೆಕರ್ ಅವರು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.


