ಹಾಸನ ನಗರದಲ್ಲಿರುವ ಹಾಸನಾಂಬ ಮತ್ತು ಸಿದ್ದೇಶ್ವರ ಸ್ವಾಮಿ ದರ್ಶನಕ್ಕೆ (Hasanamba Darshana) ಭಕ್ತಾದಿಗಳು ದಾಖಲೆ ಪ್ರಮಾಣದಲ್ಲಿ ಬರುತ್ತಿದ್ದಾರೆ.
ಇವತ್ತು ಬೆಳಗ್ಗೆ 8 ಗಂಟೆಯವರೆಗೆ 300 ರೂಪಾಯಿ ಮುಖಬೆಲೆಯ 27,756 ಟಿಕೆಟ್‌ಗಳ ಮಾರಾಟವಾಗಿದೆ. ಇವುಗಳಲ್ಲಿ 4,499 ಟಿಕೆಟ್‌ಗಳು ಆನ್‌ಲೈನ್ ಮೂಲಕ ಮಾರಾಟವಾಗಿದ್ದರೆ, 23,260 ಟಿಕೆಟ್‌ಗಳನ್ನು ಭಕ್ತಾದಿಗಳು ದೇವಸ್ಥಾನದಲ್ಲಿ ಖರೀದಿಸಿ ದರ್ಶನ ಪಡೆದಿದ್ದಾರೆ.
1 ಸಾವಿರ ರೂಪಾಯಿ ಮುಖಬೆಲೆಯ 3,912 ಟಿಕೆಟ್‌ಗಳು ಆನ್‌ಲೈನ್ (Online Ticket) ಮೂಲಕ ಮಾರಾಟವಾಗಿದೆ. 8,484 ಮಂದಿ ಭಕ್ತಾದಿಗಳು ದೇವಸ್ಥಾನದಲ್ಲೇ ಟಿಕೆಟ್ ಪಡೆದು ದರ್ಶನ ಪಡೆದಿದ್ದಾರೆ.
17,727 ಲಡ್ಡು ಪ್ರಸಾದ ಮಾರಾಟವಾಗಿದೆ.
ಟಿಕೆಟ್‌ಗಳ ಮಾರಾಟದಿಂದ 1 ಕೋಟಿ 23 ಲಕ್ಷದ 86 ಸಾವಿರ ರೂಪಾಯಿ ಆದಾಯ ಸಂಗ್ರಹವಾಗಿದೆ. ಲಡ್ಡು ಪ್ರಸಾದ ಮಾರಾಟದಿಂದ 17 ಲಕ್ಷದ 33 ಸಾವಿರದ 700 ರೂಪಾಯಿ ಆದಾಯ ಬಂದಿದೆ. ಒಟ್ಟು 2 ಕೋಟಿ 24 ಲಕ್ಷದ 57 ಸಾವಿರದ 400 ರೂಪಾಯಿ ಆದಾಯ ಬಂದಿದೆ ಎಂದು ಹಾಸನ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಅಕ್ಟೋಬರ್ 9ರಂದು ಬಾಗಿಲು ತೆರೆಯಲಾಗಿದ್ದು ಅಕ್ಟೋಬರ್ 22ರವರೆಗೂ ಹಾಸನಾಂಬೆಯ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ನೀಡಲಾಗಿದೆ.


