13,000 ಕೋಟಿ ರೂಪಾಯಿ ಮೊತ್ತದ ಬ್ಯಾಂಕ್ ವಂಚನೆ ಆರೋಪಿ ಮೆಹುಲ್ ಚೋಕ್ಸಿ (Mehul Choksi) ಭಾರತಕ್ಕೆ ಗಡೀಪಾರು ಮಾಡುವಂತೆ ಬೆಲ್ಜಿಯಂನ ನ್ಯಾಯಾಲಯ ಆದೇಶ ನೀಡಿದೆ.
ಐದು ತಿಂಗಳ ಹಿಂದೆ ಈತನನ್ನು ಬೆಲ್ಜಿಯಂನಲ್ಲಿ ಬಂಧಿಸಲಾಗಿತ್ತು. ಚೋಕ್ಸಿ ಬಂಧನದ ಬಳಿಕ ಆತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಭಾರತ ಮಾಡಿಕೊಂಡಿದ್ದ ಮನವಿ ಕಾನೂನುಬದ್ಧವಾಗಿದೆ ಎಂದು ಬೆಲ್ಜಿಯಂನ (Belgium) ನ್ಯಾಯಾಲಯ ಹೇಳಿದೆ.
ಈ ಮೂಲಕ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (Punjab National Bank) ಅಪಾರ ಪ್ರಮಾಣದ ಸಾಲ ವಂಚಿಸಿ ಓಡಿಹೋಗಿದ್ದ ಗುಜರಾತ್ ಮೂಲದ ಚೋಕ್ಸಿಯನ್ನು ಭಾರತಕ್ಕೆ ವಾಪಸ್ ಕರೆತರುವ ಭಾರತದ ಪ್ರಯತ್ನಕ್ಕೆ ಮಹತ್ವದ ಗೆಲುವು ಸಿಕ್ಕಿದೆ.
ಆದರೆ ಕೆಳ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶ ಮೆಹುಲ್ ಚೋಕ್ಸಿ ಇದೆ.
ಈತನನ್ನು ಜೈಲಿನಿಂದ ಬಿಡುಗಡೆ ಮಾಡಿದರೆ ಓಡಿಹೋಗುವ ಅಪಾಯವಿದೆ ಎಂದೂ ಬೆಲ್ಜಿಯಂ ಸರ್ಕಾರದ ಪರ ವಕೀಲರು ವಾದಿಸಿದ್ದರು.


