ಹಾಸನ ನಗರದಲ್ಲಿರುವ ಹಾಸನಾಂಬೆ ಮತ್ತು ಸಿದ್ದೇಶ್ವರ ಸ್ವಾಮಿ ದರ್ಶನಕ್ಕೆ ಬರುವ ಗಣ್ಯ ವ್ಯಕ್ತಿಗಳ ಕುಟುಂಬಸ್ಥರು ಅಥವಾ ಆಪ್ತರಿಗಾಗಿಗಲೀ ಶಿಷ್ಟಾಚಾರ (protocol) ಪಾಲನೆ ಮಾಡುವಂತಿಲ್ಲ ಎಂದು ಹಾಸನ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಶಿಷ್ಟಾಚಾರ ಪಾಲನೆ ಮಾಡುವ ಸಂಬಂಧ ಹಾಸನ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಹಾಸನಾಂಬ ದೇವಿ ದರ್ಶನ ಮತ್ತು ಸಿದ್ದೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಪ್ರವಾಸಿ ಮಂದಿರದಲ್ಲಿ ಶಿಷ್ಟಾಚಾರ ನಿರ್ವಹಣೆ ಮಾಡಲು ಸೂಚಿಸಲಾಗಿರುತ್ತದೆ. ಹಾಸನಾಂಬ ಜಾತ್ರ ಮಹೋತ್ಸವವು ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಇರುತ್ತದೆ. ಪ್ರತಿ ದಿನ ಎರಡು ಲಕ್ಷಕ್ಕೂ ಹೆಚ್ಚಿನ ಸಂಖ್ಯೆ ಭಕ್ತರು ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಆದ್ದರಿಂದ ಶಿಷ್ಟಾಚಾರ ವ್ಯವಸ್ಥೆ ನಿರ್ವಹಿಸಲು ಕಷ್ಟ ಸಾಧ್ಯವಾಗಿರುತ್ತದೆ. ಆದ್ದರಿಂದ ಮಾರ್ಚ್ ೨೨ರಂದು ಸರ್ಕಾರ ಹೊರಡಿಸಿದ್ದ ಸುತ್ತೋಲೆ ಪ್ರಕಾರ ಗಣ್ಯ ವ್ಯಕ್ತಿಗಳೇ ಖುದ್ದು ಬಂದಲ್ಲಿ ಮಾತ್ರ ಶಿಷ್ಟಾಚಾರ ವ್ಯವಸ್ಥೆ ಕಲ್ಪಿಸಬೇಕಿರುತ್ತದೆ. ಅವರ ಅನುಪಸ್ಥಿತಿಯಲ್ಲಿ ಶಿಷ್ಟಾಚಾರ ಪತ್ರದೊಡನೆ ಬಂದ ಅವರ ಕುಟುಂಬಸ್ಥರಿಗಾಗಲೀ ಅಥವಾ ಇತರಿಗಾಗಲೀ ಶಿಷ್ಟಾಚಾರ ವ್ಯವಸ್ಥೆ ಕಲ್ಪಿಸುವಂತಿಲ್ಲ. ಇದನ್ನು ಕಟ್ಟುನಿಟ್ಟಾಗಿ ನಿರ್ವಹಿಸಿ
ಎಂದು ಹಾಸನ ಉಪ ವಿಭಾಗಾಧಿಕಾರಿ ಜೆ ಬಿ ಮಾರುತಿ ಅವರು ತಮ್ಮ ಆದೇಶದಲ್ಲಿ ಸೂಚಿಸಿದ್ದಾರೆ.


