Bihar Assembly Election: MGB ಮೈತ್ರಿಕೂಟದ ನಿದ್ದೆಗೆಡಿಸಿದ AIMIMನ 25..!

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar Assembly Election) ರಾಷ್ಟ್ರೀಯ ಜನತಾದಳ (Rastriya Janata Dal RJD), ಕಾಂಗ್ರೆಸ್‌ (Congress) ಮತ್ತು ಎಡಪಕ್ಷಗಳನ್ನೊಳಗೊಂಡ (Left Parties) ಮಹಾಮೈತ್ರಿಕೂಟಕ್ಕೆ ಅಸಾದುದ್ದೀನ್‌ ಓವೈಸಿ ( Asaduddin Owaisi) ಅವರ ಎಂಐಎಂಐಎಂ (All India Majlis-e-Ittehadul Muslimeen -AIMIM) ಆಘಾತ ನೀಡಿದೆ.

(ಪ್ರತಿಕ್ಷಣ ಸುದ್ದಿಗಾಗಿ ವಾಟ್ಸಾಪ್‌ ನಂಬರ್‌ 97411 83147 ಅಥವಾ pratikshananews@gmail.com ನ್ನು ಸಂಪರ್ಕಿಸಿ)

100 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿರುವ ಎಂಐಎಂ ತನ್ನ 25 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇವತ್ತು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಇಬ್ಬರು ಹಿಂದೂಗಳಿಗೆ ಟಿಕೆಟ್‌ ನೀಡಲಾಗಿದೆ.

  1. ಅಮೌರ್‌ – ಅಖ್ತಾರುಲ್‌ ಇಮಾನ್‌
  2. ಬಲರಾಂಪುರ್‌ – ಆದಿಲ್‌ ಹಸನ್‌
  3. ದಾಕಾ – ರಾಣಾ ರಂಜಿತ್‌ ಸಿಂಗ್‌
  4. ನರ್‌ಕಟಿಯಾ – ಶಮಿಮುಲ್‌ ಹಖ್‌
  5. ಗೋಪಾಲ್‌ಗಂಜ್‌ -ಅನಾಸ್‌ ಸಲಾಂ
  6. ಜೋಕಿ ಹಟ್‌ – ಮುರ್ಷಿದ್‌ ಆಲಂ
  7. ಬಹದ್ದೂರುಗಂಜ್‌ – ತೌಸಿಫ್‌ ಆಲಂ
  8. ಥಾಕೂರ್‌ಗಂಜ್‌ – ಗುಲಾಂ ಹಸನೈನ್‌
  9. ಕಿಸಾನ್‌ಗಂಜ್‌ – ಶಾಮಾಸ್‌ ಆಗಾಜ್‌
  10. ಬೈಸಿ – ಗುಲಾಂ ಸರ್ವರ್‌
  11. ಶೇರ್‌ಘಾಟಿ – ಶಾನ್‌ -ಇ-ಅಲಿ-ಖಾನ್‌
  12. ನಾಥ್‌ ನಗರ್‌ – ಮೊಹ್ಮದ್‌ ಇಸ್ಮಾಯಿಲ್‌
  13. ಸಿವಾನ್‌ – ಮೊಹಮ್ಮದ್‌ ಕೈಫ್‌
  14. ಕಿಯೋಟಿ – ಅನಿಸುರ್‌ ರಹಮಾನ್‌
  15. ಜಾಲೆ – ಫೈಸಲ್‌ ರಹಮಾನ್‌
  16. ಸಿಕಂದ್ರಾ – ಮನೋಜ್‌ ಕುಮಾರ್‌ ದಾಸ್‌
  17. ಮುಂಗೇರ್‌ – ಡಾ. ಮುನಾಝೀರ್‌ ಹಸನ್‌
  18. ಗೋರಾಬೋರಂ – ಅಖ್ತರ್‌ ಶಾಹನ್‌ಶಾ
  19. ಖಾಸ್ಬಾ – ಶಹನವಾಜ್‌ ಆಲಂ
  20. ಅರಾರಿಯಾ – ಮೊಹಮ್ಮದ್‌ ಮಜ್ಸೂರ್‌ ಆಲಂ
  21. ಬರಾರಿ – ಮೊಹಮ್ಮದ್‌ ಮತಿಯುರ್‌ ರೆಹಮಾನ್‌
  22. ಕೋಚ್‌ಧಾಮನ್‌ – ಸರ್ವರ್‌ ಆಲಂ
  23. ನವಡಾ – ನಾಸೀಮಾ ಖಾಟೂನ್‌
  24. ಮಧುಬನಿ – ರಶೀದ್‌ ಖಲೀಲ್‌ ಅನ್ಸಾರಿ
  25. ದರ್ಭಾಂಗ ಗ್ರಾಮೀಣ – ಮೊಹಮ್ಮದ್‌ ಜಲಾಲ್‌

2020ರ ವಿಧಾನಸಭಾ ಚುನಾವಣೆಯಲ್ಲಿ AIMIM ಗ್ರ್ಯಾಂಡ್‌ ಡೆಮಾಕ್ರಾಟಿಕ್‌ ಸೆಕ್ಯೂಲರ್‌ ಫ್ರಂಟ್‌  ಮೈತ್ರಿಯಡಿಯಲ್ಲಿ BSP ಮತ್ತು RLSP ಜೊತೆಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಿತ್ತು.

5 ಲಕ್ಷದ 23 ಸಾವಿರ ಮತಗಳನ್ನು ಪಡೆದಿದ್ದ AIMIM 5 ವಿಧಾನಸಭಾ ಕ್ಷೇತ್ರಗಳನ್ನು ಗೆದ್ದು ಕಾಂಗ್ರೆಸ್‌ ಮತ್ತು RJD ಮೈತ್ರಿಕೂಟದ ನಿದ್ದೆಗೆಡಿಸಿತ್ತು.

ಅಮೌರ್‌, ಬೈಸಿ, ಕೋಚ್‌ಧಾಮನ್‌, ಬಹದ್ದೂರ್‌ಗಂಜ್‌ ಮತ್ತು ಜೋಕಿಹಟ್‌ನಲ್ಲಿ AIMIM ಶಾಸಕರು ಗೆದ್ದಿದ್ದರು. ಈ ಮೂಲಕ ಸೀಮಾಂಚಲ ಭಾಗದಲ್ಲಿ ಹೊಸ ರಾಜಕೀಯ ಅಲೆಯನ್ನೃ ಸೃಷ್ಟಿಸಿತ್ತು.

ಆದರೆ 2022ರಲ್ಲಿ ಎಂಐಎಂನ ಐವರು ಶಾಸಕರ ಪೈಕಿ ಅಮೌರ್‌ ಶಾಸಕ ಅಖ್ತರುಲ್‌ ಇಮಾನ್‌ ಹೊರತುಪಡಿಸಿ ಉಳಿದ ನಾಲ್ವರು ಶಾಸಕರು RJDಗೆ ಸೇರ್ಪಡೆಯಾಗಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಚಪ್ಪಲಿ ವೀರ ರಾಜೀವ್‌ ಗೌಡನಿಗೆ ಜಾಮೀನು..!

ಶಿಡ್ಲಘಟ್ಟ ನಗರಸಭೆ ಆಯುಕ್ತೆಗೆ ಬೆದರಿಕೆಯೊಡ್ಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಕೇಸ್ ನಲ್ಲಿ...

ಬಿಗ್ ಬಾಸ್ ಸ್ಪಾನ್ಸರ್ – ಉದ್ಯಮಿ C.J.ರಾಯ್ ಆತ್ಮಹತ್ಯೆ

ಬೆಂಗಳೂರಿನ ಖ್ಯಾತ ಉದ್ಯಮಿ ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿಜೆ ರಾಯ್ ಶುಕ್ರವಾರ...

BJPಯ ಅಶ್ವಥ್ ನಾರಾಯಣಗೆ 1 ವರ್ಷ ಜೈಲು- ಭೂಕಬಳಿಕೆ ಕೇಸ್ ನಲ್ಲಿ ಜೈಲು ಪಾಲಾದ BJP ಮಾಜಿ MLC..!

ಬಿಜೆಪಿ ಮಾಜಿ ಎಂಎಲ್ ಸಿ ಅಶ್ವಥ್ ನಾರಾಯಣಗೆ ಒಂದು ವರ್ಷ ಜೈಲು...

ಬೆಂಗಳೂರಲ್ಲಿ ಪವರ್ ಕಟ್- ಈ ಏರಿಯಾಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೂ ಕರೆಂಟ್ ಇರಲ್ಲ..!

ಬೆಂಗಳೂರಿನ 100ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಜನವರಿ 21ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ....