ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar Assembly Election) ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 24ರಿಂದ ಅಬ್ಬರದ ಪ್ರಚಾರ ಆರಂಭಿಸಲಿದ್ದಾರೆ.
ಅಕ್ಟೋಬರ್ 24ರಂದು ಪ್ರಧಾನಿ ಮೋದಿಯವರು (Prime Minister Narendra Modi) ಸಮಷ್ಟಿಪುರ ಮತ್ತು ಬೆಗುಸಸರೈನಲ್ಲಿ ಸಾರ್ವಜನಿಕ ಚುನಾವಣಾ ಭಾಷಣ ಮಾಡಲಿದ್ದಾರೆ.
ಚುನಾವಣಾ ಪ್ರಚಾರಕ್ಕಾಗಿ ಆಗಮಿಸಲಿರುವ ಪ್ರಧಾನಿಯವರು ಸಮಷ್ಟಿಪುರ ಜಿಲ್ಲೆಯ ಕರ್ಪೂರಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಕರ್ಪೂರಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಕರ್ಪೂರಿ ಗ್ರಾಮ ಭಾರತ ರತ್ನ ಕರ್ಪೂರಿ ಥಾಕೂರು ಅವರ ಹುಟ್ಟೂರು. ಕರ್ಪೂರಿ ಥಾಕೂರು ಅವರಿಗೆ ಪ್ರಧಾನಿ ಮೋದಿ ಸರ್ಕಾರ ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ನೀಡಿ ಗೌರವಿಸಿತ್ತು.
ಅಕ್ಟೋಬರ್ 30ರಂದು ಬಿಹಾರಕ್ಕೆ ಮತ್ತೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಮುಜಾಫರ್‌ಪುರ್ ಮತ್ತು ಛಪ್ರಾದಲ್ಲಿ ಎರಡು ಸಮಾವೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಇದಾದ ಬಳಿಕ ನವೆಂಬರ್ 2, 3, 6, 7ರಂದು ಸತತ ನಾಲ್ಕು ದಿನ ಪ್ರಚಾರ ಕೈಗೊಳ್ಳಲಿದ್ದಾರೆ.
ನವೆಂಬರ್ 6ರಂದು 121 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದ್ದು, ನವೆಂಬರ್ 11ರಂದು 122 ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಮತದಾನ ನಡೆಯಲಿದೆ.


