ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar Assembly Election) ರಾಷ್ಟ್ರೀಯ ಜನತಾದಳ (Rastriya Janata Dal RJD), ಕಾಂಗ್ರೆಸ್ (Congress) ಮತ್ತು ಎಡಪಕ್ಷಗಳನ್ನೊಳಗೊಂಡ (Left Parties) ಮಹಾಮೈತ್ರಿಕೂಟಕ್ಕೆ ಅಸಾದುದ್ದೀನ್ ಓವೈಸಿ ( Asaduddin Owaisi) ಅವರ ಎಂಐಎಂಐಎಂ (All India Majlis-e-Ittehadul Muslimeen -AIMIM) ಆಘಾತ ನೀಡಿದೆ.
(ಪ್ರತಿಕ್ಷಣ ಸುದ್ದಿಗಾಗಿ ವಾಟ್ಸಾಪ್ ನಂಬರ್ 97411 83147 ಅಥವಾ pratikshananews@gmail.com ನ್ನು ಸಂಪರ್ಕಿಸಿ)
100 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿರುವ ಎಂಐಎಂ ತನ್ನ 25 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇವತ್ತು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಇಬ್ಬರು ಹಿಂದೂಗಳಿಗೆ ಟಿಕೆಟ್ ನೀಡಲಾಗಿದೆ.
- ಅಮೌರ್ – ಅಖ್ತಾರುಲ್ ಇಮಾನ್
- ಬಲರಾಂಪುರ್ – ಆದಿಲ್ ಹಸನ್
- ದಾಕಾ – ರಾಣಾ ರಂಜಿತ್ ಸಿಂಗ್
- ನರ್‌ಕಟಿಯಾ – ಶಮಿಮುಲ್ ಹಖ್
- ಗೋಪಾಲ್‌ಗಂಜ್ -ಅನಾಸ್ ಸಲಾಂ
- ಜೋಕಿ ಹಟ್ – ಮುರ್ಷಿದ್ ಆಲಂ
- ಬಹದ್ದೂರುಗಂಜ್ – ತೌಸಿಫ್ ಆಲಂ
- ಥಾಕೂರ್‌ಗಂಜ್ – ಗುಲಾಂ ಹಸನೈನ್
- ಕಿಸಾನ್‌ಗಂಜ್ – ಶಾಮಾಸ್ ಆಗಾಜ್
- ಬೈಸಿ – ಗುಲಾಂ ಸರ್ವರ್
- ಶೇರ್‌ಘಾಟಿ – ಶಾನ್ -ಇ-ಅಲಿ-ಖಾನ್
- ನಾಥ್ ನಗರ್ – ಮೊಹ್ಮದ್ ಇಸ್ಮಾಯಿಲ್
- ಸಿವಾನ್ – ಮೊಹಮ್ಮದ್ ಕೈಫ್
- ಕಿಯೋಟಿ – ಅನಿಸುರ್ ರಹಮಾನ್
- ಜಾಲೆ – ಫೈಸಲ್ ರಹಮಾನ್
- ಸಿಕಂದ್ರಾ – ಮನೋಜ್ ಕುಮಾರ್ ದಾಸ್
- ಮುಂಗೇರ್ – ಡಾ. ಮುನಾಝೀರ್ ಹಸನ್
- ಗೋರಾಬೋರಂ – ಅಖ್ತರ್ ಶಾಹನ್‌ಶಾ
- ಖಾಸ್ಬಾ – ಶಹನವಾಜ್ ಆಲಂ
- ಅರಾರಿಯಾ – ಮೊಹಮ್ಮದ್ ಮಜ್ಸೂರ್ ಆಲಂ
- ಬರಾರಿ – ಮೊಹಮ್ಮದ್ ಮತಿಯುರ್ ರೆಹಮಾನ್
- ಕೋಚ್‌ಧಾಮನ್ – ಸರ್ವರ್ ಆಲಂ
- ನವಡಾ – ನಾಸೀಮಾ ಖಾಟೂನ್
- ಮಧುಬನಿ – ರಶೀದ್ ಖಲೀಲ್ ಅನ್ಸಾರಿ
- ದರ್ಭಾಂಗ ಗ್ರಾಮೀಣ – ಮೊಹಮ್ಮದ್ ಜಲಾಲ್
2020ರ ವಿಧಾನಸಭಾ ಚುನಾವಣೆಯಲ್ಲಿ AIMIM ಗ್ರ್ಯಾಂಡ್ ಡೆಮಾಕ್ರಾಟಿಕ್ ಸೆಕ್ಯೂಲರ್ ಫ್ರಂಟ್ ಮೈತ್ರಿಯಡಿಯಲ್ಲಿ BSP ಮತ್ತು RLSP ಜೊತೆಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಿತ್ತು.
5 ಲಕ್ಷದ 23 ಸಾವಿರ ಮತಗಳನ್ನು ಪಡೆದಿದ್ದ AIMIM 5 ವಿಧಾನಸಭಾ ಕ್ಷೇತ್ರಗಳನ್ನು ಗೆದ್ದು ಕಾಂಗ್ರೆಸ್ ಮತ್ತು RJD ಮೈತ್ರಿಕೂಟದ ನಿದ್ದೆಗೆಡಿಸಿತ್ತು.
ಅಮೌರ್, ಬೈಸಿ, ಕೋಚ್‌ಧಾಮನ್, ಬಹದ್ದೂರ್‌ಗಂಜ್ ಮತ್ತು ಜೋಕಿಹಟ್‌ನಲ್ಲಿ AIMIM ಶಾಸಕರು ಗೆದ್ದಿದ್ದರು. ಈ ಮೂಲಕ ಸೀಮಾಂಚಲ ಭಾಗದಲ್ಲಿ ಹೊಸ ರಾಜಕೀಯ ಅಲೆಯನ್ನೃ ಸೃಷ್ಟಿಸಿತ್ತು.
ಆದರೆ 2022ರಲ್ಲಿ ಎಂಐಎಂನ ಐವರು ಶಾಸಕರ ಪೈಕಿ ಅಮೌರ್ ಶಾಸಕ ಅಖ್ತರುಲ್ ಇಮಾನ್ ಹೊರತುಪಡಿಸಿ ಉಳಿದ ನಾಲ್ವರು ಶಾಸಕರು RJDಗೆ ಸೇರ್ಪಡೆಯಾಗಿದ್ದರು.


