ಗಣಿ ಇಲಾಖೆಯಲ್ಲಿ ಭ್ರಷ್ಟಾಚಾರ – 10 ಕಿಂಗ್‌ಪಿನ್‌ ಅಧಿಕಾರಿಗಳ ಹೆಸರು ಉಲ್ಲೇಖಿಸಿ CMಗೆ ಆರ್ಥಿಕ ಸಲಹೆಗಾರ ರಾಯರೆಡ್ಡಿ ಪತ್ರ

ಕೊಪ್ಪಳ ಜಿಲ್ಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ‌ ಇಲಾಖೆಯಲ್ಲಿ ನಡೆಯುತ್ತಿರುವ ಭಾರೀ ಭ್ರಷ್ಟಾಚಾರದ ಬಗ್ಗೆ ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಬಸವರಾಜ ರಾಯರೆಡ್ಡಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿರುವ 10 ಮಂದಿ ಭ್ರಷ್ಟ ಅಧಿಕಾರಿಗಳ ಪಟ್ಟಿ ಮಾಡಿರುವ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಈ ಭ್ರಷ್ಟ ಕಿಂಗ್‌ಪಿನ್‌ಗಳಿಂದ ರಾಜ್ಯ ಸರ್ಕಾರಕ್ಕೆ ಭಾರೀ ಪ್ರಮಾಣದಲ್ಲಿ ರಾಯಧನದ ನಷ್ಟವಾಗುತ್ತಿದ್ದು, ಈ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದಲ್ಲದೇ ಕಠಿಣ ಕಾನೂನು ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರೂ ಆಗಿರುವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅವರಿಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿಯವರು ಪತ್ರವನ್ನು ಲಗತ್ತಿಸಿದ್ದಾರೆ.

 

ಮಾನ್ಯ ಮುಖ್ಯಮಂತ್ರಿಗಳಿಗೆ ನನ್ನ ವಿಶೇಷ ಮನವಿ. ನನ್ನ ಈ ಮನವಿಯನ್ನು ತಾವು ತೀವ್ರವಾಗಿ ಪರಿಗಣಿಸಿ, ಸರ್ಕಾರಕ್ಕೆ ಉಂಟಾಗುತ್ತಿರುವ ರಾಜಧನದ ನಷ್ಟವನ್ನು ತಡೆಯಲು ಕೊಪ್ಪಳ ಜಿಲ್ಲೆಯ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೀರೆಂಬ ವಿಶ್ವಾಸದಿಂದ ನಾನು ಈ ಪತ್ರ ಬರೆಯುತ್ತಿದ್ದೇನೆ.

ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 85 ಕಿ.ಮೀ.ಕ್ಕೂ ಹೆಚ್ಚು ತುಂಗಭದ್ರ ನದಿಯ ತಟವಿದ್ದು, ನೈಸರ್ಗಿಕವಾಗಿ ಸಾಕಷ್ಟು ಮರಳು ಶೇಖರಣೆಯಾಗುತ್ತಿರುತ್ತದೆ. ಪ್ರತಿ ದಿನ ಸುಮಾರು 100 ರಿಂದ 150 ಟ್ರಕ್ ಮರಳು ಹಾಗೂ ಜಲ್ಲಿ ಕೊಪ್ಪಳ ಜಿಲ್ಲೆಯಿಂದ ಗದಗ, ಬಳ್ಳಾರಿ, ಹುಬ್ಬಳ್ಳಿ, ಧಾರವಾಡ, ಚಿತ್ರದುರ್ಗ ಮತ್ತು ಬೆಂಗಳೂರು ನಗರಗಳಿಗೆ ಅನಧಿಕೃತವಾಗಿ ಸಾಗಣೆಯಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಅಪಾರ ಪ್ರಮಾಣದ ರಾಜಧನದ (Royalty) ನಷ್ಟವುಂಟಾಗುತ್ತಿದೆ. ಇದರಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಇತರೆ ಸ್ಥಳೀಯ ಇಲಾಖೆಗಳ ಅಧಿಕಾರಿಗಳು ಶಾಮಿಲಾಗಿ ಭಾರಿ ಭ್ರಷ್ಟಾಚಾರ ನಡೆಸುತ್ತಿದ್ದಾರೆಂದು (High Corruption) ಸಾರ್ವಜನಿಕರಿಂದ ದೂರು ಬಂದಿರುತ್ತದೆ.

ಸುಮಾರು 200ಕ್ಕೂ ಹೆಚ್ಚು ಜನರ ಸ್ಯಾಂಡ್ ಮಾಫಿಯಾ ಗ್ಯಾಂಗ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಲಾಖೆಯ ಅಧಿಕಾರಿಗಳು ಇದರೊಂದಿಗೆ ಶಾಮಿಲಾಗಿ ನಡೆಸುತ್ತಿರುವ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಆದುದರಿಂದ, ಈ ಮರಳು ಹಾಗೂ ಜಲ್ಲಿ ದಂದೆಗಳನ್ನು ನಿಲ್ಲಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಶೇಷ ಕಾರ್ಯಪಡೆಯನ್ನು ರಚಿಸಬೇಕು ಹಾಗೂ ಈ ಕೆಳಕಂಡ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕಾಗಿದೆ.

ಕೊಪ್ಪಳ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಳಕಂಡ ಭ್ರಷ್ಟ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಲು ಕೋರಿದೆ.

  1. ಪುಷ್ಪಲತಾ ಎಸ್. ಕವಲೂರು, ಹಿರಿಯ ಭೂವಿಜ್ಞಾನಿ – ಇವರು ಸುಮಾರು ಐದು ತಿಂಗಳುಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಯಾವುದೇ ಕಾನೂನಿನ ಅರಿವು ಇಲ್ಲದೇ ಕೆಳ ಹಂತದ ಅಧಿಕಾರಿಗಳ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ. ಹಾಗೂ ಸಂಬಂಧಿಕರನ್ನು ಒಟ್ಟುಗೂಡಿಸಿಕೊಂಡು ದಂದೆಗಳನ್ನು ನಡೆಸುತ್ತಿದ್ದಾರೆ ಎಂದು ವರದಿ ಬಂದಿದೆ. ಆದುದರಿಂದ, ಇವರನ್ನು ಕೂಡಲೇ ಜಿಲ್ಲೆಯಿಂದ ಬೇರೆ ಕಡೆ ವರ್ಗಾವಣೆ ಮಾಡಬೇಕಾಗಿರುತ್ತದೆ.
  2. ಸನಿತ್ ಸಿ, ಭೂವಿಜ್ಞಾನಿ, ಇವರು ಮೂರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಇವರಿಗೆ ಯಾವುದೇ ಕಾನೂನಿನ ಅರಿವು ಇಲ್ಲದೇ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಮತ್ತು ಇವರೇ ಭ್ರಷ್ಟಾಚಾರದ ಕಿಂಗ್ ಪಿನ್ ಎಂದು ಸಾರ್ವಜನಿಕರಿಂದ ವರದಿ ಬಂದಿರುತ್ತದೆ. ಆದುದರಿಂದ, ಇವರನ್ನು ತಕ್ಷಣವೇ ಜಿಲ್ಲೆಯಿಂದ ಬೇರೆ ಕಡೆ
    ವರ್ಗಾವಣೆ ಮಾಡಬೇಕಾಗಿರುತ್ತದೆ.
  3. ನಾಗರಾಜು ಈ ಭೂವಿಜ್ಞಾನಿ, ಇವರು ಕಳೆದ 02 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರನ್ನು ಸಹ ಕೂಡಲೇ ಜಿಲ್ಲೆಯಿಂದ ಬೇರೆ ಕಡೆ ಬಿಡುಗಡೆಗೊಳಿಸಬೇಕಾಗಿರುತ್ತದೆ.
  4. ಸೈಯದ್ ಪಾಜಿಲ್, ಭೂವಿಜ್ಞಾನಿ ಇವರನ್ನು ಈಗಾಗಲೇ ವಿಜಯನಗರ ಜಿಲ್ಲೆಗೆ ದಿನಾಂಕ: 30.06.2025 ರಂದು ವರ್ಗಾವಣೆ ಮಾಡಲಾಗಿದ್ದು, ಕೂಡಲೇ ಇವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು.
  5. ನವೀನ್ ಕುಮಾರ್, ಸಹಾಯಕ ಅಭಿಯಂತರರು, ಇವರು ಕಳೆದ 2012-13 ರಿಂದ 2025ನೇ ಸಾಲಿನವರೆಗೆ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದು, ಇವರು ಭ್ರಷ್ಟಾಚಾರದಲ್ಲಿ ಮಾಸ್ಟರ್ ಕಿಂಗ್ ಪಿನ್ ಎಂದು ಹೆಸರು ವಾಸಿಯಾಗಿರುತ್ತಾರೆಂದು ವರದಿ ಬಂದಿರುತ್ತದೆ. ಆದುದರಿಂದ ಇವರನ್ನು ಜಿಲ್ಲೆಯಿಂದ ಬೇರೆ ಕಡೆ ವರ್ಗಾವಣೆ ಮಾಡಬೇಕು.
  6. ಮಲ್ಲಿಕಾರ್ಜುನ ಕಮ್ಮಾರ, ಅಧೀಕ್ಷಕರು, ಇವರು ಕಳೆದ 09 ವರ್ಷಗಳಿಂದ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರು ಕೂಡ
    ಭ್ರಷ್ಟ ಅಧಿಕಾರಿಯಾಗಿದ್ದು, ಬೇರೆ ಕಡೆ ವರ್ಗಾವಣೆ ಮಾಡಬೇಕು.
  7. ಸಂಪ್ರೀತಾ ಹಿರೇಮಠ, ಕಿರಿಯ ಅಭಿಯಂತರರು, ಇವರು ಕಳೆದ ಮೂರು ವರ್ಷಗಳಿಂದ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರನ್ನೂ ಸಹ ಬೇರೆ ಕಡೆ ವರ್ಗಾವಣೆ ಮಾಡಬೇಕಾಗಿರುತ್ತದೆ.
  8. ಹರೀಶ್ ಬಿ.ಜಿ, ಪ್ರ.ದ.ಸ. ಇವರು’ ಕಳೆದ 18 ವರ್ಷಗಳಿಂದ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಕೂಡ ಭ್ರಷ್ಟ ಅಧಿಕಾರಿಯಾಗಿದ್ದು, ಬೇರೆ ಕಡೆ ವರ್ಗಾವಣೆ ಮಾಡಬೇಕು.
  9. ತ್ರಿವೇಣಿ ಬಸವರಾಜ ಒಡೆಯರ್, ಪ್ರದ.ಸ. ಇವರು ಕಳೆದ 09 ವರ್ಷಗಳಿಂದ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಭ್ರಷ್ಟಾಚಾರದ ಹಿನ್ನಲೆಯಲ್ಲಿ ಇವರನ್ನು ಬೇರೆ ಕಡೆ ಕೂಡಲೇ ವರ್ಗಾಯಿಸಬೇಕಾಗಿರುತ್ತದೆ.
  10. ಸುಕನ್ಯಾ ಹೊಸಮನಿ, ದ್ವಿದ.ಸ. ಇವರು ಕಳೆದ ಐದು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಇಲಾಖೆಯಲ್ಲಿ ಕಾನೂನಿನ ಅರಿವು ಇಲ್ಲದೆ ಭ್ರಷ್ಟಾಚಾರವನ್ನು ಏಸಗುತ್ತಿದ್ದಾರೆ ಎಂದು ಸಾರ್ವಜನಿಕರಿಂದ ವರದಿ ಬಂದಿರುತ್ತದೆ. ಆದುದರಿಂದ ಇವರನ್ನು ಬೇರೆ ಕಡೆ ಕೂಡಲೇ ವರ್ಗಾಯಿಸಬೇಕಾಗಿರುತ್ತದೆ.

ಈ ಮೇಲ್ಕಾಣಿಸಿದ ಅಧಿಕಾರಿ/ಸಿಬ್ಬಂದಿಗಳ ಭ್ರಷ್ಟಾಚಾರದ ಬಗ್ಗೆ ಟಿ.ವಿ. ಮತ್ತು ಪತ್ರಿಕೆಗಳಲ್ಲಿಯೂ ವರದಿಯಾಗುತ್ತಿದೆ. ಇದರಿಂದ ಸರ್ಕಾರಕ್ಕೆ ತೀವ್ರ ಮುಜುಗರದ ಸನ್ನಿವೇಶವೂ ಉಂಟಾಗುತ್ತಿದೆ. ಆದುದರಿಂದ, ಮಾನ್ಯ ಮುಖ್ಯಮಂತ್ರಿಗಳು ಇದನ್ನು ತೀವ್ರವಾಗಿ ಪರಿಗಣಿಸಿ ಮೇಲೆ ತಿಳಿಸಿರುವ ಎಲ್ಲಾ ಅಧಿಕಾರಿಗಳು/ಸಿಬ್ಬಂದಿಗಳನ್ನು ಕೂಡಲೇ ಕೊಪ್ಪಳ ಜಿಲ್ಲೆಯಿಂದ ಬೇರೆ ಕಡೆ ವರ್ಗಾವಣೆ ಮಾಡಲು ಸಂಬಂಧಪಟ್ಟವರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಕೋರಿದೆ. ಆ ಮೂಲಕ ಭ್ರಷ್ಟಾಚಾರದ ವಿರುದ್ಧ ನಮ್ಮ ಸರ್ಕಾರ ಕಠಿಣ
ಕ್ರಮಗಳನ್ನು ಕೈಗೊಳ್ಳುತ್ತದೆಂಬ ಸ್ಪಷ್ಟ ಸಂದೇಶವನ್ನು ನೀಡಬಹುದಾಗಿದೆ.

ಎಂದು ಮುಖ

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಗಿರೀಶ್‌ ಮಟ್ಟಣ್ಣನವರ್‌ ವಿರುದ್ಧ ತನಿಖೆಗೆ ಆದೇಶ

ಗಿರೀಶ್‌ ಮಟ್ಟಣ್ಣನವರ್‌ (Girish Mattannanavar) ವಿರುದ್ಧ ಮೂರು ವಾರಗಳಲ್ಲಿ ತನಿಖೆ ನಡೆಸುವಂತೆ...

ಭೂತಾನ್‌ ಪ್ರವಾಸಕ್ಕೆ ಹೊರಟ ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (Prime Minister Narendra Modi) ಇವತ್ತಿನಿಂದ...

ಹಾಸನದ ಜನಪ್ರಿಯ ಆಸ್ಪತ್ರೆ ಮಾಲೀಕ ಡಾ.ಅಬ್ದುಲ್‌ ಬಶೀರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು

ನ್ಯಾಯಾಲಯಕ್ಕೆ ಸುಳ್ಳು ಸಾಕ್ಷ್ಯ ಮತ್ತು ಸುಳ್ಳು ದಾಖಲೆಗಳನ್ನು ಸಲ್ಲಿಸಿದ ಆರೋಪದಡಿಯಲ್ಲಿ ಹಾಸನ...

ದೆಹಲಿ ಕೆಂಪುಕೋಟೆ ಬಳಿ ಸ್ಫೋಟ – 8 ಸಾವು

ದೆಹಲಿಯ ಕೆಂಪುಕೋಟೆಯಲ್ಲಿ ಸಂಭವಿಸಿರುವ ಕಾರ್‌ ಬಾಂಬ್‌ ಸ್ಫೋಟದಲ್ಲಿ 8 ಮಂದಿ ಪ್ರಾಣ...