ಮತದಾನ ದಿನ (Poll Day) ಅಥವಾ ಮತದಾನದ ಹಿಂದಿನ ದಿನ ಪತ್ರಿಕೆಗಳಲ್ಲಿ ಚುನಾವಣಾ ಜಾಹೀರಾತು ಪ್ರಕಟಿಸುವಂತಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ (Election Commission of India) ಹೇಳಿದೆ.
ರಾಜ್ಯ ಅಥವಾ ಜಿಲ್ಲಾ ಮಟ್ಟದಲ್ಲಿರುವ ಮಾಧ್ಯಮ ಪ್ರಮಾಣ ಮತ್ತು ಮೇಲ್ವಿಚಾರಣಾ ಸಮಿತಿಯ ಪೂರ್ವ ಪ್ರಮಾಣ ಪತ್ರ ಹೊಂದಿರುವ ಅಂಶಗಳನ್ನಷ್ಟೇ ಜಾಹೀರಾತು ಮತದಾನದ ದಿನ ಅಥವಾ ಮತದಾನದ ಹಿಂದಿನ ದಿನ ಜಾಹೀರಾತು ನೀಡಬಹುದು ಎಂದು ಆಯೋಗ ಹೇಳಿದೆ.
ಪಾರದರ್ಶಕ ಚುನಾವಣಾ ಪ್ರಚಾರದ ವಾತಾವರಣ ನಿರ್ಮಿಸುವ ಸಲುವಾಗಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಸಂಘಟನೆಗಳು ಮತ್ತು ಜಾಹೀರಾತು ಕೊಡುವವ ಇತರರ ಮೇಲೆ ಈ ನಿರ್ಬಂಧವನ್ನು ಹೇರಲಾಗಿದೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar Assembly Election) ಮೊದಲ ಹಂತದ ಚುನಾವಣೆಗೆ ನವೆಂಬರ್ 5, 6ರಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡುವುದನ್ನು ಆಯೋಗ ನಿರ್ಬಂಧಿಸಿದೆ.
ಎರಡನೇ ಹಂತದ ಮತದಾನದಲ್ಲಿ ನವೆಂಬರ್ 10 ಮತ್ತು 11ರಂದು ಜಾಹೀರಾತು ನೀಡುವುದನ್ನು ನಿರ್ಬಂಧಿಸಲಾಗಿದೆ.
ಪತ್ರಿಕೆಗಳಲ್ಲಿ ರಾಜಕೀಯ ಜಾಹೀರಾತು ನೀಡುವವರು ಜಾಹೀರಾತು ಪ್ರಕಟವಾಗುವುದಕ್ಕೂ ಕನಿಷ್ಠ ೨ ದಿನ ಮೊದಲು ಮಾಧ್ಯಮ ಪ್ರಮಾಣ ಮತ್ತು ಮೇಲ್ವಿಚಾರಣಾ ಸಮಿತಿಗೆ ಅರ್ಜಿ ಸಲ್ಲಿಸಬೇಕು ಎಂದು ಆಯೋಗ ಹೇಳಿದೆ.

ಅರ್ಜಿ ಸಲ್ಲಿಕೆ ಆದ ಬಳಿಕ ರಾಜ್ಯ ಅಥವಾ ಜಿಲ್ಲಾ ಮಟ್ಟದಲ್ಲಿರುವ ಚುನಾವಣಾ ಆಯೋಗದ ಸಮಿತಿಗಳು ಶೀಘ್ರವೇ ನಿರ್ಧಾರ ಕೈಗೊಳ್ಳಬೇಕು ಎಂದೂ ಚುನಾವಣಾ ಆಯೋಗ ಹೇಳಿದೆ.


