ಅಕ್ರಮ ಜಾನುವಾರು ಸಾಗಿಸ್ತಿದ್ದ ವಾಹನವನ್ನು ಜಪ್ತಿ ಮಾಡಿದ ಬಳಿಕ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದ ಗಲಭೆಕೋರರ ಕೇಸ್ ಹಿಂಪಡೆಯುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಶಿಫಾರಸ್ಸು ಮಾಡಿದ್ದವರ ಬಗ್ಗೆ ನಿನ್ನೆಯಷ್ಟೇ ಪ್ರತಿಕ್ಷಣ ಎಕ್ಸ್‌ಕ್ಲೂಸಿವ್ ಸುದ್ದಿ ಪ್ರಕಟಿಸಿತ್ತು.
https://pratikshana.com/2025/10/20/priyank-kharge-case-withdrawal/

ಪ್ರತಿಕ್ಷಣ ಸುದ್ದಿ ಪ್ರಕಟಿಸಿದ ಬೆನ್ನಲ್ಲೇ ಈಗ ಪ್ರಮುಖ ವಿರೋಧ ಪಕ್ಷ ಬಿಜೆಪಿ ಮತ್ತು ಜೆಡಿಎಸ್ ಚಿತ್ತಾಪೂರ ಶಾಸಕರೂ ಆಗಿರುವ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮುಗಿಬಿದ್ದಿವೆ.
ಪೊಲೀಸರಿಗೆ ಹಾಗೂ ಪೊಲೀಸ್ ಠಾಣೆಗೆ ಕಲ್ಲು ತೂರಿದವರು #TrollMinister ಅಲಿಯಾಸ್ ಟ್ವೀಟಾಸುರ ಉರ್ಫ್ @PriyankKharge ಅವರ ಪಾಲಿಗೆ ಶಾಂತಿದೂತರು!! ಚಿತ್ತಾಪುರದಲ್ಲಿ ಅಕ್ರಮವಾಗಿ ದನಗಳನ್ನು ಕದ್ದು ಸಾಗಿಸಿದ್ದು ಮಾತ್ರವಲ್ಲದೆ, ತಡೆಯಲು ಬಂದ ಪೊಲೀಸರ ಮೇಲೆ ಕಲ್ಲು ತೂರಿದ ಮೋಸಿನ್, ಯೂಸುಫ್, ಇಮ್ರಾನ್ ಹಾಗೂ ಸಂಗಡಿಗರ ಮೇಲೆ ಹಾಕಿದ್ದ ಕೇಸ್ ಅನ್ನು ವಾಪಸ್ ತೆಗೆಸಿದ್ದಾರೆ ಸಚಿವ ಪ್ರಿಯಾಂಕ್ ಖರ್ಗೆ ಅವರು. ಈ ನೆಲದ ಕಾನೂನಿಗೆ ಗೌರವ ತೋರದ, ಈ ನೆಲದ ಆರಕ್ಷಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಅಂತಹ ಸಂವಿಧಾನ ವಿರೋಧಿಗಳ ಬಗ್ಗೆ ನಿಮಗೇಕೆ ಈ ಪರಿ ಒಲವು, ಮಿಸ್ಟರ್ ಖರ್ಗೆ ಅವರೇ..??
ಎಂದು ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಬಿಜೆಪಿ ಪ್ರಶ್ನಿಸಿದೆ.
‘@PriyankKharge ಅವರೇ, ಕಲ್ಲು ಎಸೆಯುವವರ ಮೇಲೆ ಅದೆಷ್ಟು ಪ್ರೀತಿ ನಿಮಗೆ!? “ಜನ ಸಮುದಾಯದಲ್ಲಿ ದ್ವೇಷ ಬಿತ್ತುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸುವುಕ್ಕಾಗಿ ಹಾಗೂ ದೇಶದ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕಾಗಿ ಸಮಗ್ರತೆ, ಸಮಾನತೆ ಮತ್ತು ಏಕತೆಯ ಮೂಲಭೂತ ತತ್ತ್ವಗಳನ್ನೊಳಗೊಂಡ ಸಂವಿಧಾನವು ನಮಗೆ ಅಧಿಕಾರ ನೀಡುತ್ತದೆ.” ಪೊಲೀಸರ ಮೇಲೆ ಕಲ್ಲುಗಳನ್ನು ಎಸೆದು ಆಕ್ರಮಣಕಾರಿಯಾಗಿ ದಾಳಿ ಮಾಡಿ ಗಲಭೆ ಸೃಷ್ಟಿಸುವ ಮೂಲಕ, ಸಮಾಜದ ಸಾಮರಸ್ಯ ಹಾಳು ಮಾಡಿ, ಮುಗ್ಧ ಮಕ್ಕಳು ಹಾಗೂ ಯುವಜನರ ಮನಸಿನ ಮೇಲೆ ದುಷ್ಪರಿಣಾಮ ಬೀರುವ ಸಮಾಜ ಘಾತುಕರ ಮೇಲಿನ ಪ್ರಕರಣಗಳನ್ನು ಹಿಂಪಡೆದಿರುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನಡೆ. ಗಲಭೆಕೋರರ ವಿರುದ್ಧದ ಕೇಸು ಹಿಂಪಡೆದಿರುವುದರ ಹಿಂದಿನ ಅಜೆಂಡಾ ಗಮನಿಸಿದರೇ, ಅಂದಿನ ಗಲಭೆಗೆ ಚಿತ್ತಾಪುರದ ಶಾಸಕರ ಚಿತಾವಣೆಯೂ ಇರುವ ಸಂಶಯ ರಾಜ್ಯದ ಜನರಲ್ಲಿ ಮೂಡುತ್ತಿದೆ
ಎಂದು ಜೆಡಿಎಸ್ ಟ್ವೀಟಿಸಿದೆ.


