ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದ ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಬರೋಬ್ಬರೀ 48 ಕೋಟಿ ರೂಪಾಯಿ ಬೆಳೆ ಹಾನಿ ಪರಿಹಾರ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತಕ್ಕೆ (Karnataka Lokayukta) ದೂರು ಸಲ್ಲಿಕೆಯಾಗಿದೆ.
ಚಿತ್ರದುರ್ಗದ ಮೂಲದ ದಮನಿತರ ಭೂಮಿ ಹಕ್ಕು ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಹೊಳೆಯಪ್ಪ ಕೆ.ಸಾಕ್ಯ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಫೆಬ್ರವರಿ 19ರಂದು ಸಲ್ಲಿಸಿರುವ ದೂರಿನಲ್ಲಿ ಚಿತ್ರದುರ್ಗ ಜಿಲ್ಲಾಧಿಕಾರಿ ಮೊದಲನೇ ಪ್ರತಿವಾದಿಯಾಗಿದ್ದಾರೆ.
(ಪ್ರತಿಕ್ಷಣ ಸುದ್ದಿಗಾಗಿ ವಾಟ್ಸಾಪ್ ನಂಬರ್ 97411 83147 ಅಥವಾ pratikshananews@gmail.com ನ್ನು ಸಂಪರ್ಕಿಸಿ)
ಚಿತ್ರದುರ್ಗ ತಹಶೀಲ್ದಾರ್ -2ನೇ ಪ್ರತಿವಾದಿ, ಚಳ್ಳಕೆರೆ ತಹಶೀಲ್ದಾರ್ – 3ನೇ ಪ್ರತಿವಾದಿ, ಹಿರಿಯೂರು ತಹಶೀಲ್ದಾರ್ – 4ನೇ ಪ್ರತಿವಾದಿ, ಮೊಳಕಾಲ್ಮೂರು ತಹಶೀಲ್ದಾರ್ -5ನೇ ಪ್ರತಿವಾದಿ, ಹೊಳಲ್ಕೆರೆ ತಹಶೀಲ್ದಾರ್ – 6ನೇ ಪ್ರತಿವಾದಿ ಮತ್ತು ಹೊಸದುರ್ಗ ತಹಶೀಲ್ದಾರ್ – 7ನೇ ಪ್ರತಿವಾದಿಯಾಗಿದ್ದಾರೆ.
ಈ ದೂರಿನ ಹಿನ್ನೆಲೆಯಲ್ಲಿ ವರದಿ ನೀಡುವಂತೆ ಚಿತ್ರದುರ್ಗ ಜಿಲ್ಲಾಧಿಕಾರಿಗೆ ಕರ್ನಾಟಕ ಲೋಕಾಯುಕ್ತ ಸೂಚನೆ ನೀಡಿದೆ.
2022-23ರ ಅವಧಿಯಲ್ಲಿ ಭಾರೀ ಮಳೆಯಿಂದಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಅತಿವೃಷ್ಟಿ ಹಿನ್ನೆಲೆಯಲ್ಲಿ ರೈತರಿಗೆ ಬೆಳೆ ಹಾನಿ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಹಣವನ್ನು ಬಿಡುಗಡೆ ಮಾಡಿತ್ತು.
ಆದರೆ ಆ ಬೆಳೆ ಹಾನಿ ಪರಿಹಾರವನ್ನು ಅರ್ಹ ರೈತರಿಗೆ ವಿತರಿಸುವ ಬದಲು ಅಧಿಕಾರಿಗಳು ತಮ್ಮ ನೆಂಟರಿಗೆ, ಆಪ್ತರಿಗೆ, ಪರಿಚಯಸ್ಥರಿಗೆ ಜಮೆ ಮಾಡಿದ್ದಾರೆ. ಪಹಣಿಯಲ್ಲಿ (RTC) ರೈತರಿಗೆ ಬೆಳೆ ಹಾನಿ ಜಮೆ ಆಗಿದೆ ಎಂದು ತೋರಿಸಿದರೂ, ಆದರೆ ಜಮೆ ಆಗಿರುವುದು ಮಾತ್ರ ಬೇರೆಯವರ ಬ್ಯಾಂಕ್ ಖಾತೆಗಳಿಗೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
2022ರ ಅಕ್ಟೋಬರ್ 21ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಅತೀವೃಷ್ಟಿ ಕಾರಣದಿಂದ ಬೆಳೆ ಹಾನಿ ಪರಿಹಾರ ವಿತರಣೆಗಾಗಿ 258 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿ ಆದೇಶ ನೀಡಿತ್ತು.

2022ರ ಅಕ್ಟೋಬರ್ 10ರಂದು ಕೇಂದ್ರ ಗೃಹ ಸಚಿವಾಲಯವು ಬೆಳೆಹಾನಿ ಪರಿಹಾರದ ಮೊತ್ತವನ್ನು ಪರಿಷ್ಕರಣೆ ಮಾಡಿತ್ತು.



