ಬೆಳಗ್ಗೆ 2 ಬಾರಿ ಎದೆನೋವು ಕಾಣಿಸಿಕೊಂಡಿದ್ದ ಒಳಗಾಗಿದ್ದ ತಮಿಳುನಾಡಿನ ಡಿಎಂಕೆ (DMK) ಪಕ್ಷದ ಶಾಸಕ ಪೊನ್ನುಸ್ವಾಮಿ (K.Ponnuswamy) ನಿಧನರಾಗಿದ್ದಾರೆ.
ಇವತ್ತು ಬೆಳಗ್ಗೆ ಶಾಸಕ ಕೆ.ಪೊನ್ನುಸ್ವಾಮಿ ಅವರಿಗೆ ಎರಡು ಬಾರಿ ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ಹತ್ತಿರದ ಕೊಲ್ಲಿ ಹಿಲ್ಸ್ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ನಂತರ ನಮಕ್ಕಲ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆಗೆ ಶಾಸಕ ಪೊನ್ನುಸ್ವಾಮಿ ಜೀವ ಹೋಗಿತ್ತು.
ಸೆಂಥಮಂಗಲಂ ಎಸ್‌ಟಿ ಮೀಸಲು ವಿಧಾನಸಭಾ ಕ್ಷೇತ್ರದಿಂದ 2006 ಮತ್ತು 2021ರಲ್ಲಿ ಒಟ್ಟು ೨ ಬಾರಿ ಪೊನ್ನುಸ್ವಾಮಿ ಶಾಸಕರಾಗಿ ಆಯ್ಕೆ ಆಗಿದ್ದರು.


