ಕೋತಿ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ – ನಿಮ್ಮ ಕೈಗೆ ಟ್ಟೀಟ್ಡ್ಡ ಶಿಖಾಮಣಿಗಳೇ ಎಷ್ಟು ಬಾರಿ ಹೇಳೋದು?
ನಿಮ್ಮ ಆಡಳಿತ ಅವಧಿಯ ಸಾರಿಗೆ ಸಂಸ್ಥೆಗಳಲ್ಲಿ ₹5900 ಕೋಟಿ ಸಾಲದ ಹೊರೆಯನ್ನು ನಾವು ತೀರಿಸುತ್ತಾ ಇದ್ದೇವೆ.
ನಿಮ್ಮ ಅವಧಿಯಲ್ಲಿ ಬಾಕಿ ಉಳಿಸಿ ಹೋಗಿದ್ದ ಪಿ.ಎಫ್ ,ಡೀಸೆಲ್ ಬಾಕಿ ಪಾವತಿಗಾಗಿ ₹2000 ಕೋಟಿ ಬ್ಯಾಂಕುಗಳಿಂದ ಸಾಲ ಪಡೆಯಲು ನಿಗಮಗಳಿಗೆ ಅವಕಾಶ ಕಲ್ಪಿಸಿ, ಅದರ ಅಸಲು ಮತ್ತು ಬಡ್ಡಿಯನ್ನು ಸರ್ಕಾರ ಪಾವತಿಸುತ್ತಿದೆ.
ನಿಮ್ಮ ಆಡಳಿತದ ಅವಧಿಯಲ್ಲಿ ತಿಂಗಳಿಗೆ ಸರಿಯಾಗಿ ವೇತನ ಪಾವತಿ ಮಾಡದೆ ಅರ್ಧ ಸಂಬಳ,ಮುಂದಿನ ತಿಂಗಳು ಅರ್ಧ ಸಂಬಳ ನೀಡುತ್ತಿದ್ದಕ್ಕೆ ದಾಖಲೆ ಬೇಕೆ?ವೇತನ ಪರಿಷ್ಕರಣೆ ಮಾಡಿ ,ಹಣ ಪಾವತಿ ಮಾಡದೆ, ಬಾಕಿ ಇಟ್ಟು, ಅದಕ್ಕೆ ಬೇಕಾದ ಅನುದಾನವನ್ನು ನಿಯೋಜಿಸದೆ ಹೋಗಿರುವುದು ತಮ್ಮ ಸಾಧನೆಯೇ !
ತಮ್ಮ ಆಡಳಿತ ಅವಧಿಯ ಶೂನ್ಯ ನೇಮಕಾತಿಯಿಂದ – 10000 ನೇಮಕಾತಿ, ಶೂನ್ಯ ಬಸ್ಸುಗಳ ಸೇರ್ಪಡೆಯಿಂದ – 5800 ಹೊಸ ಬಸ್ಸುಗಳ ಸೇರ್ಪಡೆ ನಮ್ಮ ಸರ್ಕಾರ ಮಾಡಿದೆ.ಬಸ್ ಪ್ರಯಾಣ ದರ ಏರಿಕೆ ಮಾಡುವುದು ಸಾರಿಗೆ ಸಂಸ್ಥೆಗಳನ್ನು ಸದೃಢಗೊಳಿಸಿ , ಸ್ವಾವಲಂಬನೆಗೊಳಿಸುವುದಾಗಿದೆ.
ತಮ್ಮ ರೀತಿ ರಾಜಕೀಯ ಇಚ್ಛಾಶಕ್ತಿಗಾಗಿ ಹಲವಾರು ವರುಷಗಳ ಕಾಲ ದರ ಏರಿಕೆ ಮಾಡದೆ ಸಾರಿಗೆ ಸಂಸ್ಥೆಗಳನ್ನು ಮುಳುಗಿಸಿ ಹೋಗಿ, ಅದನ್ನು ಸಾಧನೆ ಎಂದು ಬಿಂಬಿಸಿಕೊಳ್ಳುವ ತಮ್ಮ ಬೌದ್ಧಿಕ ದಿವಾಳಿತನಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ?
ಹಿಂದೆ ಬಸ್ ದರ ಏರಿಕೆ ಇದ್ದ ಸಮಯದಲ್ಲಿನ ಡೀಸೆಲ್ ದರಕ್ಕೆ ಪ್ರಸ್ತುತ ಡೀಸೆಲ್ ದರವನ್ನು ತಗ್ಗಿಸಲು ತಮ್ಮ ಪ್ರಧಾನಿ ಅವರಿಗೆ ಹೇಳಿ, ನಂತರ ನಾವು ಬಸ್ ದರ ತಗ್ಗಿಸುವ ಕೆಲಸ ಮಾಡುತ್ತೇವೆ.ಶಕ್ತಿ ಯೋಜನೆಯ ಯಶಸ್ಸು ತಮ್ಮ ಕಣ್ಣು ಕುಕ್ಕುತ್ತಿದೆ ಎಂದು ನಮಗೆ ಅರಿವಿದೆ.
ಮಹಿಳಾ ಸಬಲೀಕರಣದ ವಿರೋಧಿಗಳು ಇದರ ಯಶಸ್ಸನ್ನು ಸಹಿಸಲು ಸಾಧ್ಯವೇ?ಶಕ್ತಿ ಯೋಜನೆಗೆ ಈಗಾಗಲೇ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಬಾಕಿಯಿರುವ ಅನುದಾನ ಬಿಡುಗಡೆಗೊಳಿಸುವ ಬದ್ಧತೆ ನಮ್ಮದಾಗಿದೆ.
ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ತಿರುಗೇಟು ನೀಡಿದ್ದಾರೆ.