ಮಾಹಿತಿ ಹಕ್ಕು ಕಾಯ್ದೆಯಡಿ (RTI Act ) ಪಾಸ್‌ಪೋರ್ಟ್ ಮಾಹಿತಿಯನ್ನು ಬಹಿರಂಗಪಡಿಸಲು ಅವಕಾಶಗಳಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪಾಸ್‌ಪೋರ್ಟ್‌ನಂತಹ ಮಾಹಿತಿ, ನನ್ನ ಅಭಿಪ್ರಾಯದ ಪ್ರಕಾರ ವೈಯಕ್ತಿಕ ಮಾಹಿತಿಯಾಗಿರುವ ಕಾರಣ ಅದರ ಬಹಿರಂಗ ಆ ವ್ಯಕ್ತಿಗೆ ಅಪಾರ ಹಾನಿ ಮತ್ತು ಘಾಸಿಯನ್ನು ಉಂಟು ಮಾಡುತ್ತದೆ. ಪಾಸ್‌ಪೋರ್ಟ್‌ನ ಮಾಹಿತಿಗಳು ವ್ಯಕ್ತಿಯ ಖಾಸಗಿಯಾಗಿದ್ದು ಮತ್ತು ಆ ವಿವರಗಳನ್ನು ಯಾವುದೇ ಮೂರನೇ ವ್ಯಕ್ತಿಗೆ ಲಭ್ಯವಾಗಿಸಿದ್ದಲ್ಲಿ ಅದು ಆ ವ್ಯಕ್ತಿಯ ಜೀವ ಅಥವಾ ದೈಹಿಕ ಸುರಕ್ಷತೆಗೆ ಅಪಾಯವನ್ನು ತಂದೊಡ್ಡಬಹುದು
ಎಂದು ಕರ್ನಾಟಕ ಹೈಕೋರ್ಟ್ (Karnataka High Court ) ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ (JUSTICE SURAJ GOVINDARAJ) ಅವರ ಏಕಸದಸ್ಯ ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.
ಮುಂಬೈ ಮೂಲದ ಪ್ರಕಾಶ್ ಚಿಮನ್‌ಲಾಲ್ ಸೇಠ್ (PRAKASH CHIMANLAL SHETH) ಕೊಟ್ಟ ದೂರಿನ ಆಧಾರದಲ್ಲಿ ಆರೋಪಿಯ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.
ಆರೋಪಿ ನಾಪತ್ತೆಯಾದ ಬಳಿಕ ಆತನ ವಿರುದ್ಧ ಲುಕ್‌ಔಟ್ (Look Out Notice) ನೋಟಿಸ್ ಜಾರಿಯಾಗಿತ್ತು. ಬಳಿಕ ಆರೋಪಿಯನ್ನು ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Mumbai International Airport) ಬಂಧಿಸಲಾಗಿತ್ತು ಮತ್ತು ಅದೇ ದಿನ ಬಿಡುಗಡೆಗೊಳಿಸಲಾಗಿತ್ತು.
ಆರೋಪಿಯ ಪಾಸ್‌ಪೋರ್ಟ್ ಪ್ರತಿ, ಲುಕ್‌ಔಟ್ ನೋಟಿಸ್ ಹೊರಡಿಸಿದ ದಿನ, ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು 2023ರ ಡಿಸೆಂಬರ್ 1ರಂದು ಅವತ್ತೇ ಬಿಡುಗಡೆಗೊಳಿಸಿದ್ದರ ಬಗ್ಗೆ ಮಂಗಳೂರಲ್ಲಿರುವ ದಕ್ಷಿಣ ಕನ್ನಡ SP ಕಚೇರಿಯಲ್ಲಿರುವ ಮಾಹಿತಿಯನ್ನು ಆರ್‌ಟಿಐ ಅಡಿಯಲ್ಲಿ (Right to Information Act ) ಕೊಡುವಂತೆ ಕೇಳಿದ್ದರು. ಆದರೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿರುವ ವಿಶೇಷ ವಿಭಾಗಕ್ಕೆ ಆರ್‌ಟಿಐ ಅನ್ವಯವಾಗಲ್ಲ ಎಂದು ಹೇಳಿ ಚಿಮನ್‌ಲಾಲ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಚಿಮನ್‌ಲಾಲ್ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಚಿಮನ್‌ಲಾಲ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್
ಅರ್ಜಿದಾರ ಆರೋಪಿಯ ವಿಚಾರಣೆಗೆ ಅಗತ್ಯವಾದ ದಾಖಲೆಗಳನ್ನು ತಮಗೆ ಕೊಡಿಸುವಂತೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯಕ್ಕೆ ಸಲ್ಲಿಸಬಹುದು. ಆ ನ್ಯಾಯಾಲಯ ತನ್ನ ವಿವೇಚನೆಯನ್ನು ಬಳಸಿ ಆ ಅರ್ಜಿಯನ್ನು ಪರಿಗಣಿಸಬಹುದು


