ವಿಮಾ ಹಣಕ್ಕಾಗಿ ಸುಳ್ಳು – ಜನಪ್ರಿಯ ಆಸ್ಪತ್ರೆ ಮಾಲೀಕ ಡಾ. ಬಶೀರ್‌ ವಿರುದ್ಧ FIRಗೆ ಕೋರ್ಟ್‌ ಆದೇಶ

ಅಪಘಾತವಾಗಿದೆ (Accident) ಎಂದು ಸುಳ್ಳು ಹೇಳಿ ವಿಮಾ ಕಂಪನಿಯಿಂದ ವಿಮಾ ಹಣವನ್ನು (Insurance) ಕಬಳಿಸುವ ಸಲುವಾಗಿ ನ್ಯಾಯಾಲಯಕ್ಕೇ (the Court) ಸುಳ್ಳು ದಾಖಲೆ, ಸುಳ್ಳು ಪ್ರಮಾಣಪತ್ರ ಮತ್ತು ಸುಳ್ಳು ಸಾಕ್ಷ್ಯಗಳನ್ನು ಸಲ್ಲಿಸಿದ ಹಾಸನ (Hassan) ನಗರದಲ್ಲಿರುವ ಜನಪ್ರಿಯ (Janapriya Hospital) ಆಸ್ಪತ್ರೆಯ ಮಾಲೀಕ ಡಾ.ಅಬ್ದುಲ್‌ ಬಶೀರ್‌ (Dr.Abdul Basheer) ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಹಾಸನದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಆನಂದ್‌ ಅವರು ಇವತ್ತು ಮಹತ್ವದ ಆದೇಶ ನೀಡಿದ್ದಾರೆ.
ನ್ಯಾಯಾಲಯವನ್ನೇ ವಂಚಿಸಿರುವ ಹಾಸನ ನಗರ ಜನಪ್ರಿಯ ಆಸ್ಪತ್ರೆಯ ಮಾಲೀಕ ಡಾ.ಅಬ್ದುಲ್‌ ಬಶೀರ್‌, ಮೊಹಮ್ಮದ್‌ ಗೌಸ್‌, ಮುಷ್ತಾಕ್‌, ಹಿಮ್ಸ್‌ ವೈದ್ಯ ಡಾ ನಾಗರಾಜ್‌ ವಿರುದ್ಧ ಪ್ರಕರಣವನ್ನು ದಾಖಲಿಸುವಂತೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರು ಹಾಸನ ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಗೆ ಆದೇಶಿಸಿದ್ದಾರೆ.
(ಪ್ರತಿಕ್ಷಣ ಸುದ್ದಿಗಾಗಿ ವಾಟ್ಸಾಪ್‌ ನಂಬರ್‌ 97411 83147 ಅಥವಾ pratikshananews@gmail.com ನ್ನು ಸಂಪರ್ಕಿಸಿ)
ಎಫ್‌ಐಆರ್‌ಗೆ (FIR) ನ್ಯಾಯಾಧೀಶರ ಆದೇಶ:
ಅಪರಾಧ ಪ್ರಕ್ರಿಯೆಯ ಸಂಹಿತೆ (CrPC) ಸೆಕ್ಷನ್‌ 340ರಡಿಯಲ್ಲಿ ನ್ಯಾಯದಾನ ಪ್ರಕ್ರಿಯೆಯಲ್ಲಿ ನ್ಯಾಯಾಲಯವನ್ನೇ ದಿಕ್ಕು ತಪ್ಪಿಸಿದ ಹಿನ್ನೆಲೆಯಲ್ಲಿ ಐಪಿಸಿ (IPC Sections) ಕಲಂಗಳಾದ 191 (ಸುಳ್ಳು ಸಾಕ್ಷ್ಯ ನೀಡುವುದು), 193 (ಸುಳ್ಳು ಸಾಕ್ಷ್ಯಗಳನ್ನು ತಿರುಚುವುದು), 195 (ನ್ಯಾಯಾಲಯಕ್ಕೆ ನಿಂದನೆ), 196 (ಸುಳ್ಳು ಸಾಕ್ಷ್ಯಗಳೆಂದು ಗೊತ್ತಿದ್ದರೂ ಬಳಸುವುದು), 199 (ಸಾಕ್ಷ್ಯವಾಗಿ ಪರಿಗಣಿಸಬಹುದಾದ ಸುಳ್ಳು ಪ್ರಮಾಣಪತ್ರ ಸಲ್ಲಿಸುವುದು), 200 (ಸುಳ್ಳು ಪ್ರಮಾಣಪತ್ರವನ್ನೇ ಸತ್ಯ ಎಂದು ಸಲ್ಲಿಸುವುದು) ಈ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆಯೂ ಮತ್ತು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಈ ಪ್ರಕರಣಗಳ ಸಂಜ್ಞೆಯನ್ನು ಪರಿಗಣಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.
ಜೆಎಂಎಫ್‌ಸಿ (JMFC Court) ನ್ಯಾಯಾಲಯ ನಡೆಸುವ ಈ ಪ್ರಕರಣದಲ್ಲಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರು ಹಸ್ತಕ್ಷೇಪ ಮಾಡಲ್ಲ ಎಂದೂ ನ್ಯಾಯಾಧೀಶ ಆನಂದ್‌ ಅವರು ಆದೇಶಿಸಿದ್ದಾರೆ.
ಏನಿದು ಪ್ರಕರಣ..?
ಅಪಘಾತದ ಕಟ್ಟು ಕಥೆ:
ಹಾಸನ ನಗರದ (Hassan City) ಪೆನ್ಷನ್‌ ಮೊಹಲ್ಲಾದ ಮೊಹಮ್ಮದ್‌ ಗೌಸ್‌ ಎಂಬಾತ 2014ರ ಮೇ 26ರಂದು ತನ್ನ ಮನೆಯ ಮೇಲಿಂದ ಬಿದ್ದ ಗಾಯಗೊಂಡಿದ್ದ. ತಕ್ಷಣವೇ ಆತನನ್ನು ಆತನ ತಂದೆ ಫಯಾಜ್‌ ಹಾಸನ ನಗರದಲ್ಲಿರುವ ಸರ್ಕಾರಿ ಆಸ್ಪತ್ರೆಗೆ (Hassan Government Hospital) ದಾಖಲಿಸಿದ್ದರು. ಆತನ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯ ಡಾ ನಾಗರಾಜ್‌ ಗೌಸ್‌ಗೆ ಮೇಲಿಂದ ಬಿದ್ದ ಗಾಯಗಳಾಗಿದೆ ಎಂದೂ, ಗಂಭೀರ ಗಾಯಗಳಾಗಿಲ್ಲ ಎಂದು ಮೊದಲನೇ ಎಂಎಲ್‌ಸಿ (MLC) ರಿಪೋರ್ಟ್‌ ನೀಡಿದ್ದರು. ಆ ಎಂಎಲ್‌ಸಿ (MLC Report) ರಿಪೋರ್ಟ್‌ಗೆ ಗೌಸ್‌ ತಂದೆ ಫಯಾಜ್‌ ತಂದೆಯೇ ಸಹಿ ಹಾಕಿದ್ದರು.
ಆದರೆ ಮಾರನೇ ದಿನ ಮೇ 27ರಂದು ಹಾಸನ ಬಡಾವಣೆ ಪೊಲೀಸ್‌ ಠಾಣೆಯಲ್ಲಿ (Hassan Police) ಗೌಸ್‌ ಅಪಘಾತ ಪ್ರಕರಣ ದಾಖಲಿಸಿದ್ದ. ಸೈಯದ್‌ ನದೀಮ್‌ಗೆ ಸೇರಿದ ಬೈಕ್‌ನ್ನು ಓಡಿಸ್ತಿದ್ದ ಸೈಯದ್‌ ನೇಮಾನ್‌ ಎಂಬಾತ ರಸ್ತೆ ದಾಟುವ ವೇಳೆ ಗೌಸ್‌ಗೆ ಅತೀ ವೇಗದಲ್ಲಿ (Rash Riding) ಬಂದು ಡಿಕ್ಕಿ ಹೊಡೆದ ಪರಿಣಾಮ ಮೊಹಮ್ಮದ್‌ ಗೌಸ್‌ ಬಲಗಾಲಿಗೆ ಗಂಭೀರ ಗಾಯಗಳಾಗಿದೆ ಎಂದು ಹಾಸನ ಬಡಾವಣೆ ಠಾಣೆ ಪೊಲೀಸರು ಎಫ್‌ಐಆರ್‌ (FIR) ದಾಖಲಿಸಿಕೊಂಡಿದ್ದರು.
ಜನಪ್ರಿಯ ಆಸ್ಪತ್ರೆ ಜೊತೆಗೆ ಸಂಚು:
ಅಲ್ಲದೇ ಮೊಹಮ್ಮದ್‌ ಗೌಸ್‌ನನ್ನು ಮುಷ್ತಾಕ್‌ ಎಂಬಾತ ಹಾಸನ ನಗರದಲ್ಲಿರುವ (Hassan City) ಜನಪ್ರಿಯ ಆಸ್ಪತ್ರೆಗೆ (Janapriya Hospital) ದಾಖಲಿಸಿ ಆ ಆಸ್ಪತ್ರೆಯಲ್ಲಿ ಗಂಭೀರ ಗಾಯಗಳಾಗಿದ್ದ ಕಾರಣ ಗೌಸ್‌ ಕಾಲಿಗೆ ಸರ್ಜರಿ ಮಾಡಲಾಯಿತು ಮತ್ತು ಅದಕ್ಕಾಗಿ ಜನಪ್ರಿಯ ಆಸ್ಪತ್ರೆಗೆ 1 ಲಕ್ಷ ರೂಪಾಯಿ ವೈದ್ಯಕೀಯ ವೆಚ್ಚವನ್ನೂ (Medical Expenses) ಪಾವತಿಸಿದ್ದಾಗಿ ಹಾಸನದ ನ್ಯಾಯಾಲಯದಲ್ಲಿ ಗೌಸ್‌ ಪರ ವಕೀಲರು ವಾದಿಸಿದ್ದರು.
10 ಲಕ್ಷ ವಿಮಾ ಪರಿಹಾರಕ್ಕಾಗಿ ಅರ್ಜಿ:
ಅಪಘಾತಕ್ಕೂ ಮೊದಲು ಗೌಸ್‌ ಆರೋಗ್ಯವಾಗಿದ್ದ ಮತ್ತು ಪ್ರತಿ ತಿಂಗಳು 20 ಸಾವಿರ ರೂಪಾಯಿ ದುಡೀತಿದ್ದ ಹಾಗೂ ಬೈಕ್‌ ಅಪಘಾತದಿಂದ (Bike Accident) ಸರ್ಜರಿ ಆಗಿರುವ ಹಿನ್ನೆಲೆಯಲ್ಲಿ ಮೋಟಾರು ವಾಹನ ಕಾಯ್ದೆಯಡಿ (Motor Vehicle Act MVA) 10 ಲಕ್ಷ ರೂಪಾಯಿಗಳ ವಿಮೆ ಪರಿಹಾರವನ್ನು ನೀಡುವಂತೆಯೂ ಗೌಸ್‌ ಪರ ವಕೀಲರು ವಾದಿಸಿದ್ದರು.
ನದೀಮ್‌ ಬೈಕ್‌ಗೆ ನ್ಯೂ ಇಂಡಿಯಾ ಇನ್ಸೂರೆನ್ಸ್‌ ಕಂಪನಿ (New India Insurance Company) ಮೂಲಕ ವಾಹನ ವಿಮೆ (Insurance) ಮಾಡಿಸಲಾಗಿತ್ತು. ಹೀಗಾಗಿ ನದೀಮ್‌ ಮತ್ತು ವಿಮಾ ಕಂಪನಿ ಇಬ್ಬರೂ ಜಂಟಿಯಾಗಿ ಅಪಘಾತ ಪರಿಹಾರವನ್ನು ನೀಡಬೇಕೆಂದು ಗೌಸ್‌ ಪರ ವಕೀಲರು ವಾದಿಸಿದ್ದರು.
ಚಿತ್ರ: ಹಿರಿಯ ವಕೀಲ ಮೊಹಮ್ಮದ್‌ ಇಮ್ರಾನ್‌ ಅಹ್ಮದ್‌
ಹಿರಿಯ ವಕೀಲ ಮೊಹಮ್ಮದ್‌ ಇಮ್ರಾನ್‌ ಅಹ್ಮದ್‌ ವಾದ:
ಬೈಕ್‌ ಮಾಲೀಕ ನದೀಮ್‌ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಮೊಹಮ್ಮದ್‌ ಇಮ್ರಾನ್‌ ಅಹ್ಮದ್‌ ಅವರು ಗೌಸ್‌ಗೆ ನದೀಮ್‌ ಬೈಕ್‌ ಡಿಕ್ಕಿ ಹೊಡೆದಿಲ್ಲವೆಂದೂ, ವಿಮಾ ಪರಿಹಾರ ಪಡೆಯುವ ಸಲುವಾಗಿ ಆಗಿರದ ಆಕ್ಸಿಡೆಂಟ್‌ನ್ನೂ ಆಗಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆದು ವಾದಿಸಿದ್ದರು. ಅಲ್ಲದೇ, ಜನಪ್ರಿಯ ಆಸ್ಪತ್ರೆಯ ಮಾಲೀಕ ಡಾ. ಅಬ್ದುಲ್‌ ಬಶೀರ್‌ ಮತ್ತು ಪೊಲೀಸ್‌ ಅಧಿಕಾರಿಗಳ ಜೊತೆಗೆ ಸೇರಿ ವಿಮಾ ಹಣ ಲಪಟಾಯಿಸುವ ಸಲುವಾಗಿ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಹಿರಿಯ ವಕೀಲ ಮೊಹಮ್ಮದ್‌ ಇಮ್ರಾನ್‌ ಅಹ್ಮದ್‌ (Advocate Mohammad Imran Ahmed) ವಾದ ಮಂಡಿಸಿದ್ದರು.
ಅರ್ಜಿ ವಜಾಗೊಳಿಸಿದ್ದ ಹಾಸನ ನ್ಯಾಯಾಲಯ:
ನದೀಮ್‌ಗೆ ಸೇರಿದ ಬೈಕ್‌ ಡಿಕ್ಕಿ ಹೊಡೆದಿಲ್ಲವೆಂದೂ, ಅಫಘಾತ ಪ್ರಕರಣ ದಾಖಲಿಗೂ ಹಿಂದಿನ ದಿನ ಮೇ 26ರಂದು ಮೊಹಮ್ಮದ್‌ ಗೌಸ್‌ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಾದ ವೇಳೆ ಘಟನೆಗೆ ಕಾರಣವಾದ ಮಾಹಿತಿ ಮತ್ತು ಆ ವೇಳೆ ನೀಡಿದ್ದ ಎಂಎಲ್‌ಸಿ ವರದಿಗಳನ್ನು ಆಧರಿಸಿ ವಿಮೆ ಪರಿಹಾರ ಕೋರಿದ್ದ ಅರ್ಜಿಯನ್ನು ಹಾಸನ ನ್ಯಾಯಾಲಯ (Hassan District Court) ವಜಾಗೊಳಿಸಿತ್ತು.
ಗೌಸ್‌ಗೆ ಮೇಲಿಂದ ಬಿದ್ದು ಗಾಯಗಳಾಗಿದೆ ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯರು ತಮ್ಮ ಮೊದಲನೇ ಎಂಎಲ್‌ಸಿ ವರದಿಯಲ್ಲೇ ಹೇಳಿದ್ದರು ಮತ್ತು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಗೌಸ್‌ ಡಿಸ್ಚಾರ್ಜ್‌ ಆಗಿ ಜನಪ್ರಿಯ ಆಸ್ಪತ್ರೆಗೆ ದಾಖಲಾಗಿದ್ದು ಯಾಕೆ..? ಗೌಸ್‌ನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಾಗ ಆತನ ತಂದೆ ಫಯಾಜ್‌ ಸಹಿ ಹಾಕಿದ್ದರು, ಆದರೆ ಖಾಸಗಿ ಆಸ್ಪತ್ರೆಗೆ ದಾಖಲಿಸುವಾಗ ಯಾಕೆ ಆತನ ತಂದೆ ಸಹಿ ಮಾಡಿರಲಿಲ್ಲ ಎಂದು ನ್ಯಾಯಾಲಯ ಪ್ರಶ್ನಿಸಿತ್ತು.
ತನಿಖಾಧಿಕಾರಿ ವಿರುದ್ಧ ನ್ಯಾಯಾಲಯ ಅಸಮಾಧಾನ:
ಅಲ್ಲದೇ ಅಪಘಾತ ಪ್ರಕರಣದ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದ ತನಿಖಾಧಿಕಾರಿ ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಲಾಗಿದ್ದ ಮೊದಲನೇ ಎಂಎಲ್‌ಸಿ ವರದಿಯನ್ನು ಪರಿಗಣಿಸಿಲ್ಲ ಹಾಗೂ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದ ಬೈಕ್‌ಗೆ ಯಾವ ಹಾನಿಯೂ ಆಗಿಲ್ಲ ಎಂಬುದನ್ನು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿತ್ತು. ಜೊತೆಗೆ ನ್ಯಾಯಾಲಯಕ್ಕೆ ಸುಳ್ಳು ಪ್ರಮಾಣಪತ್ರ, ಸುಳ್ಳು ಸಾಕ್ಷ್ಯ, ಸುಳ್ಳು ದಾಖಲೆಗಳನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ಕ್ರಮಕ್ಕೂ ಆದೇಶಿಸಿತ್ತು.
ಹಾಸನ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಗೌಸ್‌ ಕರ್ನಾಟಕ ಹೈಕೋರ್ಟ್‌ಗೆ (Karnataka High Court) ಅರ್ಜಿ ಸಲ್ಲಿಸಿದ್ದ. ಆತನ ಅರ್ಜಿಯನ್ನು ಮಾನ್ಯ ಮಾಡಿದ್ದ ಹೈಕೋರ್ಟ್‌ ಪ್ರಕರಣದ ಮರು ವಿಚಾರಣೆ ನಡೆಸುವಂತೆ ಸೂಚಿಸಿ ಪ್ರಕರಣವನ್ನು ಹಾಸನದ ನ್ಯಾಯಾಲಯಕ್ಕೆ ವಾಪಸ್‌ ಕಳುಹಿಸಿತ್ತು.
ಮರು ವಿಚಾರಣೆ ನಡೆಸಿದ ನ್ಯಾಯಾಧೀಶರು ಮೊಹಮ್ಮದ್‌ ಗೌಸ್‌ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಅಲ್ಲದೇ ನ್ಯಾಯಾಲಯವನ್ನೇ ಸುಳ್ಳು ದಾಖಲೆ, ಸುಳ್ಳು ಸಾಕ್ಷ್ಯ, ಸುಳ್ಳು ಪ್ರಮಾಣಪತ್ರದ ಮೂಲಕ ದಿಕ್ಕು ತಪ್ಪಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕ್ಕೂ ಆದೇಶಿಸಿದ್ದಾರೆ.
ನ್ಯಾಯಾಲಯದ ಆದೇಶ:
(The Claim Petition filed by the Petitioner under Section 166 of the Motor Vehicles Act, 1988, is hereby, dismissed. By exercising the powers vested under Section 340 of the Code of Criminal Procedure, 1973, this Honble Tribunal directs that the matter is committed to Judicial Magistrate of First Class having jurisdiction to take cognizance of the alleged offences relating to perjury and submission of false documents under Sections 191, 193, 195, 196, 199, and 200 of the IPC. The Chief Administrative Officer, District Court, Hassan, is hereby directed to initiate appropriate complaint/application before the jurisdictional Magistrate, supplying all relevant records, documents and certified copies of evidence marked before this Tribunal. It is made clear that this order is passed solely for the purpose of initiating inquiry and prosecution under Section 340 of the Code of Criminal Procedure, 1973. This Tribunal has confined itself to forming a prima facie opinion based on the material on record that it is expedient in the interest of justice to make a complaint. This Tribunal shall not, in any manner, interfere with or prejudice the independent jurisdiction of the learned Magistrate who shall conduct the proceedings in accordance with law. The office is directed to facilitate transmission of the entire record of the proceedings of the Claim Petition and the application filed under Section 340 Cr.P.C., to the jurisdictional Magistrate without delay. Draw decree accordingly. Considering the facts and circumstances of the above case, there shall be no order as to costs.)
ಮೊಹಮ್ಮದ್‌ ಇಮ್ರಾನ್‌ ಅಹ್ಮದ್‌ ಇವರು ಹಾಸನದ ಹಿರಿಯ ವಕೀಲರಾಗಿದ್ದು, ಸೂಫಿ ಟೀಪು ಕೂಸಾಲಿ ಸಂತರಾಗಿದ್ದು, ರಾಜ್ಯ ರೈತ ಸಂಘದ ಹಾಸನ ಜಿಲ್ಲಾ ಗೌರವಾಧ್ಯಕ್ಷರಾಗಿದ್ದಾರೆ. ಮುಸ್ಲಿಂ ಕೌನ್ಸಿಲ್‌ ಹಾಸನ ಇದರ ಸ್ಥಾಪಕರು ಮತ್ತು ಸೆಕ್ರಟರಿ ಜನರಲ್‌ ಹಾಗೂ ಶ್ರೀರಾಮ ಸೇನೆಯ ಕಾನೂನು ಸಲಹೆಗಾರರೂ ಆಗಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್‌ ಶಾಸಕನಿಗೆ ಮತ್ತೊಂದು ಆಘಾತ

ಕರ್ನಾಟಕ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ಗೆ (Congress MLA Satish Sail)...

Betting: ಇಬ್ಬರು ಕ್ರಿಕೆಟ್‌ ಆಟಗಾರರಿಗೆ ಶಾಕ್‌

ಇಬ್ಬರು ಕ್ರಿಕೆಟಿಗರಿಗೆ ಸೇರಿದ 11 ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ಜಾರಿ...

ಚಕ್ರವರ್ತಿ ಸೂಲಿಬೆಲೆ ವಿರುದ್ಧ ಲಿಂಗಾಯತ ಸಮಾಜ ಕಿಡಿ

ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಲಿಂಗಾಯತ ಸಮಾಜ ಸಿಡಿದೆದಿದ್ದೆ. ಲಿಂಗಾಯತ ಸಮಾಜದ...

BJP ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ MLA S.R. ವಿಶ್ವನಾಥ್‌ ಅಸಮಾಧಾನ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (Greater Bengaluru Authority) ಅಡಿಯಲ್ಲಿ ಬರುವ ಐದು...