ಪ್ರಯಾಣಿಕರ ಇಳಿಕೆ ಹಿನ್ನೆಲೆಯಲ್ಲಿ ಆರು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಮೈಸೂರು-ತಿರುವನ್ವೇಲಿ ನಡುವೆ ಸಂಚರಿಸುವ (ರೈಲು ಸಂಖ್ಯೆ 06239) ರೈಲನ್ನು ಅಕ್ಟೋಬರ್ 27 ರಿಂದ ನವೆಂಬರ್ 24 ರವರೆಗೆ ರದ್ದುಗೊಳಿಸಲಾಗಿದೆ.
ತಿರುವನ್ವೇಲಿ-ಮೈಸೂರು ನಡುವೆ ಸಂಚರಿಸುವ (ರೈಲು ಸಂಖ್ಯೆ 06240) ರೈಲನ್ನು ಅಕ್ಟೋಬರ್ 28 ರಿಂದ ನವೆಂಬರ್ 25 ರವರೆಗೆ ರದ್ದುಗೊಳಿಸಲಾಗಿದೆ.
ಮೈಸೂರು-ಕರೈಕ್ಕುಡಿ ನಡುವೆ ಸಂಚರಿಸುವ (ರೈಲು ಸಂಖ್ಯೆ 06243) ರೈಲನ್ನು ಅಕ್ಟೋಬರ್ 30, ನವೆಂಬರ್ 6 ರಿಂದ ನವೆಂಬರ್ 29 ರವರೆಗೆ ರದ್ದುಗೊಳಿಸಲಾಗಿದೆ.
ಕರೈಕ್ಕುಡಿ -ಮೈಸೂರು ನಡುವೆ ಸಂಚರಿಸುವ (ರೈಲು ಸಂಖ್ಯೆ 06244) ರೈಲನ್ನು ಅಕ್ಟೋಬರ್ 31, ನವೆಂಬರ್ 11 ರಿಂದ ನವೆಂಬರ್ 29 ರವರೆಗೆ ರದ್ದುಗೊಳಿಸಲಾಗಿದೆ.
ಮೈಸೂರು-ರಾಮನಾಥಪುರಂ ನಡುವೆ ಸಂಚರಿಸುವ (ರೈಲು ಸಂಖ್ಯೆ 06237) ರೈಲನ್ನು ಅಕ್ಟೋಬರ್ 27 ರಂದು ರದ್ದುಗೊಳಿಸಲಾಗಿದೆ.
ರಾಮನಾಥಪುರಂ-ಮೈಸೂರು ನಡುವೆ ಸಂಚರಿಸುವ (ರೈಲು ಸಂಖ್ಯೆ 06238) ರೈಲನ್ನು ಅಕ್ಟೋಬರ್ 28ರಂದು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.


