ಔರಾಂಗಬಾದ್ ರೈಲ್ವೆ ನಿಲ್ದಾಣದ (Aurangabad Railway Station) ಹೆಸರನ್ನು ಬದಲಾವಣೆ ಮಾಡಲಾಗಿದೆ. ಔರಾಂಗಬಾದ್ ರೈಲು ನಿಲ್ದಾಣಕ್ಕೆ ಛತ್ರಪತಿ ಸಂಭಾಜಿನಗರ್ ರೈಲ್ವೆ ನಿಲ್ದಾಣ (CHHATRAPATI SAMBHAJINAGAR Railway Station) ಎಂದು ಹೊಸ ಹೆಸರು ಇಡಲಾಗಿದೆ.
ಈ ಬಗ್ಗೆ ದಕ್ಷಿಣ ಮಧ್ಯ ರೈಲ್ವೆ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಇನ್ನು ಮುಂದೆ ಮಹಾರಾಷ್ಟ್ರದಲ್ಲಿರುವ ಔರಂಗಾಬಾದ್ ರೈಲ್ವೆ ನಿಲ್ದಾಣವನ್ನು ಛತ್ರಪತಿ ಸಂಭಾಜಿನಗರ್ ರೈಲ್ವೆ ನಿಲ್ದಾಣ ಎಂದು ಕರೆಯುವಂತೆ ರೈಲ್ವೆ ಇಲಾಖೆ ಸೂಚಿಸಿದೆ.
ಛತ್ರಪತಿ ಸಂಭಾಜಿನಗರ ರೈಲ್ವೆ ನಿಲ್ದಾಣಕ್ಕೆ ಸಿಪಿಎಸ್‌ಎನ್ ಎಂಬ ಸ್ಟೇಷನ್ ಕೋಡ್‌ನ್ನೂ ಕೊಡಲಾಗಿದೆ. ಈ ಹಿಂದೆ ಈ ರೈಲ್ವೆ ನಿಲ್ದಾಣಕ್ಕೆ ಎಡಬ್ಲೂಬಿ ಎಂಬ ಸ್ಟೇಷನ್ ಕೋಡ್ ನೀಡಲಾಗಿತ್ತು.
ಹೆಸರು ಬದಲಾವಣೆಗೆ ಈ ಹಿಂದೆ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಗಾಡಿ ಸರ್ಕಾರ ಕ್ರಮ ಆರಂಭಿಸಿತ್ತು.
1900ರಲ್ಲಿ ಔರಾಂಗಬಾದ್ ರೈಲ್ವೆ ನಿಲ್ದಾಣವನ್ನು ತೆರೆಯಲಾಗಿತ್ತು. ಹೈದ್ರಾಬಾದ್‌ನ ಏಳನೇ ನಿಜಾಮನಾಗಿದ್ದ ಮಿರ್ ಒಸ್ಮಾನ್ ಅಲಿ ಖಾನ್ ಈ ನಿಲ್ದಾಣವನ್ನು ನಿರ್ಮಿಸಿದ್ದ.


