ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರಿಗೆ ಕೋರ್ಟ್ ಹಾಲ್‌ನಲ್ಲೇ ಶೂ ಎಸೆದ ವಕೀಲನ ಕೃತ್ಯವನ್ನು ಬೆಂಬಲಿಸಿದ ನಿವೃತ್ತ ಪೊಲೀಸ್ ಅಧಿಕಾರಿ, ಬಿಜೆಪಿ ಮುಖಂಡ ಭಾಸ್ಕರ್ ರಾವ್ ವಿರುದ್ಧ ದೂರು ಸಲ್ಲಿಕೆಯಾಗಿದೆ.
ಕಾನೂನಾತ್ಮಕವಾಗಿ ಮತ್ತು ಭಯಾನಕವಾಗಿ ತಪ್ಪಾಗಿದ್ದರೂ ಕೂಡಾ ಈ ವಯಸ್ಸಲ್ಲಿ ನೀವು ತೆಗೆದುಕೊಂಡ ನಿರ್ಧಾರ, ಪರಿಣಾಮಗಳ ಹೊರತಾಗಿಯೂ ಆ ನಿರ್ಧಾರಕ್ಕೆ ಬದ್ಧರಾಗಿ ಬದುಕಿದ ನಿಮ್ಮ ಧೈರ್ಯವನ್ನು ನಾವು ಮೆಚ್ಚುತ್ತೇನೆ ಎಂದು ಭಾಸ್ಕರ್ ರಾವ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
ಮಂಗಳವಾರದ ವಕೀಲ ರಾಕೇಶ್ ಕಿಶೋರ್ ನಡೆಸಿದ ಘಟನೆಯನ್ನು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಖಂಡಿಸಿದ್ದಾರೆ.
ಒಬ್ಬ ಮಾಜಿ ಪೊಲೀಸ್ ಅಧಿಕಾರಿಯಾಗಿ ಮತ್ತು ಹಲವಾರು ಹುದ್ದೆಗಳನ್ನು ಕಾನೂನನಡಿ ಮತ್ತು ಸಂವಿಧಾನದಡಿಯಲ್ಲಿ ಅಲಂಕರಿಸಿ ಕಾರ್ಯನಿರ್ವಹಿಸಿರುವ ವ್ಯಕ್ತಿ ಈ ರೀತಿ ದೇಶದ ಕಾನೂನಿಗೆ ಮತ್ತು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಅಪಮಾನಿಸಿದ್ದಾರೆ. ಈ ಕೂಡಲೇ ಭಾಸ್ಕರ್ ರಾವ್ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತ ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಕುಶಾಲ್ ಹರುವೇಗೌಡ ಅವರು ಪೊಲೀಸ್ ಇಲಾಖೆ ಮುಖ್ಯಸ್ಥ ಡಾ ಎಂ ಎ ಸಲೀಂ ಅವರಿಗೆ ಸಲ್ಲಿಸಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.


