ಅಫ್ಘಾನಿಸ್ತಾನದ ಬೌಲರ್ ಏಷ್ಯಾ ಉಪ ಖಂಡದಲ್ಲೇ ಯಾರೂ ಮಾಡಿರದ ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳನ್ನು ಪಡೆಯುವ ಮೂಲಕ ಅಫ್ಘಾನ್ ಬೌಲರ್ ರಶೀದ್ ಖಾನ್ ಇಷ್ಟು ವಿಕೆಟ್‌ಗಳನ್ನು ಪಡೆದ ತಮ್ಮ ತಂಡದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಟಿ-ಟ್ವೆಂಟಿ ಕ್ರಿಕೆಟ್‌ನಲ್ಲಿ 150ಕ್ಕಿಂತಲೂ ಅಧಿಕ ವಿಕೆಟ್ ಮತ್ತು ಏಕದಿನ ಪಂದ್ಯಗಳಲ್ಲಿ 200ಕ್ಕಿಂತಲೂ ಅಧಿಕ ವಿಕೆಟ್ ಪಡೆಯುವ ಮೂಲಕ ವೈಟ್ ಬಾಲ್ ಮಾದರಿಯಲ್ಲಿ ಈ ಸಾಧನೆ ಮಾಡಿದ ಏಷ್ಯಾದ ಮೊದಲ ಬೌಲರ್ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಅಬುಧಾಬಿಯಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 38 ರನ್‌ಗೆ 3 ವಿಕೆಟ್ ಪಡೆಯುವ ಮೂಲಕ ರಶೀದ್ ಈ ಎರಡು ಸಾಧನೆಗಳನ್ನು ಮಾಡಿದ್ದಾರೆ.


