ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅವರು ಅಸ್ಟ್ರೇಲಿಯಾದ ಜನಪ್ರಿಯ ಟಿ-ಟ್ವೆಂಟಿ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಆಡಲಿದ್ದಾರೆ.
ಈ ಮೂಲಕ 11 ವರ್ಷಗಳ ಬಳಿಕ ಬಿಗ್ ಬ್ಯಾಶ್‌ನಲ್ಲಿ ಮಿಚೆಲ್ ಸ್ಟಾರ್ಕ್ ಕಾಣಿಸಿಕೊಳ್ಳಲಿದ್ದಾರೆ.
ಡಿಸೆಂಬರ್ 14ರಿಂದ ಜನವರಿ 24ರವರೆಗೆ ಬಿಗ್‌ಬ್ಯಾಶ್ ಲೀಗ್ ನಡೆಯಲಿದೆ. ಜನವರಿ 8ರಂದು ಕೊನೆಯಾಗಲಿರುವ ಆಷ್ಯಸ್ ಸರಣಿ ಬಳಿಕ ಬಿಗ್ ಬ್ಯಾಶ್‌ನಲ್ಲಿ ಆಡುವುದಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ.
ಸಿಡ್ನಿ ಸಿಕ್ಸರ್ ತಂಡದ ಪರವಾಗಿ ಸ್ಟಾರ್ಕ್ ಅಖಾಡಕ್ಕೆ ಧುಮುಕಲಿದ್ದಾರೆ. 2014ರಲ್ಲಿ ಮಿಚೆಲ್ ಇದೇ ತಂಡದಲ್ಲಿ ಆಡಿದ್ದರು. 10 ಪಂದ್ಯಗಳಲ್ಲಿ 20 ವಿಕೆಟ್‌ಗಳನ್ನು ಪಡೆದಿದ್ದರು.


