ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ಶೂ ಎಸೆದ ವಕೀಲರ ವಿರುದ್ಧ ಬೆಂಗಳೂರಲ್ಲಿ ಎಫ್‌ಐಆರ್ ದಾಖಲಾಗಿದೆ.
ವಿಧಾನಸೌಧ ಠಾಣೆಯಲ್ಲಿ 71 ವರ್ಷದ ವಕೀಲ ರಾಕೇಶ್ ಕಿಶೋರ್ ವಿರುದ್ಧ 73 ವರ್ಷದ ವಕೀಲ ಭಕ್ತವತ್ಸಲ ಕೊಟ್ಟ ದೂರಿನಡಿ ಎಫ್‌ಐಆರ್ ದಾಖಲಾಗಿದೆ.
ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗದ ಮೂಲಕ ಸಾರ್ವಜನಿಕ ಸೇವಕನಿಗೆ ಆತನ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವುದು – ಬಿಎನ್‌ಎಸ್ ಕಲಂ 132, ವ್ಯಕ್ತಿಯನ್ನು ಅಗೌರವಿಸುವ ಸಲುವಾಗಿ ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ ಮಾಡುವುದು -ಬಿಎನ್‌ಎಸ್ ಕಲಂ 133ರಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.


