ಪಾಕಿಸ್ತಾನದ ಮೇಲೆ ಅಫ್ಘಾನಿಸ್ತಾನದ ಸೇನಾ ಪಡೆ (The Taliban forces) ನಡೆಸಿದ ಪ್ರತಿದಾಳಿಯಲ್ಲಿ ಪಾಕಿಸ್ತಾನದ 15 ಮಂದಿ ಸೈನಿಕರು ಹತರಾಗಿದ್ದಾರೆ.
ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್, ಪಾಕ್‌ಟಿಕಾದ ಮೇಲೆ ಪಾಕಿಸ್ತಾನ (Pakistan) ವೈಮಾನಿಕ ದಾಳಿ ನಡೆಸಿತ್ತು. ಪಾಕಿಸ್ತಾನದ ಈ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಅಫ್ಘಾನಿಸ್ತಾನ-ಪಾಕಿಸ್ತಾನ (Pakistan-Afghanistan) ಗಡಿಯಲ್ಲಿರುವ ಪಾಕಿಸ್ತಾನದ ಸೇನಾ ಚೌಕಿಗಳ ಮೇಲೆ ಅಫ್ಘಾನಿಸ್ತಾದ ಸೇನಾ ಪಡೆ ಪ್ರತಿ ದಾಳಿ ನಡೆಸಿತು.
ಹೆಲ್ಮಾಡ್, ಕಂದಹಾರ್, ಝಬೂಲ್, ಪಾಕ್‌ಟಿಕಾ, ಪಾಕ್‌ಟಿಯಾ, ಖೋಸ್ಟ್, ನಾನ್‌ಗರ್‌ಹರ್ ಮತ್ತು ಕುನಾರ್‌ಗಳಲ್ಲಿರುವ ಪಾಕಿಸ್ತಾನದ ಸೇನಾ ಚೌಕಿಗಳ ಮೇಲೆ ಪಾಕಿಸ್ತಾನ ಸೇನಾ ಪಡೆ ದಾಳಿ ನಡೆಸಿತ್ತು.
ತಡರಾತ್ರಿ ಅಫ್ಘಾನಿಸ್ತಾನ ನಡೆಸಿದ ಪ್ರತಿದಾಳಿಯಲ್ಲಿ ಮೂವರು ಪಾಕಿಸ್ತಾನದ ಸೈನಿಕರನ್ನು ಸೆರೆ ಹಿಡಿದಿದ್ದಾಗಿ ಅಪ್ಘಾನಿಸ್ತಾನದ ತಾಲಿಬಾನ್ ಆಡಳಿತದ ಸರ್ಕಾರ ಹೇಳಿಕೊಂಡಿದೆ.


