ತೋಟಗಾರಿಕೆ ಇಲಾಖೆಯಲ್ಲಿ ಐವರು ಜಂಟಿ ನಿರ್ದೇಶಕರು ಮತ್ತು 30 ಉಪ ನಿರ್ದೇಶಕರಿಗೆ ಬಡ್ತಿ ನೀಡಿ ರಾಜ್ಯ ಆದೇಶ ಹೊರಡಿಸಿದೆ.
ತೋಟಗಾರಿಕೆ ಇಲಾಖೆಯ ಬೆಳವಣಿಗೆಗೆ ಸರ್ವ ರೀತಿಯಲ್ಲೂ ಪೂರಕವಾಗುವಂತೆ 34 ಹುದ್ದೆಗಳನ್ನು ಉನ್ನತೀಕರಿಸುವಂತೆ ತೋಟಗಾರಿಕೆ ಇಲಾಖೆ ನಿರ್ದೇಶಕರು ಶಿಫಾರಸ್ಸು ಮಾಡಿದ್ದರು. 10 ರಿಂದ 13 ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಕಾರ್ಯನಿವರ್ಹಿಸುತ್ತಿರುವ ಬಡ್ತಿ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಆ ಶಿಫಾರಸ್ಸಿನಲ್ಲಿ ಹೇಳಿದ್ದರು.
ತೋಟಗಾರಿಕೆ ನಿರ್ದೇಶನಾಲಯದಲ್ಲಿರುವ ನಾಲ್ವರು ಜಂಟಿ ನಿರ್ದೇಶಕರಿಗೆ ಅಪರ ನಿರ್ದೇಶಕರಾಗಿ ಬಡ್ತಿ ನೀಡಲಾಗಿದೆ. 30 ಜಿಲ್ಲೆಗಳಲ್ಲಿರುವ ತೋಟಗಾರಿಕೆ ಉಪ ನಿರ್ದೇಶಕರಾಗಿ ಬಡ್ತಿ ನೀಡಲಾಗಿದೆ.
ತೋಟಗಾರಿಕೆ ಬೆಳೆಗಳ ವಿಸ್ತೀರ್ಣ, ಹೆಚ್ಚಳವಾಗುತ್ತಿರುವ ಇಲಾಖೆಯ ಅನುದಾನ, ಹೊಸದಾಗಿ ರೂಪುಗೊಂಡಿರುವ ಯೋಜನೆಗಳು, ಮತ್ತು ಕೆಳಹಂತ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಿದ್ದರೂ ಇಲಾಖೆಯ ಹಿರಿಯ ಶ್ರೇಣಿ ಹುದ್ದೆಗಳಾದ ಜಂಟಿ ನಿರ್ದೇಶಕರು ಮತ್ತು ಉಪ ನಿರ್ದೇಶಕರ ಹುದ್ದೆಗಳನ್ನು ಉನ್ನತೀಕರಿಸಲು ಮೂರು ದಶಕಗಳಿಂದ ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂದು ಆ ಶಿಫಾರಸ್ಸಿನಲ್ಲಿ ಹೇಳಲಾಗಿತ್ತು.
ಜಂಟಿ ನಿರ್ದೇಶಕರಿಂದ ಅಪರ ನಿರ್ದೇಶಕರಾಗಿ ಬಡ್ತಿ ಪಡೆದ ಹುದ್ದೆಗಳು:

ಉಪ ನಿರ್ದೇಶಕರಿಂದ ಜಂಟಿ ನಿರ್ದೇಶಕರಾಗಿ ಬಡ್ತಿ ಪಡೆದ ಹುದ್ದೆಗಳು:





