ಸೈಟ್ ಮತ್ತು ವಿಲ್ಲಾ ಬುಕ್ಕಿಂಗ್‌ಗೆ ಪಾವತಿ ಮಾಡಲಾಗಿದ್ದ ಹಣವನ್ನು ಬಡ್ಡಿ ಸಮೇತ ಪಾವತಿಸುವಂತೆಯೂ ಮತ್ತು ಕಿರುಕುಳ ಹಾಗೂ ಕಾನೂನು ಹೋರಾಟದ ಮೊತ್ತವನ್ನೂ ಪಾವತಿಸುವಂತೆಯೂ ಬೆಂಗಳೂರಿನ ರಿಯಲ್ ಎಸ್ಟೇಟ್ ಕಂಪನಿಗೆ ಗ್ರಾಹಕರ ಆಯೋಗ ಆದೇಶಿಸಿದೆ.
ಮರ್ಸುರಿ ಡೆವೆಲಪರ್ಸ್ ಪ್ರೈವೇಟ್ ಲಿಮಿಟೆಡ್‌ಗೆ (Merusri Developers Pvt Ltd) ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯ ಇತ್ಯರ್ಥ ಆಯೋಗ ಆದೇಶ ನೀಡಿದೆ.
ಬುಕ್ಕಿಂಗ್‌ಗಾಗಿ ಪಾವತಿಸಲಾಗಿದ್ದ 51 ಸಾವಿರ ರೂಪಾಯಿ ಮೊತ್ತದ ಜೊತೆಗೆ ವಾರ್ಷಿಕ 9ರಷ್ಟು ಬಡ್ಡಿಯೊಂದಿಗೆ ಬಾಕಿ ವಾಪಸ್ ಮಾಡುವಂತೆ ಸೂಚಿಸಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ (Kempegowda International Airport) ಸಮೀಪದಲ್ಲಿ ಟ್ರೇಡ್ ಚಾರ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಮಾಲೀಕರು ವಿಲ್ಲಾ ನಿರ್ಮಾಣಕ್ಕಾಗಿ ಜಾಗವನ್ನು ಹುಡುಕುತ್ತಿದ್ದರು. ಈ ವೇಳೆ ಮರ್ಸುರಿ ಡೆವೆಲಪರ್ಸ್ ಪ್ರೈವೇಟ್ ಲಿಮಿಟೆಡ್ ಜಾಹೀರಾತು ನೀಡಿದ್ದನ್ನು ನೋಡಿ ಕಳೆದ ವರ್ಷದ ಮಾರ್ಚ್‌ನಲ್ಲಿ ಮರ್ಸುರಿ ಸನ್‌ಲಿಟ್ ಗ್ರೋವ್ ಅನೆಕ್ಸ್‌ನಲ್ಲಿ ಜಾಗ ಮತ್ತು ವಿಲ್ಲಾ ಖರೀದಿಗೆ ನಿರ್ಧಾರ ಮಾಡಿದ್ದರು.
30*40 ಅಳತೆಯ ಸೈಟ್ ಸಂಖ್ಯೆ 11ನ್ನು 2024ರ ಆಗಸ್ಟ್ ವೇಳೆಗೆ ಹಸ್ತಾಂತರ ಮಾಡುವುದಾಗಿಯೂ ಮತ್ತು 2,460 ಚದರ ಅಡಿ ವೀಸ್ತೀರ್ಣದ 3ಬಿಹೆಚ್‌ಕೆ+1 ಕಚೇರಿ ಇರುವ ವಿಲ್ಲಾವನ್ನು 2025ರ ಆಗಸ್ಟ್ ಅಥವಾ ಡಿಸೆಂಬರ್‌ನಲ್ಲಿ ಹಸ್ತಾಂತರ ಮಾಡುವುದಾಗಿಯೂ ಮರ್ಸುರಿ ಡೆವೆಲಪರ್ಸ್ ಪ್ರೈವೇಟ್ ಲಿಮಿಟೆಡ್ ಒಪ್ಪಿಕೊಂಡಿತ್ತು.
ಇದಾದ ಬಳಿಕ ಜಾಗದ ಬಗ್ಗೆ ಕಾನೂನಾತ್ಮಕವಾಗಿ ಪೂರ್ವಾಪರ ವಿಚಾರಿಸುವ ಸಲುವಾಗಿ ಅಗತ್ಯ ದಾಖಲೆಗಳನ್ನು ನೀಡುವಂತೆ ಮರ್ಸುರಿ ಡೆವೆಲಪರ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಮನವಿಯನ್ನು ಮಾಡಿದ್ದರು. ಆದರೆ ಮಾರಾಟ ಒಪ್ಪಂದಕ್ಕೆ ಬರುವ ಮೊದಲು ಒಟ್ಟು ಮೊತ್ತದ ಶೇಕಡಾ 25ರಷ್ಟನ್ನು ಪಾವತಿ ಮಾಡಬೇಕೆಂದು ಮರ್ಸುರಿ ಡೆವೆಲಪರ್ಸ್ ಪ್ರೈವೇಟ್ ಲಿಮಿಟೆಡ್ ಹೇಳಿತ್ತು.
ಮರ್ಸುರಿ ಡೆವೆಲಪರ್ಸ್ ಪ್ರೈವೇಟ್ ಲಿಮಿಟೆಡ್‌ನ ಈ ವರ್ತನೆಯಿಂದ ಕಿರುಕುಳ ಮತ್ತು ಮಾನಸಿಕ ಹಿಂಸೆ ಒಳಗಾಗಿದ್ದಾರೆ ಎಂದಿರುವ ಆಯೋಗ 20 ಸಾವಿರ ರೂಪಾಯಿ ಮೊತ್ತವನ್ನೂ, ಕಾನೂನು ಹೋರಾಟದ ಖರ್ಚಿನ ಭಾಗವಾಗಿ 10 ಸಾವಿರ ರೂಪಾಯಿ ಮೊತ್ತವನ್ನು ಗ್ರಾಹಕರಿಗೆ ಪಾವತಿಸುವಂತೆ ಮರ್ಸುರಿ ಡೆವೆಲಪರ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಸೂಚಿಸಿದೆ.


