ಕರ್ನಾಟಕ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ ವೈ ನಂಜೇಗೌಡಗೆ ಭಾಗಶಃ ಹಿನ್ನಡೆಯಾಗಿದೆ, ಭಾಗಶಃ ನಿರಾಳರಾಗಿದ್ದಾರೆ.
ಮಾಲೂರು ಶಾಸಕರಾಗಿ ಕೈ ವೈ ನಂಜೇಗೌಡ ಆಯ್ಕೆಯನ್ನು ಅಸಿಂಧುಗೊಳಿಸಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶದ ಭಾಗಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದ್ದು, ಕೆ ವೈ ನಂಜೇಗೌಡ ಕರ್ನಾಟಕ ರಾಜ್ಯ ವಿಧಾನಸಭೆಯ ಶಾಸಕರಾಗಿ ಮುಂದುವರಿಯಲಿದ್ದಾರೆ ಎಂದು ಹೇಳಿದೆ.
ಆದಾಗ್ಯೂ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಚುನಾವಣಾ ಆಯೋಗ ಪಾಲಿಸುವಂತೆಯೂ ಮರು ಎಣಿಕೆಯನ್ನು ನಡೆಸುವಂತೆಯೂ ಮತ್ತು ಆ ಮರು ಮತ ಎಣಿಕೆಯ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸುವಂತೆಯೂ ಮತ್ತು ನ್ಯಾಯಾಲಯದ ಅನುಮತಿಯ ಹೊರತು ಮರು ಮತ ಎಣಿಕೆಯನ್ನು ಆದೇಶವನ್ನು ಬಹಿರಂಗಪಡಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಇವತ್ತು ನೀಡಿದ ಆದೇಶದಲ್ಲಿ ಹೇಳಿದೆ.
ಮುಂದಿನ ವಿಚಾರಣೆಯನ್ನು ಸುಪ್ರೀಂಕೋರ್ಟ್ ನವೆಂಬರ್ 24ಕ್ಕೆ ಮುಂದೂಡಿದೆ.



