ಐವರು KAS ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ರಾಘವೇಂದ್ರ ಟಿ ಅವರನ್ನು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಮಹೇಶ್ ಬಿ.ಆರ್. ಅವರನ್ನು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಮುಖ್ಯ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಸುರೇಖಾ ಅವರನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ(KKRDB)ಯ ಉಪ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.
ಡಾ.ಕೆ. ದಾಕ್ಷಾಯಿಣಿ ಅವರನ್ನು ಬೆಂಗಳೂರು ಪೂರ್ವ ನಗರ ಪಾಲಿಕೆಯ ಮಹದೇವಪುರ ವಲಯದ ಜಂಟಿ ಆಯುಕ್ತರು ಮತ್ತು ಬೆಂಗಳೂರು ಪೂರ್ವ ವಲಯದ ಕಂದಾಯ ಅಪರ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಡಾ.ಬಿ.ಸುಧಾ ಅವರನ್ನು ಬೆಂಗಳೂರು ಪೂರ್ವ ನಗರ ಪಾಲಿಕೆಯ ಕೆ ಆರ್ ಪುರಂ ವಲಯದ ಜಂಟಿ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಕೃಷ್ಣಕುಮಾರ್, ಎಂ.ಪಿ. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿರುವ ಇವರಿಗೆ ಮಂಡ್ಯ ವಿಶ್ವವಿದ್ಯಾಲಯದ ಕುಲ ಸಚಿವ ಹುದ್ದೆಯನ್ನು ಪ್ರಭಾರಿಯಾಗಿ ನೀಡಲಾಗಿದೆ.
ಶೈಲಜಾ ಪ್ರಿಯದರ್ಶಿನಿ, ಆಡಳಿತಾಧಿಕಾರಿ, ಅಡೊಕೇಟ್ ಜನರಲ್‌ರವರ ಕಛೇರಿ, ಕರ್ನಾಟಕ ಉಚ್ಚ ನ್ಯಾಯಾಲಯ ಕಟ್ಟಡ, ಬೆಂಗಳೂರು ಇವರನ್ನು ಸಕ್ಷಮ ಪ್ರಾಧಿಕಾರ, Petronet MHB Limited, ಬೆಂಗಳೂರು ಇಲ್ಲಿನ ಹುದ್ದೆಗೆ ಅಧಿಕ ಪ್ರಭಾರದಲ್ಲಿಡಲಾಗಿದೆ


