ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA)ದಲ್ಲಿ ನಡೆದಿರುವ ನಿವೇಶನಗಳ ಹಂಚಿಕೆ ಮತ್ತು ನಿವೇಶನಗಳ ಹಂಚಿಕೆ ಮೂಲಕ ನಡೆದಿರುವ ಅಕ್ರಮ ಹಣ ವರ್ಗಾವಣೆ (PMLA) ಬಗ್ಗೆ ಜಾರಿ ನಿರ್ದೇಶನಾಲಯ (Directorate of Enforcement (ED) ತನಿಖೆ ಮತ್ತು ಜಪ್ತಿ ಕೈಗೊಂಡಿರುವ ಹೊತ್ತಲ್ಲೇ ಮುಡಾದಲ್ಲೇ ನಡೆದಿರುವ ಮತ್ತೊಂದು ಅತೀ ದೊಡ್ಡ CA ಸೈಟ್ ಅಕ್ರಮದ ಬಗ್ಗೆ ಪ್ರತಿಕ್ಷಣ ಎರಡನೇ ತನಿಖಾ ವರದಿಯನ್ನು ಪ್ರಕಟಿಸುತ್ತಿದೆ.
ಮೈಸೂರು (Mysuru) ಜಿಲ್ಲೆಯ ಹುಣಸೂರು ತಾಲೂಕಿನ ರತ್ನಪುರಿ, ಸಾಧನಾಪುರದಲ್ಲಿ ವಿಳಾಸ ಹೊಂದಿರುವ ವಿಶ್ವಶಾಂತಿ ಟ್ರಸ್ಟ್‌ಗೆ 1978ರ ಮಾರ್ಚ್ 13ರಂದು ನಾಗರಿಕ ನಿವೇಶನವನ್ನು (Civic Amenity Site) ಹಂಚಿಕೆ ಮಾಡಲಾಗಿತ್ತು.
ಮೈಸೂರು ನಗರದ ಹೃದಯ ಭಾಗ ಸರಸ್ವತಿಪುರಂನಲ್ಲಿರುವ ತೊಣಚಿಕೊಪ್ಪಲು ಬಡಾವಣೆಯಲ್ಲಿ ಬರೋಬ್ಬರೀ 56,520 ಅಡಿ ವೀಸ್ತೀರ್ಣದ ಸೈಟ್ ಸಂಖ್ಯೆ P8/ಡಿಯನ್ನು ವಿಶ್ವಶಾಂತಿ ಸಂಸ್ಥೆಗೆ ಮಂಜೂರು ಮಾಡಲಾಗಿತ್ತು.
30 ವರ್ಷಗಳ ಗುತ್ತಿಗೆ ಆಧಾರದಲ್ಲಿ ಮಂಜೂರಾಗಿದ್ದ ಈ ನಾಗರಿಕ ನಿವೇಶನವನ್ನು ಮಾರ್ಚ್ 5, 1982ರಂದು ವಿಶ್ವಶಾಂತಿ ಸಂಸ್ಥೆಗೆ ಕರಾರು ಮಾಡಿಸಿಕೊಡಲಾಯಿತು. ಇದಾದ ಬಳಿಕ ಜನವರಿ 23, 1984ರಲ್ಲಿ ಈ ನಾಗರಿಕ ನಿವೇಶನವನ್ನು ವಿಶ್ವಶಾಂತಿ ಸಂಸ್ಥೆಗೆ ಸ್ವಾಧೀನಾನುಭವಕ್ಕೆ ನೀಡಲಾಯಿತು.
56, 620 ಚದರ ಅಡಿ ವಿಸ್ತೀರ್ಣದ ನಾಗರಿಕ ನಿವೇಶನವು ಮುಖ್ಯಮಂತ್ರಿ ಸಿದ್ದರಾಮಯ್ಯನವರ (Chief Minister Siddaramaiah) ಪತ್ನಿ ಪಾರ್ವತಿಯವರಿಗೆ ಪರಿಹಾರದ ರೂಪದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಮಂಜೂರು ಮಾಡಿದ್ದ 14 ಸೈಟ್‌ಗಳ ಒಟ್ಟು ವೀಸ್ತೀರ್ಣಕ್ಕಿಂತಲೂ ಅಧಿಕ. ಪಾರ್ವತಿ ಸಿದ್ದರಾಮಯ್ಯಗೆ ಪರಿಹಾರ ರೂಪದಲ್ಲಿ ನೀಡಲಾಗಿದ್ದ 14 ಸೈಟ್‌ಗಳ ಒಟ್ಟು ವೀಸ್ತೀರ್ಣ 37,190 ಚದರ ಅಡಿಗಳು. ಪಾರ್ವತಿ ಸಿದ್ಧರಾಮಯ್ಯಗೆ ಮುಡಾ (MUDA) ಪರಿಹಾರ್ಥ ಕೊಟ್ಟಿದ್ದ ನಿವೇಶನಕ್ಕಿಂತಲೂ 19,340 ಚದರಡಿ ಅಧಿಕ ವೀಸ್ತೀರ್ಣದ (37,190+19,430=56,620 ಚದರ ಅಡಿ) ನಾಗರಿಕ ನಿವೇಶನವನ್ನು ಮುಡಾ ವಿಶ್ವಶಾಂತಿ ಸಂಸ್ಥೆಗೆ ಮಂಜೂರು ಮಾಡಿತ್ತು.
1978ರಲ್ಲಿ ವಿಶ್ವಶಾಂತಿ ಸಂಸ್ಥೆಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮಂಜೂರು ಮಾಡಿತ್ತು. ಶೈಕ್ಷಣಿಕ ಉದ್ದೇಶಕ್ಕಾಗಿ ಮಂಜೂರಾದ ನಾಗರಿಕ ನಿವೇಶನವನ್ನು 1982ರಲ್ಲಿ ಕರಾರು ಮಾಡಿಕೊಂಡು 1984ರಲ್ಲಿ ವಿಶ್ವಶಾಂತಿ ಸಂಸ್ಥೆಗೆ ಸ್ವಾಧೀನಾನುಭವ ಕೊಟ್ಟ ಕೇವಲ 13 ವರ್ಷದಲ್ಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ವಿಶ್ವಶಾಂತಿ ಸಂಸ್ಥೆ ಉಲ್ಲಂಘಿಸುತ್ತದೆ.
1997ರ ಅಕ್ಟೋಬರ್ 18ರಂದು ವಿಶ್ವಶಾಂತಿ ಸಂಸ್ಥೆಗೆ ಮಂಜೂರಾದ ಒಟ್ಟು ನಾಗರಿಕ ನಿವೇಶನದ ವೀಸ್ತೀರ್ಣ 56,620ರಲ್ಲಿ 53*228ನ್ನಷ್ಟು ವೀಸ್ತೀರ್ಣದಷ್ಟು ಭಾಗ ( ಅಂದರೆ 12,048 ಚದರ ಅಡಿಯಷ್ಟು) ಜಾಗವನ್ನು ನಗರಾಭಿವೃದ್ಧಿ ಇಲಾಖೆ ಆಧೀನ ಕಾರ್ಯದರ್ಶಿಯವರು ಸಾರ್ವಜನಿಕ ಮತ್ತು ಅರೆ ಸಾರ್ವಜನಿಕ ಉಪಯೋಗದಿಂದ ವಾಣಿಜ್ಯ ಉಪಯೋಗಕ್ಕಾಗಿ ಭೂ ಬದಲಾವಣೆಯನ್ನು ಮಾಡಿ ಆದೇಶ ಹೊರಡಿಸುತ್ತಾರೆ.
30 ವರ್ಷಗಳ ಕರಾರು ಒಪ್ಪಂದದ ಷರತ್ತುಗಳನ್ನು ಮುರಿದು ವಾಣಿಜ್ಯ ಬಳಕೆಗೆ ಅವಕಾಶ ಮಾಡಿಕೊಡುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯಾಗಿರುತ್ತಾರೆ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುತ್ತಾರೆ.
ಖಾಸಗಿ ಸಂಸ್ಥೆಗಳಿಗೆ ನಾಗರಿಕ ನಿವೇಶನಗಳನ್ನು ಹಂಚುವ ವೇಳೆ ನಾಗರಿಕ ನಿವೇಶನಗಳನ್ನು ಬಯಸುವ ಸಂಸ್ಥೆಗಳು ಯಾವ ಉದ್ದೇಶಕ್ಕಾಗಿ ನಾಗರಿಕ ನಿವೇಶನಗಳನ್ನು ಕೇಳುತ್ತಿದ್ದೇವೆ ಎಂದು ದಾಖಲೆ ಸಲ್ಲಿಸುವುದು ಕಡ್ಡಾಯ. ಅರ್ಜಿ ನಮೂನೆಯಲ್ಲಿ Purpose of Civic Amenity site ಎಂಬ ಪ್ರತ್ಯೇಕ ಕಲಂನ್ನು ಕೂಡಾ ಇದೇ ಉದ್ದೇಶಕ್ಕಾಗಿ ಇಡಲಾಗಿದೆ.
ಅಂತಹ ಖಾಸಗಿ ಸಂಸ್ಥೆಗಳು ಸಲ್ಲಿಸುವ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅವುಗಳೇ ಉಲ್ಲೇಖಿಸಿದ ನಿರ್ದಿಷ್ಟ ಉದ್ದೇಶಕ್ಕಷ್ಟೇ ಆ ನಾಗರಿಕ ನಿವೇಶನಗಳನ್ನು ರಾಜ್ಯ ಸರ್ಕಾರ ಮಂಜೂರು ಮಾಡಬಹುದಾಗಿದೆ. ಒಂದು ಬಾರಿ ಯಾವ ಉದ್ದೇಶಕ್ಕಾಗಿ ನಾಗರಿಕ ನಿವೇಶನ ಮಂಜೂರು ಮಾಡಲಾಯಿತೋ ಅದನ್ನು ಹೊರತುಪಡಿಸಿ ಬೇರೆ ಯಾವ ಉದ್ದೇಶಗಳಿಗೂ/ವಾಣಿಜ್ಯ ಉದ್ದೇಶಗಳಿಗೂ ಸರ್ಕಾರ ಮಂಜೂರು ಮಾಡಿದ ನಾಗರಿಕ ನಿವೇಶನವನ್ನು ಆ ಖಾಸಗಿ ಸಂಸ್ಥೆ ಬಳಸುವಂತಿಲ್ಲ.
The lessee shall exclusively use the site for providing the civic amenity for purpose which it is allotted.((Allotment of Civic Amenity sites) Rules)
ಖಾಸಗಿ ಸಂಸ್ಥೆಗಳಿಗೆ ನಾಗರಿಕ ನಿವೇಶನ ಹಂಚಿಕೆ ವೇಳೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಆ ಖಾಸಗಿ ಸಂಸ್ಥೆ ಮಾಡಿಕೊಳ್ಳುವ ಕರಾರಿನ ಒಪ್ಪಂದದಲ್ಲೂ ನಿರ್ದಿಷ್ಟ ಉದ್ದೇಶಕ್ಕಷ್ಟೇ ನಿವೇಶನವನ್ನು ಬಳಸಿಕೊಳ್ಳುವಂತೆ ಕಠಿಣ ಷರತ್ತುಗಳನ್ನು ಹಾಕಲಾಗಿದೆ.
That the Lessee applied for the lease of Civic amenity site to the lessor for the benefit and use of the said site for the construction of……………….. for the specific purpose mentioned here under the lessor having agreed to for lease of the scheduled land to the lessee subject to the terms and conditions mentioned hereafter. That the lease property which is more fully described in the schedule to this agreement has been leased for a period of Thirty years commencing from the date of issue of the Possession Certificate.
That the lessee shall use the schedule property only for the purpose of construction of ………………. and for providing Civic Amenity and shall not use it for any other purpose.
ನಾಗರಿಕ ನಿವೇಶನ ಹಂಚಿಕೆಗೆ ಸಂಬಂಧಿಸಿ ಸರ್ಕಾರವೇ ಮಾಡಿರುವ ನಿಯಮಗಳಲ್ಲಿ ಹಾಕಲಾಗಿರುವ ಷರತ್ತನ್ನು ಗಮನಿಸಿದ್ರೆ ಶೈಕ್ಷಣಿಕ ಉದ್ದೇಶಕ್ಕಾಗಿ ವಿಶ್ವಶಾಂತಿ ಸಂಸ್ಥೆಗೆ ಮಂಜೂರಾಗಿರುವ 1 ಎಕರೆ 11 ಗುಂಟೆಯಷ್ಟು ಭೂಮಿಯಲ್ಲಿ ಸಿಗ್ಮಾ ಹೆಸರಿ ಬೃಹತ್ ಖಾಸಗಿ ಆಸ್ಪತ್ರೆಯನ್ನು ನಿರ್ಮಾಣ ಮಾಡುತ್ತಿರುವುದು ಗಂಭೀರ ಸ್ವರೂಪದ ಅಕ್ರಮವಾಗಿದೆ.


